ನವರಾತ್ರಿ ಪ್ರಯುಕ್ತ 1 ಲಕ್ಷದವರೆಗೆ ಮಾರುತಿ ಸುಜುಕಿ ಕಾರಿಗೆ ರಿಯಾಯಿತಿ!

Published : Oct 04, 2018, 08:08 PM IST
ನವರಾತ್ರಿ ಪ್ರಯುಕ್ತ 1 ಲಕ್ಷದವರೆಗೆ ಮಾರುತಿ ಸುಜುಕಿ ಕಾರಿಗೆ ರಿಯಾಯಿತಿ!

ಸಾರಾಂಶ

ಸಾಲು ಸಾಲು ಹಬ್ಬಗಳಿಂದಾಗಿ ಭಾರತದ ಆಟೋಮೊಬೈಲ್ ಕ್ಷೇತ್ರ ಮತ್ತೆ ಆಫರ್ ಮೊರೆ ಹೋಗಿದೆ. ಈ ಮೂಲಕ ಕುಸಿತ ಕಂಡಿದ್ದ ಮಾರಾಟಕ್ಕೆ ಚೇತರಿಕೆ ನೀಡಲು ಎಲ್ಲಾ ಕಾರು ಹಾಗೂ ಬೈಕ್ ಕಂಪೆನಿಗಳು ರೆಡಿಯಾಗಿದೆ. ಇದೀಗ ಮಾರುತಿ ಸುಜುಕಿ ಭರ್ಜರಿ ಆಫರ್ ಘೋಷಿಸಿದೆ.

ಬೆಂಗಳೂರು(ಅ.04): ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಹಲುವ ಕಾರಣಗಳಿಂದ ಭಾರತದಲ್ಲಿ ಕಾರು ಬೈಕ್‌ಗಳ ಮಾರಾಟದಲ್ಲಿ ಕುಸಿತ ಕಂಡಿತ್ತು. ಇದೀಗ ಸಾಲು ಸಾಲು ಹಬ್ಬಗಳು ಬರುತ್ತಿದೆ. ಹೀಗಾಗಿ ಪ್ರತಿ ಕಾರು ಕಂಪೆನಿಗಳು ಇದೀಗ ಮಾರಾಟದಲ್ಲಿ ಏರಿಕೆ ಕಾಣಲು ಭರ್ಜರಿ ಆಫರ್ ಘೋಷಿಸಿದೆ.

ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಘೋಷಿಸಿದೆ. ಮಾರುತಿ ಸುಜುಕಿಯ ನೂತನ ವ್ಯಾಗನ್ ಆರ್ ಕಾರಿಗೆ 1 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ.

ಮಾರುತಿ ಬಲೇನೋ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕಂಟ್ ನೀಡಲಾಗಿದೆ. ಇಷ್ಟೇ ಅಲ್ಲ ಮಾರುತಿ ಸುಜುಕಿ ಸಂಸ್ಥೆಯ ಪ್ರತಿ ಕಾರಿಗೂ ವಿಶೇಷ ರಿಯಾಯಿತಿ ನೀಡಲಾಗಿದೆ. ಈ ಮೂಲಕ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮಾರುತಿ ಸುಜುಕಿ ತಯಾರಾಗಿದೆ.

ಮಾರುತಿ ಸುಜುಕಿ ಸಂಸ್ಥೆಯ ಅಕ್ಟೋಬರ್ ಆಫರ್ ಇಲ್ಲಿದೆ.

ಮಾಡೆಲ್ಕ್ಯಾಶ್ ಡಿಸ್ಕಂಟ್ಎಕ್ಸ್‌ಚೇಂಜ್ ಬೋನಸ್ಹೆಚ್ಚುವರಿ ಡಿಸ್ಕಂಟ್
ಆಲ್ಟೋ 80040,000 ರೂ50,000 ರೂ-
ಆಲ್ಟೋ ಕೆ 1050,000 ರೂ65,000 ರೂ-
ವ್ಯಾಗನ್ ಆರ್1,00,000 ರೂ85,000 ರೂ-
ಸೆಲೆರಿಯೋ 95,000 ರೂ40,000 ರೂ-
ಎರ್ಟಿಗ40,000 ರೂ60,000 ರೂ-
ಸಿಯಾಜ್---
ಇಗ್ನಿಸ್ ಪೆಟ್ರೋಲ್---
ಡಿಸೈರ್ 40,000 ರೂ50,000 ರೂ-
ಬಲೇನೋ10,00020,000 ರೂ15,000 ರೂ
ಬ್ರೆಜಾ---
ಸ್ವಿಫ್ಟ್30,000 ರೂ35,000 ರೂ-

 

PREV
click me!