ಟೋಕಿಯೋ ಪ್ಯಾರಾಲಿಂಪಿಕ್ಸ್‌: ಚಿನ್ನದ ಪದಕ ಬೇಟೆಯಾಡಿದ ಅವನಿ..!

By Suvarna News  |  First Published Aug 30, 2021, 8:31 AM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೆಖಾರಾ

* 10 ಮೀಟರ್‌ ಏರ್‌ರೈಫಲ್‌ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ಅವನಿ

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅತಿ ಕಿರಿಯ ಅಥ್ಲೀಟ್‌ ಅವನಿ 


ಟೋಕಿಯೋ(ಆ.30): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಅವನಿ ಲೆಖಾರಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ 249.6 ಅಂಕಗಳನ್ನು ಕಲೆಹಾಕುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ತಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಜಯಿಸಿದ ಮೊದಲ ಪ್ತಾರಾಥ್ಲೀಟ್‌ ಎನ್ನುವ ಗೌರವಕ್ಕೆ ಅವನಿ ಪಾತ್ರರಾಗಿದ್ದಾರೆ.

ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ. 

Avani Lekhara🇮🇳 has won in - R2 - Women's 10m Air Rifle Standing SH1 at the

— #Tokyo2020 (@Tokyo2020)

It's a Golden Day!! wins India's First medal in & it's a !!! 🥇 Avani has equalled the World Record to achieve this feat!✨ This is unparalleled, first Indian Woman in or ever to win GOLD. pic.twitter.com/hxJoP1edCi

— Paralympic India 🇮🇳 #Cheer4India 🏅 #Praise4Para (@ParalympicIndia)

Latest Videos

ನಾಲ್ಕನೇ ಪದಕ: ಭಾನುವಾರ ಭಾರತ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಜಯಿಸಿತ್ತು. ಇದೀಗ ಅವನಿ ಚಿನ್ನದ ಪದಕ ಜಯಿಸುವುದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 4ನೇ ಪದಕ ಜಯಿಸಿದಂತಾಗಿದೆ.
 

click me!