ಭಾರತಕ್ಕೆ ಎಂಟ್ರಿಕೊಟ್ಟ ಮಿಟ್ಸುಬಿಶ್ ಔಟ್ಲಾಂಡರ್ SUV ಕಾರು!

By Web DeskFirst Published Aug 20, 2018, 6:41 PM IST
Highlights

ವಿಶ್ವದ ಪ್ರಖ್ಯಾತ ಕಾರು ತಯಾರಿಕಾ ಕಂಪೆನಿ ಮಿಟ್ಲುಬಿಶ್ ಇದೀಗ ಭಾರತದಲ್ಲಿ ಹೊಸ ಕಾರು ಬಿಡುಗಡೆಗೊಳಿಸಿದೆ. ನ್ಯೂ ಜನರೇಶನ್‌ಗೆ ಬೇಡಿಕೆಗೆ ತಕ್ಕಂತೆ ನೂತನ  SUV ಕಾರು ಬಿಡುಗಡೆಗೊಳಿಸಲಾಗಿದೆ.  ಇಲ್ಲಿದೆ ಮಿಟ್ಸುಬಿಶ್ ಕಾರಿನ ವಿಶೇಷತೆ ಹಾಗೂ  ಬೆಲೆ.

ಬೆಂಗಳೂರು(ಆ.20): ಲಕ್ಸುರಿ ಕಾರು ತಯಾರಿಕಾ ಸಂಸ್ಥೆ ಮಿಟ್ಸುಬಿಶ್ ಇದೀಗ ಹೊಸ ಅವತಾರದಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನ್ಯೂ ಜನರೇಶನ್ ಮಿಟ್ಸುಬಿಶ್ ಔಟ್ಲಾಂಡರ್ ಕಾರು ಇದೀಗ ಟೊಯೋಟಾ ಫಾರ್ಚುನ್, ಸ್ಕೋಡಾ ಕೋಡಿಯಾಕ್ ಹಾಗೂ ಫೋಕ್ಸ್‌ವ್ಯಾಗನ್ ಟಿಗ್ವಾನ್‌ಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಮಿಟ್ಸುಬಿಶ್ ಔಟ್ಲಾಂಡರ್ SUV ಕಾರು. ಆದರೆ ಸದ್ಯ ಪೆಟ್ರೋಲ್ ಇಂಜಿನ ಕಾರು ಮಾತ್ರ ಲಭ್ಯವಿದೆ. 7 ಸೀಟರ್ SUV ಕಾರು ಭಾರತದಲ್ಲಿ ಕಾರು ಪ್ರೀಯರನ್ನ ಮೋಡಿ ಮಾಡಲು ಸಜ್ಜಾಗಿದೆ. 

2.4 ಲೀಟರ್ ಪೆಟ್ರೋಲ್ ಇಂಜಿನ್, 165 ಬಿಹೆಚ್‌ಪಿ ಹಾಗೂ 222 ಎನ್ಎಂ ಟಾರ್ಕ್ಯೂ ಉತ್ಪಾದಿಸಲಿದೆ. 6 ಸ್ಪೀಡ್ ಸಿವಿಟಿ ಹಾಗೂ ಮಲ್ಟಿ ಸೆಲೆಕ್ಟ್ 4WD ಸಿಸ್ಟಮ್ ಸೌಲಭ್ಯ ಹೊಂದಿದೆ. 0-100 ಕಿಮಿ ಪ್ರಯಾಣಕ್ಕೆ ತೆಗೆದುಕೊಂಡ ಸಮಯ 11.1 ಸೆಕೆಂಡ್ ಮಾತ್ರ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತೆ. 7 ಏರ್ ಬ್ಯಾಗ್ ಎಬಿಸಿ ಹಾಗೂ ಇಬಿಡಿ ಜೊತೆಗೆ ಎಸಿಎಸ್ ಕೂಡ ಹೊಂದಿದೆ. 16 ಇಂಚಿನ ಆಲೋಯ್ ವೀಲ್ಸ್ ನೂತನ ಮಿಟ್ಸುಬಿಶ್ ಔಟ್ಲಾಂಡರ್ SUV ಕಾರಿನ ವಿಶೇಷತೆ. ಇದರ ಬೆಲೆ 31.95 ಲಕ್ಷ ರೂಪಾಯಿ(ಎಕ್ಸ್ ಶೋರೂಂ, ಮುಂಬೈ).


 

click me!