NASA Viking Mission: ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಇಳಿದ ಬಾಹ್ಯಾಕಾಶ ನೌಕೆ; ಕೆಂಪು ಗ್ರಹದ ಚಿತ್ರಗಳು ಭೂಮಿಗೆ ರವಾನೆ

Published : Aug 20, 2026, 05:39 PM IST
viking 1

ಸಾರಾಂಶ

1976ರಲ್ಲಿ ನಾಸಾದ ವೈಕಿಂಗ್ 1 ನೌಕೆಯು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದು ಕೆಂಪು ಗ್ರಹದ ಮೇಲ್ಮೈಯ ಮೊದಲ ಕ್ಲೋಸ್-ಅಪ್ ಚಿತ್ರಗಳನ್ನು ಭೂಮಿಗೆ ಕಳುಹಿಸಿತು. ಆರು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಈ ನೌಕೆಯು, ಮಂಗಳದ ವಾತಾವರಣ ಮತ್ತು ಜೀವದ ಕುರುಹುಗಳ ಬಗ್ಗೆ ಅಧ್ಯಯನ ನಡೆಸಿತು.

ಇದೇ ದಿನ, ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದ ಬಾಹ್ಯಾಕಾಶ ನೌಕೆ ಉಡಾವಣೆಯಾದ ದಿನ. ಇದು ಕೆಂಪು ಗ್ರಹದ ಚಿತ್ರಗಳನ್ನು ಕ್ಲಿಕ್ಕಿಸಿ ಭೂಮಿಗೆ ಕಳುಹಿಸಿ ಕೊಟ್ಟಿತ್ತು.

ವೈಕಿಂಗ್ 1: ಮಂಗಳನ ಮೇಲೆ ಮೊದಲ ಯಶಸ್ವಿ ಲ್ಯಾಂಡಿಂಗ್

ಅದು 1976ರ ಆಗಸ್ಟ್ 20, ಅಂದರೆ ಬರೋಬ್ಬರಿ 50 ವರ್ಷಗಳ ಹಿಂದೆ ಬಾಹ್ಯಾಕಾಶ ನೌಕೆಯೊಂದನ್ನು ನಾಸಾ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಅದುವೇ ವೈಕಿಂಗ್ 01, ಇದು ಮೊದಲ ಬಾರಿಗೆ ಮಂಗಳ ಗ್ರಹದ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ದಾಖಲೆಯನ್ನು ಹೊಂದಿದೆ. ಅಮೆರಿಕದ ನಾಸಾ ಬಾಹ್ಯಾಕಾಶ ನೌಕೆ, ವೈಕಿಂಗ್ 1 ಈ ಹೆಗ್ಗಳಿಕೆ ಗಳಿಸಿದೆ. ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಉಡಾವಣೆಯಾಗಿ ಮಂಗಳ ಗ್ರಹದ ಮೇಲ್ಮೈ ಮೇಲೆ ಇಳಿಯುವ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ಭೂಮಿಯ ಮೇಲಿಂದ ಉಡಾವಣೆಯಾದ ಉಪಗ್ರಹವೊಂದು ಮತ್ತೊಂದು ಗ್ರಹದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದ ಮೊದಲ ಯೋಜನೆಯ ಎಂಬ ದಾಖಲೆಯನ್ನು ನಿರ್ಮಿಸಿತ್ತು.

ಕೆಂಪು ಗ್ರಹದ ಮೊದಲ ಚಿತ್ರ: ಒಂದು ನಿಗೂಢ ಯಾನ

ಆಗಸ್ಟ್ 20ರಂದು ಉಡಾವನೆಯಾಗಿದ್ದ ವೈಕಿಂಗ್ 1 ಬಾಹ್ಯಾಕಾಶ ನೌಕೆಯೂ 1976ರ ಜೂನ್ 19ರಂದು ಮಂಗಳನ ಕಕ್ಷೆ ಪ್ರವೇಶ ಮಾಡಿತ್ತು. ಆ ಬಳಿಕ ಒಂದು ತಿಂಗಳು ಮಂಗಳನ ಸುತ್ತ ಸುತ್ತಿದ್ದ ನೌಕೆಯೂ ಲ್ಯಾಂಡ್‌ ಆಗಲು ನಿಖರ ಸ್ಥಳವನ್ನು ಗುರುತಿಸಲು ಮಂಗಳದ ಮೇಲ್ಮೈಯ ಚಿತ್ರಗಳನ್ನ ತೆಗೆದುಕೊಳುಹಿಸಿತ್ತು. ಜುಲೈ 20ರಂದು, ಅಪೋಲೋ 11 ಚಂದ್ರನ ಮೇಲೆ ಇಳಿದ (1969) ಏಳನೇ ವಾರ್ಷಿಕೋತ್ಸವದಂದು, ವೈಕಿಂಗ್ 1 ಲ್ಯಾಂಡರ್ ಆರ್ಬಿಟರ್‌ನಿಂದ ಬೇರ್ಪಟ್ಟು ಮಂಗಳನ ಕ್ರಿಸ್ ಪ್ಲಾನಿಟಿಯಾ ಪ್ರದೇಶದಲ್ಲಿ ಇಳಿದಿತ್ತು.

ಇದರೊಂದಿಗೆ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಯನ್ನು ವೈಕಿಂಗ್ 1 ಪಡೆದುಕೊಂಡಿದೆ. ವೈಕಿಂಗ್ 1 ಕೆಂಪು ಗ್ರಹದ ಮೇಲ್ಮೈ ಮೇಲೆ ಇಳಿದ ಮೊದಲ ದಿನವೇ ಅದರ ಫೋಟೋ ತೆಗೆದುಕೊಂಡಿತ್ತು. ಇದರೊಂದಿಗೆ ಮಂಗಳ ಗ್ರಹದ ಮೇಲೆ ಇಳಿದು ಮೊದಲ ಕ್ಲೋಸ್ ಅಪ್ ಫೋಟೋವನ್ನು ಭೂಮಿಗೆ ಕಳುಹಿಸಿದ ಕೀರ್ತಿಯನ್ನು ಪಡೆದುಕೊಂಡಿತ್ತು.

ಸುಮಾರು 2,307 ದಿನಗಳ ಕಾಲ ಕಾರ್ಯನಿರ್ವಹಿಸಿದ ವೈಕಿಂಗ್ 1

ವೈಕಿಂಗ್ 1 ಬಾಹ್ಯಾಕಾಶ ನೌಕೆ ಉಡಾವಣೆಯಾದ ನಂತರ ಕೇವಲ ಮೂರು ವಾರಗಳಲ್ಲಿ, ಅಂದರೆ 1976ರ ಸೆಪ್ಟೆಂಬರ್‌ನಲ್ಲಿ ವೈಕಿಂಗ್ 2 ಕೂಡ ಮಂಗಳನ ಕಕ್ಷೆ ಸೇರ್ಪಡೆಯಾಗಿತ್ತು. ಇದು ವೈಕಿಂಗ್ 1 ಮೇಲ್ಮೈ ಫೋಟೋಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿತ್ತು. ವೈಕಿಂಗ್ ಡ್ಯುಯಲ್ ಮಿಷನ್ ಸಮಯದಲ್ಲಿ ಎರಡು ಆರ್ಬಿಟರ್‌ಗಳು ಮಂಗಳನ ಮೇಲ್ಮೈಯನ್ನು 150 ರಿಂದ 300 ಮೀಟರ್‌ಗಳ ರೆಸಲ್ಯೂಶನ್‌ನಲ್ಲಿ ಚಿತ್ರೀಕರಿಸಿದ್ದವು. ಅಲ್ಲದೇ, 1,400ಕ್ಕೂ ಹೆಚ್ಚು ಫೋಟೋಗಳನ್ನು ಸೆರೆಹಿಡಿದು ಭೂಮಿಗೆ ತಲುಪಿಸಿದ್ದವು.

1975 ಆಗಸ್ಟ್‌ 20ರಂದು ಉಡಾವಣೆಯಾಗಿದ್ದ ವೈಕಿಂಗ್ 1 ಬಾಹ್ಯಾಕಾಶ ನೌಕೆ, ಜುಲೈ 20ರಂದು ಮಂಗಳನ ಮೇಲ್ಮೈ ಸ್ಪರ್ಶ ಮಾಡಿತ್ತು. ಆ ಬಳಿಕ 6 ವರ್ಷಗಳಿಂದ ಹೆಚ್ಚು ಅಂದರೆ ಸುಮಾರು 2,307 ದಿನಗಳ ಕಾಲ ಕಾರ್ಯನಿರ್ವಹಿಸಿತ್ತು. ಇದರೊಂದಿಗೆ ಮಂಗಳ ಗ್ರಹದ ಮೇಲ್ಮೈ ಸ್ಪಷ್ಟ, ಸುಂದರಾಗಿ ಸೆರೆ ಹಿಡಿದಿತ್ತು. ಜೊತೆಗೆ ಅಲ್ಲಿನ ವಾತಾವರಣ ಮತ್ತು ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ನೆರವು ನೀಡಿತ್ತು. ಜೊತಗೆ ಮಂಗಳದಲ್ಲಿ ಜೀವಯ ಕುರುಹುಗಳಿದೆಯಾ ಎಂಬ ಬಗ್ಗೆಯೂ ಹುಡುಕಾಟ ನಡೆಸಿತ್ತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಕೈಗೆಟಕುವ ದರದಲ್ಲಿ ಐಕ್ಯೂ Z11 ಸ್ಮಾರ್ಟ್‌ಫೋನ್ ಹಾಗೂ iQOO ಬಡ್ಸ್ ಭಾರತದಲ್ಲಿ ಬಿಡುಗಡೆ
ಉಸೇನ್ ಬೋಲ್ಟ್ ಸ್ಪೀಡ್ ದಾಖಲೆ ಮುರಿದ ಚೀನಾ ರೋಬೋಟ್, ಇನ್ನು ಏನೆಲ್ಲಾ ಸಾಧ್ಯ ಪ್ರಶ್ನಿಸಿದ ನೆಟ್ಟಿಗರು