ಕಡಿಮೆ ಬೆಲೆ, ಅತ್ಯಾಕರ್ಷ ವಿನ್ಯಾಸ-ದಾಟ್ಸನ್ ರೆಡಿ ಗೋ ಕಾರು ಬಿಡುಗಡೆ!

By Web DeskFirst Published 6, Sep 2018, 4:16 PM IST
Highlights

ದಾಟ್ಸನ್ ರೆಡಿ ಗೋ ಕಾರು ಇದೀಗ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಆಕರ್ಷ ವಿನ್ಯಾಸ ಹಾಗೂ ಹಲವು ವಿಶೇಷತೆಗಳನ್ನ ಗ್ರಾಹಕರಿಗೆ ನೀಡಿದೆ. ಇಲ್ಲಿದೆ ದಾಟ್ಸನ್ ರೆಡಿ ಗೋ ಕಾರಿನ ಬೆಲೆ, ಹಾಗೂ ಇತರ ಫೀಚರ್ಸ್.

ಬೆಂಗಳೂರು(ಸೆ.06): ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಕಾರುಗಳನ್ನ ಬಿಡುಗಡೆ ಮಾಡಿದ ದಾಟ್ಸನ್ ಕಾರು ಸಂಸ್ಥೆ ಇದೀಗ ರೆಡಿ ಗೋ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆಗೊಳಿಸಿದೆ. 

ದಾಟ್ಸನ್ ರೆಡಿ ಗೋ ಲಿಮಿಡೆಟ್ ಎಡಿಶನ್ ಕಾರು ಎಎಂಟಿ(ಆಟೋಮೆಟ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್) ಫೀಚರ್ ಹೊಂದಿದೆ. ಜೊತೆಗೆ 0.8 ಲೀಟರ್ಲಹಾಗೂ 1.0 ಲೀಟರ್ ಇಂಜಿನ ಕಾರು ಬಿಡುಗಡೆ ಮಾಡಿದೆ.

ನೂತನ ಡಾಟ್ಸನ್ ರೆಡಿ ಗೋ ಕಾರಿನ ಬೆಲೆ ಕೇವಲ 3.58 ಲಕ್ಷ ರೂಪಾಯಿ. ಹೊರ ವಿನ್ಯಾಸದಲ್ಲಿ ಗ್ರಾಫಿಕ್ ಡಿಸೈನ್, ಫ್ರಂಟ್ ಹಾಗೂ ರೇರ್ ಬಂಪರ್, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ವಿಶೇಷತೆ ಒಳಗೊಂಡಿದೆ.

Last Updated 9, Sep 2018, 10:03 PM IST