10 ಲಕ್ಷಕ್ಕಿಂತ ಕಡಿಮೆ ಬೆಲೆ- ಇಲ್ಲಿದೆ ESC ಹೊಂದಿರೋ 7 ಕಾರುಗಳು!

By Web DeskFirst Published Oct 1, 2018, 4:37 PM IST
Highlights

ಕಾರು ಖರೀದಿಸುವರು ವಿನ್ಯಾಸ, ಬಣ್ಣ, ಇಂಜಿನ ಸಾಮರ್ಥ್ಯ ನೋಡಿದರೆ ಸಾಲದು. ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಬಿಎಸ್ ಬ್ರೇಕ್ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ತಂತ್ರಜ್ಞಾನ ಅಷ್ಟೇ ಮುಖ್ಯ. ಈ ತಂತ್ರಜ್ಞಾನ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರು ಕಾರುಗಳ ವಿವರ ಇಲ್ಲಿದೆ.

ಬೆಂಗಳೂರು(ಅ.01): ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ತಂತ್ರಜ್ಞಾನ ಸುರಕ್ಷತಾ ದೃಷ್ಟಿಯಿಂದ ಅತೀ ಮುಖ್ಯ. ಭಾರತದಲ್ಲೀಗ ಕಾರಿನ ಸುರಕ್ಷತಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ನೂತನ ಕಾರುಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ತಂತ್ರಜ್ಞಾನ ಹೊಂದಿದೆ.

ತಕ್ಷಣ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗದಂತೆ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವ ESC ತಂತ್ರಜ್ಞಾನ ಎಲ್ಲಾ ಕಾರುಗಳಲ್ಲಿ ಲಭ್ಯವಿಲ್.    ಭಾರತದಲ್ಲಿರುವ 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ESC ತಂತ್ರಜ್ಞಾನದ ಕಾರುಗಳ ವಿವರ ಇಲ್ಲಿದೆ. 

ಮಾರುತಿ ಸುಜುಕಿ ಸಿಯಾಜ್
ವೇರಿಯೆಂಟ್:  1.5 ಡೆಲ್ಟಾ
ಬೆಲೆ:  9.8 ಲಕ್ಷ(ಎಕ್ಸ್ ಶೋ ರೂಂ)

ಫೋರ್ಡ್ ಇಕೋ ಸ್ಪೋರ್ಟ್
ವೇರಿಯೆಂಟ್:  1.5 ಟ್ರೆಂಡ್ + 
ಬೆಲೆ:  9.75 ಲಕ್ಷ(ಎಕ್ಸ್ ಶೋ ರೂಂ)

ಫೋಕ್ಸ್‌ವ್ಯಾಗನ್ ಪೋಲೋ
ವೇರಿಯೆಂಟ್: ಪೋಲೋ ಜಿಟಿ
ಬೆಲೆ:  9.33 ಲಕ್ಷ(ಎಕ್ಸ್ ಶೋ ರೂಂ)

ಫೋಕ್ಸ್‌ವ್ಯಾಗನ್ ಎಮೋ
ವೇರಿಯೆಂಟ್: ಎಮೋ 1.5 ಟಿಡಿಐ ಕಂರ್ಫಟ್‌ಲೈನ್ ಪ್ಲಸ್
ಬೆಲೆ:  9.21 ಲಕ್ಷ(ಎಕ್ಸ್ ಶೋ ರೂಂ)

ಫೋರ್ಡ್ ಆಸ್ಪೈರ್
ವೇರಿಯೆಂಟ್: ಆಸ್ಪೈರ್ 1.5 ಟೈಟಾನಿಯಂ
ಬೆಲೆ:   8.78 ಲಕ್ಷ(ಎಕ್ಸ್ ಶೋ ರೂಂ)

ಫೋರ್ಡ್ ಫಿಗೋ
ವೇರಿಯೆಂಟ್: ಫಿಗೋ 1.5 ಟೈಟಾನಿಯಂ
ಬೆಲೆ: 8.25 ಲಕ್ಷ(ಎಕ್ಸ್ ಶೋ ರೂಂ)

ಫೋರ್ಡ್ ಫಿಗೋ ಫ್ರೀಸ್ಟೈಲ್
ವೇರಿಯೆಂಟ್: ಫ್ರೀಸ್ಟೈಲ್ 1.2 ಟೈಟಾನಿಯಂ 
ಬೆಲೆ:  7.41 ಲಕ್ಷ(ಎಕ್ಸ್ ಶೋ ರೂಂ)

click me!