
ನ್ಯೂಯಾರ್ಕ್(ಸೆ.30): ವಿಶ್ವದ ಬೆಳವಣಿಗೆ ಹಾಗೂ ಅಭಿವೃದ್ಧಿ ನಿರೀಕ್ಷೆಗೂ ಮೀರಿದೆ. ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ, ವಾಹನ ದಟ್ಟಣೆ ಸಮಸ್ಯೆಗಳು ಜನರನ್ನ ಕಾಡುತ್ತಿದೆ. ಇದಕ್ಕೆ ಪರಿಹಾರವಾಗಿ ಹುಟ್ಟಿಕೊಂಡ ಹಾರುವ ಕಾರು ಇದೀಗ ಅಂತಿಮ ಸ್ವರೂಪ ಪಡೆದುಕೊಂಡಿದೆ.
2006ರಲ್ಲಿ ಆರಂಭವಾದ ಟೆರಾಫುಗಿಯೋ ಟ್ರಾನ್ಸಿಶನ್ ಸಂಸ್ಥೆ ಹಾರುವ ಕಾರು ತಯಾರಿಕೆಗೆ ಮುಂದಾಯಿತು. ನಿರಂತರ ಪ್ರಯತ್ನ ಹಾಗೂ ಪರೀಕ್ಷೆಗಳ ಬಳಿಕ ಇದೀಗ ಟೆರಾಫುಗಿಯೋ ಕಂಪನಿ ಹಾರುವ ಕಾರನ್ನ ತಯಾರಿಸಿ ಬಿಡುಗಡೆ ಸಜ್ಜಾಗಿದೆ.
ಮುಂದಿನ ತಿಂಗಳು ಹಾರುವ ಕಾರು ಮಾರುಕಟ್ಟೆ ಪ್ರವೇಶಿಲಿದೆ. ಈ ಕಾರು ರಸ್ತೆಯಲ್ಲೂ ಪ್ರಯಾಣಿಸುತ್ತೆ, ಆಕಾಶದಲ್ಲೂ ಹಾರಾಟ ನಡೆಸುತ್ತೆ. ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದೀಗ ಹಾರುವ ಕಾರು ಬಿಡುಗಡೆಯಾಗಲಿದೆ.
ಆರಂಭದಲ್ಲಿ ಕಂಪೆನಿ ಹಾರುವ ಕಾರಿಗೆ 2.02 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು. ಆದರೆ ಇದೀಗ ಇದರ ಬೆಲೆ 2.18 ಕೋಟಿ ರೂಪಾಯಿ(ಯು.ಕೆ ಮಾರುಕಟ್ಟೆ ಬೆಲೆ). ದುಬಾರಿ ಹಾಗೂ ಲಕ್ಸುರಿ ಕಾರಿನ ಮೊರೆ ಹೋಗುವ ಗ್ರಾಹಕರು ಇದೀಗ ಹಾರುವ ಕಾರು ಕೊಳ್ಳಬಹುದು.