ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್‌ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

Published : Jul 27, 2021, 11:07 AM ISTUpdated : Jul 27, 2021, 11:28 AM IST
ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್‌ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ಸಾರಾಂಶ

ನನಗೆ ಮೊದಲು ಪಿಝಾ ತಿನ್ನಬೇಕು. ಪಿಝಾ ತಿನ್ನದೆ ಬಹಳಷ್ಟು ಕಾಲವಾಯ್ತು.. ಇವತ್ತು ಹೆಚ್ಚು ಪಿಝಾ ತಿನ್ನಬೇಕು ಎಂದು ಚಾನು ಹೇಳಿದ್ದೇ ತಡ, ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ಇಡೀ ದೇಶಕ್ಕೆ ಖುಷಿ ತರಬೇಕಾದರೆ ಮೀರಾಬಾಯಿ ಚಾನು ಅವರಂಥ ಅಥ್ಲೀಟ್‌ಗಳು ಬಹಳಷ್ಟು ವಿಚಾರದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಇವುಗಳಲ್ಲಿ ಆಹಾರವೂ ಒಂದು. ಎಷ್ಟೇ ಇಷ್ಟವಿದ್ದರೂ ತಮ್ಮ ನೆಚ್ಚಿನ ಆಹಾರ ತಿನ್ನುವ ಹಾಗಿರುವುದಿಲ್ಲ. ಡಯೆಟ್ ಫಾಲೋ ಮಾಡಲೇಬೇಕಾಗುತ್ತದೆ.

ಬೆಳ್ಳಿ ಪದಕ ಗೆದ್ದು ಭಾರತೀಯರಿಗೆ ಹೆಮ್ಮೆ ತಂದ ಮೀರಾಬಾಯಿ ಚಾನು ಅವರ ಚಿಕ್ಕ ಆಸೆ ಏನಿತ್ತು ಗೊತ್ತಾ ? ಒಲಿಂಪಿಕ್ಸ್‌ನಲ್ಲಿ ಬೆಳ್ಳಿಗೆದ್ದ ಚಾನುಗೆ ಪಿಝಾ ತಿನ್ನೋಕೆ ಭಾರೀ ಆಸೆ ಆಗಿದೆ. ಭಾರತಕ್ಕೆ ಮರಳಿದ್ದೇ, ಬಹಳಷ್ಟು ದಿನದಿಂದ ಪಿಝಾ ತಿಂದಿಲ್ಲ, ಇವತ್ತು ಪಿಝಾ ತಿನ್ನಬೇಕು. ಸ್ವಲ್ಪ ಹೆಚ್ಚೇ ತಿನ್ನಬೇಕು ಎಂದು ಹೇಳಿದ್ದಾರೆ.

ಫಿಜ್ಜಾ ಆರ್ಡರ್ ಮಾಡಲು ಹೋಗಿ 65 ಸಾವಿರ ಕಳಕೊಂಡ ಉದ್ಯಮಿ!

ಫನ್ನಿ ಅನಿಸಬಹುದು. ಆದರೆ ತಮ್ಮ ನೆಚ್ಚಿನ ಆಹಾರವನ್ನು ಬಹಳ ದೀರ್ಘ ಸಮಯಕ್ಕೆ ತ್ಯಜಿಸುವುದು ಎಷ್ಟು ಕಷ್ಟ ಅಲ್ಲವೇ.. ಚಾನು ಮಿಸ್ ಮಾಡ್ಕೊಂಡಿದ್ದು, ಟೇಸ್ಟಿ ಪಿಝಾವನ್ನು. ಮೀರಾಬಾಯಿಗೆ ಶುಭಾಶಯ ತಿಳಿಸಿದ ಡೊಮಿನೊಸ್ ಅವರಿಗೆ ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದೆ.

ಡೊಮಿನೊಸ್ ಇಂಡಿಯಾ ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಾನು ಅವರಿಗೆ ಜೀವಮಾನದ ಉಚಿತ ಪಿಝಾ ಕುರಿತು ವಿಶೇಷ ಘೋಷಣೆ ಮಾಡಿದ ನಂತರ, ರೆಸ್ಟೋರೆಂಟ್ ತನ್ನ ಭರವಸೆಯನ್ನು ಈಡೇರಿಸಿದೆ. ಡೊಮಿನೊಸ್ ಇಂಫಾಲ್ ತಂಡವು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಪಿಜ್ಜಾವನ್ನು ತಲುಪಿಸಿದೆ. ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ನಾವು ಈ ಅದ್ಭುತ ಕ್ಷಣವನ್ನು ಮೀರಾಬಾಯಿ ಚಾನು ಅವರ ಪ್ರೀತಿಪಾತ್ರರೊಡನೆ ಹಂಚಿಕೊಳ್ಳುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಅವರು ಭಾರತೀಯರ ಮುಖದಲ್ಲಿ ಒಂದು ನಗು ತಂದರು.

ನಮ್ಮ ಡೊಮಿನೊಸ್ ಇಂಫಾಲ್ ತಂಡವು ಅವರ ಕುಟುಂಬದೊಂದಿಗೆ ಯಶಸ್ಸನ್ನು ಆಚರಿಸಲು ಮೆಚ್ಚುಗೆಯ ಸಂಕೇತದೊಂದಿಗೆ ಬಂದಿದೆ ಎಂದು ಡೊಮಿನೊಸ್ ಇಂಡಿಯ ಟ್ವೀಟ್ ಮಾಡಿದೆ,

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ