ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರೇ ಎಚ್ಚರ!

Published : Oct 05, 2018, 08:58 PM ISTUpdated : Oct 05, 2018, 09:03 PM IST
ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರೇ ಎಚ್ಚರ!

ಸಾರಾಂಶ

 ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಬೇಕು ಅನ್ನೋದು ಬಹುತೇಕರ ಕನಸು. ಹಲವರು ಈಗಾಗಲೇ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಆದರೆ ಬೈಕ್ ಖರೀದಿಸಿದವರು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಯಾಕೆ ಅಂತೀರಾ? ಇಲ್ಲಿದೆ ನೋಡಿ.

ದೆಹಲಿ(ಅ.05): ಕರ್ನಾಟಕ ಸೇರಿದಂತೆ ಭಾರತದ ಯಾವುದೇ ರಾಜ್ಯಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚು ಮಾರಾಟವಾಗುತ್ತಿದೆ. ಯುವಕರು ಸೇರಿದಂತೆ ಬಹುತೇಕರು ಇದೀಗ  ರಾಯಲ್‌ ಎನ್‌ಫೀಲ್ಡ್ ಬೈಕ್ ಮೊರೆ ಹೋಗುತ್ತಿದ್ದಾರೆ. ಆದರೆ ಬೈಕ್ ಖರೀದಿಸಿದವರು ಬಹಳ ಎಚ್ಚರವಾಗಿರಬೇಕು. ಕಾರಣ ಕಳ್ಳರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳುವು ಮಾಡೋದು ಬಹಳ ಸುಲುಭ.

ದೆಹಲಿಯ ಮನೋಜ್ ಕುಮಾರ್ ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ ಬೈಕ್ ಕ್ಲಾಸಿಕ್ 350 ಬೈಕ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಮನೋಜ್ ಕುಮಾರ್ ಸಂತಸ ಇಲ್ಲವಾಗಿದೆ. ಕಾರಣ ಮನೆಯ ಮುಂದೆ ನಿಲ್ಲಿಸಿದ್ದ ಮನೋಜ್ ಬೈಕ್ 2ನಿಮಿಷದಲ್ಲಿ ಕಳುವಾಗಿದೆ.

ರಾತ್ರಿ ವೇಳೆ ಆಗಮಿಸಿದ ಕಳ್ಳ 30 ಸೆಕುಂಡ್‌ಗಳಲ್ಲಿ ಹ್ಯಾಂಡ್ ಲಾಕ್ ಮುರಿದಿದ್ದಾನೆ. ಅದು ಕೂಡ ಯಾವುದೇ ಶಬ್ದವಾಗದ ರೀತಿಯಲ್ಲಿ. ಇನ್ನು 1.30 ನಿಮಿಷದಲ್ಲಿ ಇಗ್ನಿಷನ್ ಆನ್ ಮಾಡಿ ಬೈಕ್ ಸ್ಟಾರ್ಟ್ ಮಾಡಿ ಕಳುವು ಮಾಡಿದ್ದಾನೆ. 

ಸಿಸಿಟಿವಿಯಲ್ಲಿ ಕಳ್ಳನ ಕರಾಮತ್ತು ದಾಖಲಾಗಿದೆ. ಇದೀಗ ದೆಹಲಿ ಪೊಲೀಸರು ಸಿಸಿಟಿ ಆಧರಿಸಿ ಪ್ರಕರ ತನಿಖೆ ಆರಂಭಿಸಿದ್ದಾರೆ. ದೆಹಲಿಯಲ್ಲಿ ರಾಯಲ್ ‌ಎನ್‌ಫೀಲ್ಡ್ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.
 

PREV
click me!