ವಾಟ್ಸ್'ಪ್'ನಿಂದ ಹಣ ಕಳಿಸುವುದು ಹೇಗೆ ಗೊತ್ತೆ ?

By Suvaran Web DeskFirst Published Mar 26, 2018, 6:17 PM IST
Highlights

ನಂತರ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಆಪ್ಷನ್ ಆಯ್ಕೆಯಲ್ಲಿ ನೇರವಾಗಿ ಎಷ್ಟು ಬೇಕೋ ಎಷ್ಟು ಹಣವನ್ನು ದಾಖಲಿಸಿ  ನಿಮಗೆ ಬೇಕಾದವರಿಗೆ ಕಳಿಸಬಹುದು. ಈ ಸಂದರ್ಭದಲ್ಲಿ ಪರಿಶೀಲನೆಗಾಗಿ ಯುಪಿಐ ಪಿನ್ ಕೇಳಲಾಗುತ್ತದೆ.

ಪ್ರಬಲ ಸಾಮಾಜಿಕ ಮಾಧ್ಯಮ ವಾಟ್ಸ'ಪ್ ಹೊಸದೊಂದು ಆಪ್ಷನ್ ಪರಿಚಯಿಸಿದ್ದು ತಮಗೆ ಬೇಕಾದವರಿಗೆ ಹಣವನ್ನು ಕಳಿಸಬಹುದು. ಇದಕ್ಕಾಗಿ ನೀವು ಮಾಡಬೇಕಿದ್ದು ಇಷ್ಟೆ.

ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ  ವಾಟ್ಸ್'ಪ್ ವರ್ಷನ್ 2.18.93 ಡೌನ್'ಲೋಡ್ ಮಾಡಿಕೊಳ್ಳಬೇಕು.ಇದನ್ನು ಡೌನ್'ಲೋಡ್ ಮಾಡಿಕೊಂಡ ನಂತರ Settings > Payments > New Payments > Scan QR code ಗೆ ಹೋಗಬೇಕು. ನಂತರ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಆಪ್ಷನ್ ಆಯ್ಕೆಯಲ್ಲಿ ನೇರವಾಗಿ ಎಷ್ಟು ಬೇಕೋ ಎಷ್ಟು ಹಣವನ್ನು ದಾಖಲಿಸಿ  ನಿಮಗೆ ಬೇಕಾದವರಿಗೆ ಕಳಿಸಬಹುದು. ಈ ಸಂದರ್ಭದಲ್ಲಿ ಪರಿಶೀಲನೆಗಾಗಿ ಯುಪಿಐ ಪಿನ್ ಕೇಳಲಾಗುತ್ತದೆ.

ಸದ್ಯಕ್ಕೆ ಈ ಆಯ್ಕೆಯೂ ಐಫೋನ್ ಹಾಗೂ ಆಯ್ದ ಮೊಬೈಲ್ ಫೋನ್'ಗಳಲ್ಲಿ ಮಾತ್ರ ಲಭ್ಯವಿದೆ. ಕೆಲವು ದಿನಗಳಲ್ಲಿ ಎಲ್ಲ ಆಂಡ್ರ್ಯಾಡ್  ಮೊಬೈಲ್'ಗಳಲ್ಲಿಯೂ ಪರಿಚಯಿಸಲಾಗುತ್ತದೆ.

click me!