ನೂತನ ರಾಯಲ್ ಎನ್‌ಫೀಲ್ಡ್ ABS ಬೈಕ್ ಬಿಡುಗಡೆ!

Published : Aug 24, 2018, 04:17 PM ISTUpdated : Sep 09, 2018, 09:03 PM IST
ನೂತನ ರಾಯಲ್ ಎನ್‌ಫೀಲ್ಡ್  ABS ಬೈಕ್ ಬಿಡುಗಡೆ!

ಸಾರಾಂಶ

ಭಾರತದ ಪ್ರಖ್ಯಾತ ಬೈಕ್ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್ ಇದೀಗ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿದೆ. ಆಗಸ್ಟ್ 27 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಎನ್‌ಫೀಲ್ಡ್ ಬೈಕ್ ವಿಶೇಷತೆ ಏನು? ಇಲ್ಲಿದೆ.

ಬೆಂಗಳೂರು(ಆ.24): ಭಾರತದ ಅತ್ಯಂತ ಜನಪ್ರೀಯ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಅಗ್ರಸ್ಥಾನ. ಇದೀಗ ರಾಯಲ್ ಎನ್‌ಫೀಲ್ಡ್ ನೂನತ ಬೈಕ್ ಮಾರುಕಟ್ಟೆ ಬಿಡುಗಡೆ ಮಾಡುತ್ತಿದೆ. ಇದೇ ಆಗಸ್ಟ್ 27 ರಂದು ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆಯಾಗಲಿದೆ.

ಇತರ ಸ್ಪೋರ್ಟ್ಸ್ ಬೈಕ್ ಹಾಗೂ ಬನೇಲ್ಲಿ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಇದೀಗ ರಾಯಲ್ ಎನ್‌ಫೀಲ್ಡ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ರಾಯಲ್ ಎನ್‌ಫೀಲ್ಡ್ ವಿಶೇಷತೆ ಅಂದರೆ ABS ಬ್ರೇಕ್. 

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಇದೀಗ ABS(ಆಂಟಿ ಲಾಕ್ ಬ್ರೇಕ್ ಸಿಸ್ಟಮ್) ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.  ಸದ್ಯ ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದೀಗ ABS ಫೀಚರ್‌ನೊಂದಿಗೆ ಮಾರುಕಟ್ಟೆ ಬರಲಿದೆ.

346 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್, 19.8 ಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ಯೂ ಉತ್ಪಾದಿಸಲಿದೆ. ಇದೀಗ ಎಬಿಎಸ್ ಫೀಚರ್ ಅಳವಡಿಸೋ ಮೂಲಕ ಬಜಾಜ್ ಡೋಮಿನರ್ ಸೇರಿದಂತೆ ಇತರ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯುತ್ತಾ ಬೆನೇಲ್ಲಿ 400 ಬೈಕ್?

ಇದನ್ನೂ ಓದಿ: 3 ನಿಮಿಷದಲ್ಲಿ ಎಷ್ಟು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿದೆ ಗೊತ್ತಾ?

PREV
click me!