
ಬೀಜಿಂಗ್(ಜ.13): ಇಡೀ ವಿಶ್ವಕ್ಕೆ ಸ್ಮಾರ್ಟ್`ಫೋನ್`ಗಳನ್ನ ಎಕ್ಸ್`ಪೋರ್ಟ್ ಮಾಡುತ್ತಿದ್ದ ಚೀನಾದ ಬೃಹತ್ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಯಾಗಿರುವ ನೋಕಿಯಾ ಕಂಪನಿಯ ನೋಕಿಯಾ 6 ಸ್ಮಾರ್ಟ್`ಫೋನ್ ದಾಂಗುಡಿ ಇಟ್ಟಿದೆ.
ಬಿಡುಗಡೆಯಾದ ಬಳಿಕ ಚೀನಾದ ಜೆಡಿಡಾಟ್ ಕಾಮ್ ವೆಬ್ ಸೈಟ್`ನಲ್ಲಿ ಪ್ರೀ ಬುಕ್ಕಿಂಗ್ ಶುರುವಾಗಿದೆ. ಪ್ರೀ ರಿಜಿಸ್ಟ್ರೇಶನ್ ಶುರುವಾದ ಕೆಲವೇ ಗಂಟೆಗಳಲ್ಲಿ 2.5 ಲಕ್ಷ ಸ್ಮಾರ್ಟ್ ಫೋನ್`ಗಳನ್ನ ಬುಕ್ಕಿಂಗ್ ಮಾಡಲಾಗಿದೆ. ಪ್ರತಿಷ್ಠಿತ ಐಫೋನ್`ಗಳ ಬುಕ್ಕಿಂಗ್ ಹೋಲಿಸಿ ನೋಡಿದರೆ ನೋಕಿಯಾ ಬುಕ್ಕಿಂಗ್ ದಾಖಲೆ ನಿರ್ಮಿಸಿದೆ. ಐಫೋನ್`ಗಳಿಗೂ ಇಲ್ಲದ ಡಿಮ್ಯಾಂಡ್ ನೋಕಿಯಾಗೆ ಬಂದಿದೆ. 1699 ಸಿಎನ್`ವೈ(17 ಸಾವಿರ) ಬೆಲೆಯ ನೋಕಿಯಾ 6 ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಹೊಸ ಹವಾ ಸೃಷ್ಟಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.