ಕಾಲೇಜಿನಿಂದ ಮರಳುತ್ತಿದ್ದ ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

Published : Jan 18, 2025, 08:41 PM IST
ಕಾಲೇಜಿನಿಂದ ಮರಳುತ್ತಿದ್ದ ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಸಾರಾಂಶ

ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಕಾಲೇಜಿನಿಂದ ವಾಪಸ್ ಆಗುತ್ತಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಪೋಷಕರು ಆಕ್ರಂದನ ಎಂತವರ ಕಣ್ಣು ತೇವಗೊಳಿಸುತ್ತೆ.

ತುಮಕೂರು(ಜ.18)  ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಮೈಥಿಲಿ ತೀವ್ರ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ತುಮಕೂರಿನ ಪಾವಗಡ ಪಟ್ಟಣದಲ್ಲಿ ಘಟನೆ ನಡೆದಿದೆ. ಶ್ರೀ ವೈ.ಈ ರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ಒದುತ್ತಿದ್ದ ಮೈಥಿಲಿ ಇಂದು ತರಗತಿ ಮುಗಿಸಿ ಮರಳುತ್ತಿದ್ದಾಗ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಇಂದು ಶ್ರೀ ವೈ.ಈ ರಂಗಯ್ಯಶೆಟ್ಟಿ ಕಾಲೇಜಿನಲ್ಲಿ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದೆ. ಕುಸಿದು ಬಿದ್ದ ಮೈಥಿಲಿಯನ್ನು ಸಹಪಾಠಿಗಳು ಸೇರಿದಂತೆ ಸ್ಥಳೀಯರು ತಕ್ಷಣವೇ ಪಾವಗಡ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮದ್ಯದಲ್ಲೇ ಮೈಥಿಲಿ ಮೃತಪಟ್ಟಿದ್ದಾರೆ. ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಮಾಹಿತಿ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನುಕಳೆದುಕೊಂಡ ಪೋಷಕರು ಆಸ್ಪತ್ರೆಯಲ್ಲೇ ಮಗಳನ್ನು ಬದುಕಿಸಿಕೊಡುವಂತೆ ವೈದ್ಯರ ಮುಂದೆ ಗೋಳಾಡಿದ್ದಾರೆ. ಇತ್ತ ಮೈಥಲಿ ಸ್ನೇಹಿತರು ಕಣ್ಣೀರು ಹಾಕಿದ್ದಾರೆ.
 

PREV
Read more Articles on
click me!

Recommended Stories

ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ
ಮನ್‌ ಕೀ ಬಾತ್: ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ