ಭಾರತದ ಸೇಫ್ ಕಾರು ಯಾವುದು? ಇಲ್ಲಿದೆ ಗರಿಷ್ಠ ಸುರಕ್ಷತೆಯ 7 ಕಾರುಗಳು!

By Web DeskFirst Published Oct 1, 2018, 6:30 PM IST
Highlights

ಭಾರತದ ಮಾರುಕಟ್ಟೆಯಲ್ಲಿ ಹಲವು ಕಾರುಗಳು ಲಭ್ಯವಿದೆ. ಮಧ್ಯಮ ವರ್ಗದ ಕಾರುಗಳಲ್ಲಿ ಅತ್ಯಂತ ಸುರಕ್ಷತೆ ಹೊಂದಿದೆ ಕಾರು ಯಾವುದು? NCAP ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಕಾರು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ಅ.01): ಕಾರುಗಳ ಸುರಕ್ಷತೆ ವಿಚಾರದಲ್ಲಿ ಭಾರತ ಇತ್ತೀಚೆಗೆ ಎಚ್ಚೆತ್ತುಕೊಂಡಿದೆ. ದುಬಾರಿ ಹಾಗೂ ಲಕ್ಸುರಿ ಕಾರುಗಳನ್ನ ಹೊರತು ಪಡಿಸಿದರೆ ಮಧ್ಯಮ ವರ್ಗದ ಕಾರುಗಳು ಇದೀಗ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. 

NCAP ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಗರಿಷ್ಠ ಸ್ಟಾರ್ ಪಡೆಯೋ ಮೂಲಕ ಭಾರತದ ಸೇಫ್ ಕಾರು ಅನ್ನೋ ಪಟ್ಟಿಯಲ್ಲಿ ಹಲವು ಕಾರುಗಳಿವೆ. ಆದರೆ ಈ ಬಾರಿ ವಿದೇಶಿ ಕಾರುಗಳಿಗಿಂತ ಭಾರತದ ಕಾರುಗಳೇ ಸುರಕ್ಷತೆಯಲ್ಲೇ ಮುಂದಿದೆ. ಗ್ಲೋಬಲ್ NCAP ಕಾರು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಭಾರತದ ಸೇಫೇಸ್ಟ್ ಕಾರು ಹಣೆ ಪಟ್ಟಿ ಹೊತ್ತ ಕಾರುಗಳ ಪಟ್ಟಿ ಇಲ್ಲಿದೆ.

ಟಾಟಾ ನೆಕ್ಸಾನ್
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 3 ಸ್ಟಾರ್ ಪಡೆದು ಮೊದಲ ಸ್ಥಾನದಲ್ಲಿದೆ.

ಫೋಕ್ಸ್‌ವ್ಯಾಗನ್ ಪೋಲೋ
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 3 ಸ್ಟಾರ್ ಪಡೆದಿದೆ.  ಈ ಮೂಲಕ ಪೋಲೋ 2ನೇ ಸ್ಥಾನದಲ್ಲಿದೆ.

ಟೊಯೊಟಾ ಇಟಿಯೋಸ್
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆದಿದೆ. ಇಟಿಯೊಸ್ 3ನೇ ಸ್ಥಾನದಲ್ಲಿದೆ.

ಟಾಟಾ ಜೆಸ್ಟ್
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆಯೋ ಮೂಲಕ ಜೆಸ್ಟ್ 4ನೇ ಸ್ಥಾನ ಅಲಂಕರಿಸಿದೆ.  

ಮಾರುತಿ ಸುಜುಕಿ ವಿಟಾರ ಬ್ರಿಜಾ
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆದಿದೆ. ಈ ಮೂಲಕ ಬ್ರಿಜಾ ಸುರಕ್ಷತೆಯಲ್ಲಿ 5ನೇ ಸ್ಥಾನದಲ್ಲಿದೆ.

ಫೋರ್ಡ್ ಆಸ್ಪೈರ್
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 3 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆದಿದೆ. ಹೀಗಾಗಿ ಪೋರ್ಡ್ ಆಸ್ಪೈರ್ ಸುರಕ್ಷತೆಯಲ್ಲಿ 6ನೇ ಸ್ಥಾನ ಪಡೆದಿದೆ.

ರೆನಾಲ್ಟ್ ಡಸ್ಟರ್
ಡ್ರೈವರ್ ಸುರಕ್ಷತಾ ಪರೀಕ್ಷೆಯಲ್ಲಿ 3 ಸ್ಟಾರ್ ಹಾಗೂ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 2 ಸ್ಟಾರ್ ಪಡೆದಿದೆ. 
 

click me!