ದಾಟ್ಸನ್ ಇಂಡಿಯಾಗೆ ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಎಂಟ್ರಿ!

Published : Oct 05, 2018, 08:18 PM IST
ದಾಟ್ಸನ್ ಇಂಡಿಯಾಗೆ ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಎಂಟ್ರಿ!

ಸಾರಾಂಶ

ದಾಟ್ಸನ್ ಇಂಡಿಯಾ ಕಂಪೆನಿ ಇದೀಗ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಜೊತೆ ಕೈಜೋಡಿಸಿದೆ. ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿರುವ ದಾಟ್ಸನ್, ಬಾಲಿವುಡ್ ನಟನನ್ನ ರಾಯಭಾರಿಯಾಗಿ ನೇಮಕ ಮಾಡಿದೆ.


ಮುಂಬೈ(ಅ.05): ಮಧ್ಯಮ ವರ್ಗದ ಜನರ ಕಾರು ಕನಸನ್ನ ನನಸಾಗಿಸುತ್ತಿರುವ ದಾಟ್ಸನ್ ಇಂಡಿಯಾ ಕಾರು ಕಂಪೆನಿ  ಕಡಿಮೆ ಬೆಲೆಗೆ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. ದಾಟ್ಸನ್ ರೆಡಿ ಗೋ, ದಾಟ್ಸನ್ ಗೋ , ದಾಟ್ಸನ್ ಗೋ ಪ್ಲಸ್ ಸೇರಿದಂತೆ ಹಲವು ಕಡಿಮೆ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ದಾಟ್ಸನ್ ಇಂಡಿಯಾ ಇದೀಗ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ದಾಟ್ಸನ್ ಕ್ರಾಸ್ ಸೇರಿದಂತೆ, ಲಿಮಿಟೆಡ್ ಎಡಿಶನ್ ಕಾರುಗಳನ್ನ ಬಿಡುಗಡೆ ಮಾಡಲು ಸಜ್ಜಾಗಿದೆ. ಇಷ್ಟೇ ಅಲ್ಲ, ದಾಟ್ಸನ್ ಇಂಡಿಯಾ ತನ್ನ ರಾಯಭಾರಿಯಾಗಿ ಬಾಲಿವುಡ್ ಸ್ಟಾರ್, ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ನೇಮಕ ಮಾಡಿದೆ.

 

 

ದಾಟ್ಸನ್ ಕಾರುಗಳನ್ನ 2.56 ಲಕ್ಷ ರೂಪಾಯಿಯಿಂದ ಆರಂಭಗೊಂಡು 5 ಲಕ್ಷ ರೂಪಾಯಿವರೆಗಿದೆ. ಇದೀಗ ಆಮಿರ್ ಖಾನ್ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿರುವ ದಾಟ್ಸನ್ ಕಂಪೆನಿ, ಇತರ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
 

PREV
click me!