* ವಿಶ್ವದ ನಂ.1 ಕುಸ್ತಿಪಟು ವಿನೇಶ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
* ಫೈನಲ್‌ಗೇರುವ ಭಾರತದ ಕುಸ್ತಿಪಟು ವಿನೇಶ್ ಕನಸು ಮತ್ತೊಮ್ಮೆ ಭಗ್ನ
* ಅದೃಷ್ಟ ಕೈಹಿಡಿದರೆ ಕಂಚಿನ ಪದಕ ಗೆಲ್ಲುವ ಅವಕಾಶ ವಿನೇಶ್‌ಗಿದೆ
ಟೋಕಿಯೋ(ಆ.05): ವಿಶ್ವದ ನಂ.1 ಕುಸ್ತಿಪಟು ವಿನೇಶ್ ಫೊಗಾಟ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ 53 ಕೆ.ಜಿ. ವಿಭಾಗದಲ್ಲಿ ಬೆಲಾರಸ್ ವನೆಸಾ ಕಲಾದಿಜಿಂಕ್ಸ್ಯಾ ಎದುರು 9-3 ಅಂಕಗಳ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ. ಒಂದು ವೇಳೆ ಬೆಲಾರಸ್ ಆಟಗಾರ್ತಿ ಫೈನಲ್ ಪ್ರವೇಶಿಸಿದರೆ ವಿನೇಶ್ ರಿಪಿಶಾಜ್ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ.
ಎರಡು ಬಾರಿಯ ವಿಶ್ವಚಾಂಪಿಯನ್ ಬೆಲಾರಸ್‌ನ ಕುಸ್ತಿಪಟು ಆರಂಭದಲ್ಲೇ ಭಾರತದ ವಿನೇಶ್ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 53 ಕೆ.ಜಿ. ವಿಭಾಗದಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಎನಿಸಿಕೊಂಡ ವಿನೇಶ್‌ಗೆ ಮೇಲುಗೈ ಸಾಧಿಸಲು ಬೆಲಾರಸ್ ಕುಸ್ತಿಪಟು ಅವಕಾಶವನ್ನೇ ನೀಡಲಿಲ್ಲ. ನಿರಂತರವಾಗಿ ಅಂಕಗಳಿಸುತ್ತಲೇ ಸಾಗಿದ ವನೆಸಾ ಅನಾಯಾಸವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಟೋಕಿಯೋ 2020: ಕುಸ್ತಿಯಲ್ಲಿಂದು ಕಂಚಿಗಾಗಿ ದೀಪಕ್ ಪೂನಿಯಾ, ಆನ್ಶು ಮಲಿಕ್ ಸೆಣಸು
| |
Women's Freestyle 53kg 1/4 Result goes down against 2 time World Champion Vanesa Kaladzinskaya and moves out of the top medal contention race! https://t.co/0u0xGLW4pn pic.twitter.com/77hWCTu1lc
ಇದಕ್ಕೂ ಮೊದಲು ನಡೆದ ಫ್ರೀ ಕ್ವಾರ್ಟರ್ ಫೈನಲ್‌ನಲ್ಲಿ ವಿನೇಶ್ ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್ ಎದುರು 7-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಸೋಫಿಯಾ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.