ಮಾರುತಿ ಸುಜುಕಿ ಸ್ಪಿಫ್ಟ್ ಆಟೋಮ್ಯಾಟಿಕ್ ಕಾರು ಬಿಡುಗಡೆ!

By Web DeskFirst Published Aug 8, 2018, 9:45 PM IST
Highlights

ಭಾರತದ ಜನಪ್ರೀಯ ಕಾರು ಮಾರುತಿ ಸುಜುಕಿ ಸ್ಪಿಫ್ಟ್ ಇದೀಗ ಎಎಂಟಿ ವೇರಿಯೆಂಟ್ ಲಭ್ಯವಿದೆ. ಈ ಮೂಲಕ ದುಬಾರಿ ಕಾರುಗಳಿಗೆ ಭಾರಿ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಸ್ವಿಫ್ಟ್ ಎಎಂಟಿ ಕಾರಿನ ಬೆಲೆ ಎಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಆ.08): ಮಾರುತಿ ಸುಜುಕಿ ಸ್ಪಿಫ್ಟ್ ಇದೀಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.  ದೇಶದ ಪ್ರಖ್ಯಾತ ಕಾರು ಮಾರುತಿ ಸ್ಪಿಫ್ಟ್ ಇದೀಗ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾಡೆಲ್ ಬಿಡುಗಡೆ ಮಾಡಿದೆ. 

ಸ್ಪಿಫ್ಟ್ ಟಾಪ್ ಮಾಡೆಲ್‌ಗಳಲ್ಲಿ ಎಎಂಟಿ ವರ್ಶನ್ ಬಿಡುಗಡೆ ಮಾಡಿದೆ. ಪೆಟ್ರೋಲ್ ಎಎಂಟಿ ZX+ ಮಾಡೆಲ್‌ಗೆ 7.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇನ್ನು ಡಿಸೆಲ್ ಎಎಂಟಿ ZDI+ ಮಾಡೆಲ್‌ಗೆ 8.76 ಲಕ್ಷ ರೂಪಾಯಿ ನಿಗಧಿ ಮಾಡಲಾಗಿದೆ. ಈ ಮೂಲಕ ಸ್ವಿಫ್ಟ್ ಟಾಪ್ ವೇರಿಯೆಂಟ್ ಮಾಡೆಲ್‌ಗಿಂತ ಎಎಂಟಿ ಮಾಡೆಲ್‌ಗೆ 70000 ರೂಪಾಯಿ ಹೆಚ್ಚಾಗಿದೆ.

ಇಂಜಿನ್, ಕಾರಿನ  ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೇವಲ ಅಟೋಮ್ಯಾಟಿಕ್ ಗೇರ್ ಬಾಕ್ಸ್ ತಂತ್ರಜ್ಞಾನ ಮಾತ್ರ ಅಳವಡಿಸಲಾಗಿದೆ. ಈ ಮೂಲಕ ಸ್ವಿಫ್ಟ್ ಕಡಿಮೆ ಬೆಲೆಯಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನ ಗ್ರಾಹಕರಿಗೆ ತಲುಪುವಂತೆ ಮಾಡಿದೆ.

ಏನಿದು ಎಎಂಟಿ:
ಮಾನ್ಯುಯೆಲ್ ಗೇರ್ ಬಾಕ್ಸ್ ಬದಲು, ಅಟೋಮ್ಯಾಟಿಕ್ ಗೇರ್ ಹೊಂದಿರುವ ತಂತ್ರಜ್ಞಾನವೇ ಎಎಂಟಿ. ಎಎಂಟಿ ಸೌಲಭ್ಯ ಹೊಂದಿರೋ ಕಾರುಗಳಲ್ಲಿ ಪದೇ ಪದೇ ಗೇರು ಹಾಕುವ ಅವಶ್ಯತೆ ಇಲ್ಲ. ಡ್ರೈವ್ ಮೂಡ್, ನ್ಯೂಟ್ರಲ್ ಮೂಡ್, ರಿವರ್ಸ್ ಹಾಗೂ ಕೆಲ ದುಬಾರಿ ಕಾರುಗಳಲ್ಲಿ ಸ್ಪೋರ್ಟ್ಸ್ ಮೂಡ್ ಗೇರುಗಳಿವೆ. 

ಆರಂಭದಲ್ಲಿ ಫಾರ್ಮುಲಾ 1 ರೇಸ್ ಕಾರುಗಳಲ್ಲಿ ಎಎಂಟಿ ಸೌಲಭ್ಯ ಹೆಚ್ಚಾಗಿ ಕಂಡಬರುತ್ತಿತ್ತು. ಬಳಿಕ ದುಬಾರಿ ಬೆಲೆಯ ಕಾರುಗಳಲ್ಲಿ ಅಟೋಮ್ಯಾಟಿಕ್ ಗೇರ್ ಸೌಲಭ್ಯಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಇದೀಗ ಅಗ್ಗ ಬೆಲೆಯ ಕಾರುಗಳು ಕೂಡ ಎಎಂಟಿ ಸೌಲಭ್ಯವನ್ನ ಅಳವಡಿಸಿಕೊಂಡಿದೆ.

click me!