ದೀಪಾವಳಿ ಹಬ್ಬಕ್ಕೆ ಕಡಿಮೆ ಬೆಲೆಯ ಟಾಟಾ ಟಿಯಾಗೋ JTP ಬಿಡುಗಡೆ!

Published : Sep 13, 2018, 03:18 PM ISTUpdated : Sep 19, 2018, 09:24 AM IST
ದೀಪಾವಳಿ ಹಬ್ಬಕ್ಕೆ ಕಡಿಮೆ ಬೆಲೆಯ ಟಾಟಾ ಟಿಯಾಗೋ JTP ಬಿಡುಗಡೆ!

ಸಾರಾಂಶ

ಟಾಟಾ ಮೋಟಾರ್ಸ್ ಸಂಸ್ಥೆ ಟಿಯಾಗೋ NGR ಕಾರು ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಘೋಷಣೆ ಮಾಡಿದೆ. ದೀಪಾವಳಿ ಹಬ್ಬಕ್ಕೆ ಭಾರತದ ಅತ್ಯಂತ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡಲಿದೆ. ಈ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ.  

ಬೆಂಗಳೂರು(ಸೆ.13): ಟಾಟಾ ಮೋಟಾರು ಸಂಸ್ಥೆ ಈಗಾಗಲೇ ಟಿಯಾಗೋ NGR ಕಾರು ಬಿಡುಗಡೆ ಮಾಡಿದೆ. ಟಾಟಾ ಸಂಸ್ಥೆಯ ನೂತನ ಟಿಯಾಗೋ NGR ಕಾರು ಗ್ರಾಹಕರನ್ನ ಮೋಡಿ ಮಾಡಿದ ಬೆನ್ನಲ್ಲೇ ಇದೀಗ ಟಾಟಾ ಟಿಯಾಗೋ ಹಾಗೂ ಟಿಗೋರ್ ಜಿಟಿಪಿ ಕಾರು ಬಿಡುಗಡೆಗೆ ಸಜ್ಜಾಗಿದೆ.

ಗಣೇಶ ಹಬ್ಬಕ್ಕೆ ಟಿಯಾಗೋ NGR ಕಾರು ಬಿಡುಗಡೆಗೊಳಿಸಿದ ಟಾಟಾ, ಇದೀಗ ದೀಪಾವಳಿ ಹಬ್ಬಕ್ಕೆ  ಟಿಯಾಗೋ ಹಾಗೂ ಟಿಗೋರ್ JTP ಕಾರು ಬಿಡುಗಡೆ ಮಾಡಲಿದೆ. ವಿಶೇಷ ಅಂದರೆ ಭಾರತದ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ JTP ಕಾರು ಪಾತ್ರವಾಗಲಿದೆ.

ಟಿಯಾಗೋ JTP ಕಾರು 6 ಲಕ್ಷ ರೂಪಾಯಿಗಳಿಂದ ಆರಂಭಗೊಂಡರೆ, ಟಿಗೋರ್ JTP 7 ಲಕ್ಷ ರೂಪಾಯಿ ಬೆಲೆಯಿಂದ ಪ್ರಾರಂಭವಾಗಲಿದೆ. ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹೋಲಿಸಿದರೆ ಟಾಟಾ ಜಿಟಿಪಿ ಕಾರಿನ ಬೆಲೆ ಕಡಿಮೆ.  ನೂತನ  JTP ಕಾರನ್ನ ಟಾಟಾ ಮೋಟಾರ್ಸ್ ಹಾಗೂ ಜಯೇಮ್ ಆಟೋಮೇಟಿವ್ ಆಫ್ ಕೊಯಂಬತ್ತೂರು ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಹೀಗಾಗಿ JTP ಹೆಸರಿಡಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಸ್ಪೂರ್ಟ್ಸ್ ಲುಕ್, ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗುತ್ತಿರುವ JTP ಕಾರು ಭಾರತೀಯ ಕಾರು ಪ್ರೀಯರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ನೂತನ JTP ಕಾರು ಹೆಚ್ಚು ಶಕ್ತಿಶಾಲಿಯಾಗಿದೆ. 108 ಬಿಹೆಚ್‌ಪಿ ಪೀಕ್ ಪವರ್ ಹಾಗೂ 159 ಟಾರ್ಕ್ ಉತ್ವಾದಿಸಲಿದೆ.

ಇದನ್ನೂ ಓದಿ: ನೂತನ ವಿಮೆ ನೀತಿಯಿಂದ ಬಜಾಜ್ ಬೈಕ್ ಬೆಲೆ ಏರಿಕೆ! ಪರಿಷ್ಕರಣೆ ದರ ಪ್ರಕಟ
 

PREV
click me!