ಫೇಸ್'ಬುಕ್, ಟ್ವಿಟರ್'ನಂತೆ ವಾಟ್ಸಾಪ್ ಅಧಿಕೃತ ಖಾತೆಗೆ ಬರಲಿದೆ ಗ್ರೀನ್ ಮಾರ್ಕ್

By Suvarna Web DeskFirst Published Aug 28, 2017, 4:12 PM IST
Highlights

ಫೇಸ್’ಬುಕ್ ಮತ್ತು ಟ್ಚಿಟರ್’ನಲ್ಲಿ ಅಧಿಕೃತ ಖಾತೆಗಳಿಗೆ ಬ್ಲೂ ಟಿಕ್ ಮಾರ್ಕ್ ಇರುವಂತೆ ಇನ್ನು ಮುಂದೆ ವಾಟ್ಸಾಪ್ ಅಧಿಕೃತ ಖಾತೆಗಳಿಗೆ ಹಸಿರು ಬಣ್ಣದ ಟಿಕ್ ಮಾರ್ಕ್ ಬರಲಿದೆ. ವಾಟ್ಸಾಪ್’ಗೆ ಈ ಹೊಸ ಫಿಚರ್ ಸದ್ಯದಲ್ಲೇ ಬರಲಿದೆ ಕಂಪನಿ ತಿಳಿಸಿದೆ.

ನವದೆಹಲಿ (ಆ.28): ಫೇಸ್’ಬುಕ್ ಮತ್ತು ಟ್ಚಿಟರ್’ನಲ್ಲಿ ಅಧಿಕೃತ ಖಾತೆಗಳಿಗೆ ಬ್ಲೂ ಟಿಕ್ ಮಾರ್ಕ್ ಇರುವಂತೆ ಇನ್ನು ಮುಂದೆ ವಾಟ್ಸಾಪ್ ಅಧಿಕೃತ ಖಾತೆಗಳಿಗೆ ಹಸಿರು ಬಣ್ಣದ ಟಿಕ್ ಮಾರ್ಕ್ ಬರಲಿದೆ. ವಾಟ್ಸಾಪ್’ಗೆ ಈ ಹೊಸ ಫಿಚರ್ ಸದ್ಯದಲ್ಲೇ ಬರಲಿದೆ ಕಂಪನಿ ತಿಳಿಸಿದೆ.

ವಾಟ್ಸಾಪ್’ನಿಂದ ಸಂವಹನ ಸುಲಭವಾಗಿದೆ. ಬ್ಯಸಿನೆಸ್ ವ್ಯವಹಾರಗಳು ನಡೆಯುತ್ತದೆ. ಕೆಲವು ಬ್ಯುಸಿನೆಸ್ ಖಾತೆಗಳನ್ನು ಪರಿಶೀಲಿಸಲಾಗಿದೆ. ನಿಮ್ಮ ಮೊಬೈಲ್’ನಲ್ಲಿ ಸೇವ್ ಆಗಿರುವ ಕಾಂಟ್ಯಾಕ್ಟ್ ಮುಂದೆ ಹಸಿರು ಬಣ್ಣದ ಟುಕ್ ಮಾರ್ಕ್ ತೋರಿಸಿದರೆ ಅದು ಅಧಿಕೃತ ಖಾತೆ ಎಂದರ್ಥ ಎಂದು ಕಂಪನಿ ತಿಳಿಸಿದೆ.

ವಾಟ್ಸಾಪ್ ಸದ್ಯದಲ್ಲೇ ಬ್ಯುಸಿನೆಸ್ ಆಯಪನ್ನು ಪರಿಚಯಿಸಲಿದ್ದು, ಈ ಆಯಪ್’ನಿಂದ ಗ್ರಾಹಕರು ಬ್ಯಾಂಕ್, ಏರ್’ಲೈನ್, ರೈಲ್ವೇ ಸೇರಿದಂತೆ ಪ್ರಮುಖ ವಲಯಗಳ ಜೊತೆ ಸಂವಹನ ನಡೆಸಬಹುಸದಾಗಿದೆ.  

click me!