ಅತ್ಯಂತ ಕಡಿಮೆ ದರದಲ್ಲಿ ವೈಫೈ ಸೌಲಭ್ಯ : ಟ್ರಾಯ್ ಶಿಫಾರಸು

By Suvarna Web DeskFirst Published Apr 7, 2018, 11:21 AM IST
Highlights

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)  ಗುರುವಾರ  ಅತ್ಯಂತ ಕಡಿಮೆ ದರದಲ್ಲಿ ವೈ ಫೈ ಸೌಲಭ್ಯವನ್ನು ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ನವದೆಹಲಿ : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)  ಗುರುವಾರ  ಅತ್ಯಂತ ಕಡಿಮೆ ದರದಲ್ಲಿ ವೈ ಫೈ ಸೌಲಭ್ಯವನ್ನು ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಓಪನ್ ಆರ್ಕಿಟೆಕ್ಚರ್ ಬೇಸ್ ವೈಫೈ ಸೌಲಭ್ಯವನ್ನು ಅತ್ಯಂತ ಕಡಿಮೆ ದರದಲ್ಲಿ  ನೀಡುವ ಬಗ್ಗೆ  ತಿಳಿಸಲಾಗಿದೆ.

 ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ಸಾರ್ವಜನಿಕ ವೈಫೈ ವ್ಯವಸ್ಥೆಯನ್ನು ತೆರೆಯುವ ಬಗ್ಗೆ ಸಂವಹನ ಖಾತೆ ಸಚಿವರಾದ ಮನೋಜ್ ಸಿನ್ಹಾ ಅವರಿಗೆ ಟ್ರಾಯ್ ಮುಖ್ಯಸ್ಥರಾದ ಆರ್’ಎಸ್ ಶರ್ಮ ತಿಳಿಸಿದ್ದಾರೆ. ಕನಿಷ್ಟ  2 ರು.ದರಗಳನ್ನು ವೈಫೈಗೆ ವಿಧಿಸುವ ಸಾಧ್ಯತೆಗಳಿದೆ.

 ಇದರಿಂದ ಡೇಟಾ ಸೌಲಭ್ಯಗಳ ಬೆಲೆಯಲ್ಲಿ ಕೂಡ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಹೇಳಿದ್ದಾರೆ. 

ಇದಕ್ಕೆ ಹೊಸದಾದ ಹೆಸರನ್ನು ಇಡಲು ಕೂಡ ತೀರ್ಮಾನ ಮಾಡಲಾಗಿದೆ.  ವೈಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್  ( ವಾಣಿ) ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

click me!