ಮಂಗಳನ ಮೇಲೆ ಮೊದಲ ಹೆಜ್ಜೆ ಮಹಿಳೆಯದ್ದೇ!

By Web Desk  |  First Published Mar 14, 2019, 12:18 PM IST

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸುತ್ತಿರುವ ಮಾನವಸಹಿತ ಮಂಗಳಯಾನ| ಮಂಗಳನ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆ!


ವಾಷಿಂಗ್ಟನ್‌[ಮಾ.14]: ಮಂಗಳ ಗ್ರಹದ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆಯಾಗುವ ಸಾಧ್ಯತೆಯಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸುತ್ತಿರುವ ಮಾನವಸಹಿತ ಮಂಗಳಯಾನಕ್ಕೆ ಮೊದಲ ಬಾರಿಯೇ ಮಹಿಳೆಯನ್ನು ಕಳಿಸುವ ಸಾಧ್ಯತೆಯಿದೆ. ಈ ಕುರಿತು ನಾಸಾ ಆಡಳಿತಾಧಿಕಾರಿ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ಸೈನ್ಸ್‌ ಅಂಡ್‌ ಟೆಕ್ನಾಲಜಿ ರೇಡಿಯೋ ಟಾಕ್‌ ಶೋದಲ್ಲಿ ಮಾತನಾಡಿದ ನಾಸಾ ಆಡಳಿತಾಧಿಕಾರಿ ಜಿಮ್‌ ಬ್ರೈಡನಸ್ಟೀನ್‌, ‘ಮಂಗಳ ಗ್ರಹದ ಮೇಲೆ ಕಾಲಿಡುವ ಮೊದಲ ವ್ಯಕ್ತಿ ಮಹಿಳೆಯಾಗುವ ಸಾಧ್ಯತೆಯಿದೆ. ಏಕೆಂದರೆ, ನಾಸಾದ ಮುಂಬರುವ ಬಾಹ್ಯಾಕಾಶ ಯೋಜನೆಗಳ ಮುಂಚೂಣಿಯಲ್ಲಿ ಮಹಿಳೆಯರೇ ಇದ್ದಾರೆ' ಎಂದಿದ್ದಾರೆ. 

Latest Videos

ಅಲ್ಲದೇ 'ಮಾರ್ಚ್ ಅಂತ್ಯದ ವೇಳೆಗೆ ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ‘ಸರ್ವ ಮಹಿಳಾ ಬಾಹ್ಯಾಕಾಶ’ ನಡಿಗೆ ನಡೆಯಲಿದೆ. ಜೊತೆಗೆ, ಚಂದ್ರನ ಮೇಲೆ ಮೊದಲ ಮಹಿಳೆಯನ್ನು ಇಳಿಸುವುದಕ್ಕೂ ನಾವು ಯೋಜನೆ ರೂಪಿಸುತ್ತಿದ್ದೇವೆ’ ಎಂದು ಹೇಳಿದರು.

click me!