ಇದೀಗ ವೊಡಾಫೋನ್’ನಿಂದಲೂ ಗ್ರಾಹಕರಿಗೆ ಭರ್ಜರಿ ಆಫರ್

Published : Feb 21, 2018, 01:05 PM ISTUpdated : Apr 11, 2018, 12:56 PM IST
ಇದೀಗ ವೊಡಾಫೋನ್’ನಿಂದಲೂ ಗ್ರಾಹಕರಿಗೆ ಭರ್ಜರಿ ಆಫರ್

ಸಾರಾಂಶ

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳೂ ಕೂಡ ಪೈಪೋಟಿಗೆ ಬಿದ್ದಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡುತ್ತಿವೆ. ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಹೀಗೆ ಮಾಡುತ್ತಿವೆ. ಇದೀಗ ಈ ಸರದಿ ವೊಡಾ ಫೊನ್’ನದ್ದಾಗಿದೆ.

ನವದೆಹಲಿ : ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳೂ ಕೂಡ ಪೈಪೋಟಿಗೆ ಬಿದ್ದಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡುತ್ತಿವೆ. ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಹೀಗೆ ಮಾಡುತ್ತಿವೆ. ಇದೀಗ ಈ ಸರದಿ ವೊಡಾ ಫೊನ್’ನದ್ದಾಗಿದೆ.

ವೊಡಾಫೋನ್ ಇದೀಗ 2 ರೀತಿಯಾದ ಹೊಸ ಆಫರ್’ಗಳನ್ನು ನೀಡುತ್ತಿದೆ. ಅದರಲ್ಲಿ 151 ಮತ್ತು 158 ರು.ಗಳ 2 ಆಫರ್’ಗಳನ್ನು ನೀಡುತ್ತಿದೆ.  151 ರು.ನ  ಪ್ಲಾನ್’ನಲ್ಲಿ ಅನಿಯಮಿತ ಕರೆ ಸೌಲಭ್ಯವು 18 ದಿನಗಳ ಕಾಲ ಲಭ್ಯವಾಗಲಿದೆ. ಇದು ಸದ್ಯ ಕೇರಳ ಟೆಲಿಕಾಂ ಸರ್ವೀಸ್’ನಲ್ಲಿ ಲಭ್ಯವಿದೆ.

ಇನ್ನೊಂದು 158 ರು.ಗಳ ಪ್ಲಾನ್’ನಲ್ಲಿ ಅನಿಯಮಿತ  ವಾಯ್ಸ್ ಕಾಲ್ ಸೌಲಭ್ಯವಿದೆ. ಆದರೆ ಇದರಲ್ಲಿ ವಾರಕ್ಕೆ 1000 ನಿಮಿಷಗಳಷ್ಟು ಮಾತ್ರವೇ ಉಚಿತವಾಗಿ ಮಾತನಾಡಬಹುದಾಗಿದೆ. ಅಂದರೆ ದಿನಕ್ಕೆ 250 ನಿಮಿಷ  ಉಚಿತ ಕರೆ ಸೌಲಭ್ಯವಿರಲಿದೆ. ಅಲ್ಲದೇ ಹೆಚ್ಚುವರಿಯಾಗಿ ದಿನಕ್ಕೆ 1ಜಿಬಿ 4ಜಿ,3ಜಿ ಡಾಟಾ ಸೌಲಭ್ಯವು ದೊರಕುತ್ತಿದೆ. ಈ ಪ್ಲಾನ್ ರಿಸ್ಟ್ರಿಕ್ಟೆಡ್ ಆಗಿದ್ದು, ಕೇರಳ ಟೆಲಿಕಾಂ ಕ್ಷೇತ್ರದಲ್ಲಿ ಲಭ್ಯವಿರಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಮನೆಯ ಎಲ್ಲ ರೂಮಿಗೆ ವೈಫೈ ಸರಿಯಾಗಿ ಬರೋದಿಲ್ವಾ? ಈ ಟೆಕ್ನಿಕ್ ಯೂಸ್ ಮಾಡಿ
ಬಿಸಿ ನೀರಿಗೆ ಒಂದು ಟಾಬ್ಲೆಟ್​ ಹಾಕಿದ್ರೆ ಸಾಕು, ಎರಡೇ ನಿಮಿಷದಲ್ಲಿ ನೂಡಲ್ಸ್​ ರೆಡಿ- ಏನಿದು AI Tablet?