
ಮುಂಬೈ : ರಿಲಾಯನ್ಸ್ ಜಿಯೋ ಬಂದ ಮೇಲೆ ವಿವಿಧ ಟೆಲಿಕಾಂ ಮಾರುಕಟ್ಟೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವವನ್ನು ಬೀರಿದೆ. ಇವಿಧ ಟೆಲಿಕಾಂ ಸಂಸ್ಥೆಗಳ ಮೇಲೆಯೂ ಕೂಎ ಹೊಡೆತ ಟಾಗಿದೆ. ಫ್ರೀ ಆಫರ್ ನೀಡಿದ್ದರಿಂದ ವಿವಿಧ ಟೆಲಿಕಾಂ ಸಂಸ್ಥೆಗಳು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಯ್ತು.
ಅಷ್ಟೇ ಅಲ್ಲದೇ ಅವುಗಳು ಕೂಡ ಜಿಯೋ ವಿರುದ್ಧ ಸ್ಪರ್ಧಿಸಲು ಮನಸೆಳೆಯುವ ಆಫರ್’ಗಳನ್ನು ನೀಡಬೇಕಾಯ್ತು. ಗ್ರಾಹಕರನ್ನು ಉಳಿಸಿಕೊಳ್ಳಲು ವಿವಿಧ ಕಸರತ್ತನ್ನು ಮಾಡಬೇಕಾಯ್ತು.
ಆದರೆ ರಿಲಾಯನ್ಸ್ ಜಿಯೋ ಪ್ರಭಾವ ಏರ್ಟೆಲ್ ಮೇಲಾಗಿದ್ದು, ಅದು ಆದಾಯದಲ್ಲಿ ಶೇ.39ರಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾರ್ಚ್ ಕೊನೆಗೆ ಆರ್ಥಿಕ ವರ್ಷ ಮುಕ್ತಾಯವಾಗಿದ್ದು, ಈ ವೇಳೇ ನಷ್ಟದ ಬಗ್ಗೆ ವರದಿಯನ್ನು ಮಾಡಿದೆ.
2017-18ನೇ ಸಾಲಿನ 3ನೇ ಕ್ವಾರ್ಟರ್’ನಲ್ಲಿ ಏರ್ಟೆಲ್’ಗೆ 306 ಕೋಟಿ ಆದಾಯ ಬಂದಿದ್ದು, ಅದೇ 2016-17ರ ಇದೇ ಅವಧಿಯಲ್ಲಿ ಏರ್ಟೆಲ್ ಆದಾಯ 504 ಕೋಟಿಯಷ್ಟಿತ್ತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.