ಟೋಕಿಯೋ 2020: ಫೈನಲ್‌ಗೇರುವ ತವಕದಲ್ಲಿ ಬಾಕ್ಸಿಂಗ್‌ ತಾರೆ ಲೊವ್ಲಿನಾ ಬೊರ್ಗೊಹೈನ್‌

By Suvarna News  |  First Published Aug 4, 2021, 10:45 AM IST

* ಭಾರತದ ಬಾಕ್ಸರ್‌ ಲೊವ್ಲಿನಾ ಬೊರ್ಗೊಹೈನ್‌ ಮೇಲೆ ಎಲ್ಲರ ಚಿತ್ತ

* ಫೈನಲ್‌ಗೇರುವ ಕನಸು ಕಾಣುತ್ತಿದ್ದಾರೆ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌

* ಫೈನಲ್‌ಗೇರಿದರೆ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯಲಿರುವ ಅಸ್ಸಾಂ ಬಾಕ್ಸರ್


ಟೋಕಿಯೋ(ಆ.04): ಈಗಾಗಲೇ ಪದಕ ಖಚಿತಪಡಿಸಿಕೊಂಡಿರುವ ಭಾರತದ ಯುವ ಬಾಕ್ಸಿಂಗ್‌ ತಾರೆ ಲೊವ್ಲಿನಾ ಬೊರ್ಗೊಹೈನ್‌‌, ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಬಾಕ್ಸರ್‌ ಎನ್ನುವ ದಾಖಲೆ ಬರೆಯಲು ಕಾತರಿಸುತ್ತಿದ್ದಾರೆ. ಬುಧವಾರ ಮಹಿಳೆಯರ 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್‌ ಹಾಲಿ ವಿಶ್ವ ಚಾಂಪಿಯನ್‌ ಟರ್ಕಿಯ ಬುಸಾನೆಜ್‌ ಸುರ್ಮೆನೆಲಿ ವಿರುದ್ಧ ಸೆಣಸಲಿದ್ದಾರೆ.

ಲೊವ್ಲಿನಾ ಬೊರ್ಗೊಹೈನ್‌ ಹಾಗೂ ಸುರ್ಮೆನೆಲಿ ಇಬ್ಬರೂ ಈ ವರೆಗೂ ಪರಸ್ಪರ ಎದುರಾಗಿಲ್ಲ. ಹೀಗಾಗಿ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. 23 ವರ್ಷದ ಸುರ್ಮೆನೆಲಿ ಈ ವರ್ಷ 2 ಅಂ.ರಾ.ಟೂರ್ನಿಗಳಲ್ಲಿ ಚಿನ್ನದ ಪದಕ ಗೆದ್ದಿದ್ದು, ಲೊವ್ಲಿನಾಗೆ ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

Tap to resize

Latest Videos

ಟೋಕಿಯೋ 2020: ಲೊವ್ಲಿನಾ ಬೊರ್ಗೊಹೈನ್ ಊರಿಗೆ ಹೊಸ ರಸ್ತೆ ಗಿಫ್ಟ್‌ ಕೊಟ್ಟ ಶಾಸಕ..!

23 ವರ್ಷದ ಅಸ್ಸಾಂ ಮೂಲದ ಲೊವ್ಲಿನಾ ಬೊರ್ಗೊಹೈನ್‌, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿರುವ ಭಾರತದ ಕೇವಲ 3ನೇ ಬಾಕ್ಸರ್‌ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೊದಲು ವಿಜೇಂದರ್‌ ಸಿಂಗ್‌ (2008) ಹಾಗೂ ಮೇರಿ ಕೋಮ್‌ (2012) ಕಂಚಿನ ಪದಕವನ್ನು ಜಯಿಸಿದ್ದರು. ಲವ್ಲೀನಾ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲೇ ಸೆಮೀಸ್‌ಗೇರಿದ್ದು, ಫೈನಲ್‌ಗೇರುವ ಗುರಿ ಹೊಂದಿದ್ದಾರೆ. ಒಂದೊಮ್ಮೆ ಸೆಮೀಸ್‌ನಲ್ಲಿ ಸೋತರೆ, ಲವ್ಲೀನಾಗೆ ಕಂಚಿನ ಪದಕ ದೊರೆಯಲಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಚೈನೀಸ್‌ ತೈಪೆಯ ನೀಯೆನ್‌-ಚಿನ್‌ ಚೆನ್‌ ವಿರುದ್ಧ ಗೆದ್ದಿದ್ದ ಲವ್ಲೀನಾ, ತಾವು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾಗಿ ಹೇಳಿಕೊಂಡಿದ್ದರು.

ಪಂದ್ಯ: ಬೆಳಗ್ಗೆ 11ಕ್ಕೆ
ನೇರ ಪ್ರಸಾರ: ಸೋನಿ ಟೆನ್‌/ಸೋನಿ ಸಿಕ್ಸ್‌
 

click me!