ಟಾಟಾ ನೆಕ್ಸಾನ್ ಕ್ರಾಜ್ -ಸ್ಪೂರ್ಟೀವ್ ಲುಕ್, ಆಕರ್ಷಕ ಬೆಲೆ!

By Web DeskFirst Published 6, Sep 2018, 10:04 PM IST
Highlights

ಟಾಟಾ ಮೋಟಾರು ಸಂಸ್ಥೆ ನೂತನವಾಗಿ ಬಿಡುಗಡೆ ಮಾಡಿರುವ ನೆಕ್ಸಾನ್ ಕ್ರಾಜ್ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಮೋಡಿ ಮಾಡುತ್ತಿದೆ. ಈ ಕಾರಿನ ವಿಶೇಷತೆ ಹಾಗೂ ಫೋಟೋಗಳು ಇಲ್ಲಿದೆ.

ಬೆಂಗಳೂರು(ಸೆ.06): ಟಾಟಾ ಮೋಟಾರು ಸಂಸ್ಥೆ ಇದೀಗ ಇತರ ಎಲ್ಲಾ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಅದರಲ್ಲೂ ಟಾಟಾ ನೆಕ್ಸಾನ್ ಎಸ್‌ಯುವಿ ಕಾರು ಬಿಡುಗಡೆಯಾದ ಮೇಲೆ ಟಾಟ ಭಾರತದ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿದೆ.

ಟಾಟಾ ನೆಕ್ಸಾನ್ ಎಸ್‌ಯುವಿ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ ಕ್ರಾಜ್ ಹೆಸರಿನೊಂದಿಗೆ ಬಿಡುಗಡೆಯಾಗಿರುವ ಲಿಮಿಡೆಟ್ ಎಡಿಶನ್ ಕಾರು ಅತ್ಯುತ್ತಮ ವಿನ್ಯಾಸ ಹಾಗೂ ಸ್ಪೊರ್ಟೀವ್ ಲುಕ್ ಹೊಂದಿದೆ.

ನೂತನ ಕಾರು ಬ್ಲಾಕ್ ಮತ್ತು ಗ್ರೇ ಬಣ್ಣದ ಡ್ಯುಯಲ್  ಬಣ್ಣಗಳಿಂದ ಕಂಗೊಳಿಸುತ್ತಿದೆ. ಕಾರಿನ ಒಆರ್‍‍ವಿಎಮ್, ಫ್ರಂಟ್ ಗ್ರಿಲ್ ಮತು ವ್ಹೀಲ್‍‍ಗಳಲ್ಲಿ ಹಸಿರು ಬಣ್ಣದ ಟಚ್ ಈ ಕಾರಿಗೆ ವಿಶೇಷ ಲುಕ್ ನೀಡಿದೆ. 

ನೆಕ್ಸಾನ್ ಕಾರು ಹಾಗೂ ನೂತನ ನೆಕ್ಸಾನ್ ಕ್ರಾಜ್ ಕಾರಿನ ಇಂಜಿನ್ ಹಾಗೂ ಫೀಚರ್ಸ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ವಿನ್ಯಾಸ ಮಾತ್ರ ಬದಲಾಗಿದೆ. ಒಳವಿನ್ಯಾಸದಲ್ಲೂ ಹಸಿರು ಬಣ್ಣದ ಟಚ್ ಕಾರನ್ನ ಮತ್ತಷ್ಟು ಸುಂದರವಾಗಿಸಿದೆ.

Last Updated 9, Sep 2018, 8:49 PM IST