ನೂತನ ಹ್ಯುಂಡೈ ಗ್ರ್ಯಾಂಡ್ ಐ10 ಬಿಡುಗಡೆಗೆ ಸಿದ್ಧತೆ-ಏನಿದರ ವಿಶೇಷತೆ?

By Web DeskFirst Published Oct 4, 2018, 9:51 PM IST
Highlights

ಹ್ಯುಂಡೈ ಕಾರು ಸಂಸ್ಥೆ ತಮ್ಮ ಖ್ಯಾತ ಐ20 ಕಾರನ್ನ ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ನೆಕ್ಸ್ಟ್ ಜೆನ್ ಗ್ರ್ಯಾಂಡ್ ಐ10 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಅ.04): ಹ್ಯುಂಡೈ ಸಂಸ್ಥೆಯ ಗ್ರ್ಯಾಂಡ್ ಐ10  ಹೊಸ ಅವತಾರದಲ್ಲಿ ರಸ್ತೆಗಿಳಿಯಲಿದೆ. ಮಾರುತಿ ಸುಜುಕಿ ಸ್ವಿಫ್ಟ್, ಫೋಕ್ಸ್‌ವ್ಯಾಗನ್ ಪೋಲೋ ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಸೆಡ್ಡು ಹೊಡೆಯಲು ಹ್ಯುಂಡೈ ಭರ್ಜರಿ ಸಿದ್ದತೆ ನಡೆಸುತ್ತಿದೆ.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ಗರಿಷ್ಠ ಮಾರಾಟವಾಗಿದೆ. ಇದೀಗ ನೂತನ ಗ್ರ್ಯಾಂಡ್ ಐ20 ಹೊಸ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿದೆ ಬಿಡುಗಡೆಯಾಗಲಿದೆ.

ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಕಾರಿನ ವಿನ್ಯಾಸವನ್ನೇ ಹೋಲುವ ನೂತನ ಗ್ರ್ಯಾಂಡ್ ಐ10 ಮಂದಿನ ವರ್ಷ ಬಿಡುಗಡೆಯಾಗಲಿದೆ. ಭಾರತದಲ್ಲಿ ಅಕ್ಟೋಬರ್ 2019ರ ವೇಳೆ ರಸ್ತೆಗಳಿಯಲಿದೆ ಎಂದು ಹ್ಯುಂಡೈ ಹೇಳಿದೆ.

ನೂತನ ಕಾರಿನ ಇಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದಿರಲು ಸಂಸ್ಥೆ ನಿರ್ಧರಿಸಿದೆ. ಆದರೆ ಹೊರ ವಿನ್ಯಾಸದ ಜೊತೆಗೆ ಹೆಚ್ಚುವರಿ ಫೀಚರ್ಸ್ ಸೇರಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಆಟೋಟ್ರಾನ್ಸ್‌ಮಿಶನ್(AMT) ಗೇರ್‌ಬಾಕ್ಸ್ ವೇರಿಯೆಂಟ್ ಕೂಡ ಬಿಡುಗಡೆ ಮಾಡಲಿದೆ.

ನೂತನ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಬೆಲೆ 5 ಲಕ್ಷದಿಂದ 7 ಲಕ್ಷ(ಎಕ್ಸ್ ಶೋ ರೂಂ) ಇರಲಿದೆ ಎಂದು ಅಂದಾಜಿಸಲಾಗಿದೆ. 

click me!