ಟೊಯೋಟಾ ಪಾಲಾಗಲಿದೆ ಮಾರುತಿ ಬಲೇನೋ ಕಾರು!

By Web DeskFirst Published Aug 8, 2018, 3:54 PM IST
Highlights

ನೀವು ಮಾರುತಿ ಬಲೇನೋ ಖರೀದಿಸೋ ಆಲೋಚನೆಯಲ್ಲಿದ್ದರೆ ಬೇಗ ಖರೀದಿಸಬೇಕು. ಇನ್ನು ಕೆಲದಿನಗಳಲ್ಲಿ ಮಾರುತಿ ಬಲೇನೋ ಕಾರು, ಟೊಯೋಟಾ ಬಲೇನೋ ಕಾರಾಗಿ ಬದಲಾಗಲಿದೆ. ಮಾರುತಿಯಿಂದ ಬಲೇನೋ, ಟೊಯೋಟಾ ಬಲೇನೋ ಆಗಿ ಬದಲಾಗುತ್ತಿರುವುದೇಕೆ? ಇಲ್ಲಿದೆ ಮಾಹಿತಿ.

ಬೆಂಗಳೂರು(ಆ.08): ಮಾರುತಿ ಸುಜುಕಿ ಸಂಸ್ಥೆಯ ಬಲೇನೋ ಕಾರು ಭಾರತದಲ್ಲಿ ಅತ್ಯಂತ ಜನಪ್ರೀಯ. ಆಕರ್ಷಕ ವಿನ್ಯಾಸ, ಹಾಗೂ ಆಧುನಿಕ ತಂತ್ರಜ್ಞಾನಗಳಿಂದ ಬಲೇನೋ ಕಾರು ಪ್ರೀಯರ ಮನಗೆದ್ದಿತ್ತು. ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಬಲೇನೋ ಕಾರನ್ನ ಟೊಯೋಟಾ ಸಂಸ್ಥಗೆ ನೀಡುತ್ತಿದೆ. ಶೀಘ್ರದಲ್ಲೇ ಮಾರುತಿ ಬಲೇನೋ ಕಾರು ಟೊಯೋಟಾ ಬಲೇನೋ ಕಾರಾಗಿ ಬದಲಾಗಲಿದೆ.

2018-19ರ ವಾರ್ಷಿಕ ವರ್ಷದ ಮೊದಲ ಭಾಗದಲ್ಲಿ 20 ರಿಂದ 25000 ಬಲೇನೋ ಕಾರುಗಳು ಟೊಯೋಟಾ ಬ್ರ್ಯಾಂಡ್‌‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಮಾರುತಿ ಬಲೇನೋ ಕಾರುಗಳು ಇನ್ಮುಂದೆ ಟೊಯೋಟಾ ಬಲೇನೋ ಕಾರಾಗಿ ಬದಲಾಗಲಿದೆ.

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆ ಬಲೇನೋ ಕಾರು ಖರೀದಿಸಿ ಗ್ರಾಹಕರು ಸರ್ವೀಸ್ ಹಾಗೂ ಇತರ ಯಾವುದೇ ವಿಚಾರಕ್ಕೆ ಮಾರುತಿ ಸುಜುಕಿ ಸಂಸ್ಥೆಗೆ ಭೇಟಿ ನೀಡಬೇಕಿದೆ.  ಆದರೆ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವ ಟೊಯೋಟಾ ಬಲೇನೋ ಕಾರಿನ ಜವಾಬ್ದಾರಿ ಟೊಯೋಟಾ ಸಂಸ್ಥೆ ಮೇಲಿರುತ್ತೆ.

ಮಾರುತಿ ಸುಜುಕಿಯ ವಿಟಾರ ಬ್ರೀಜಾ ಕಾರನ್ನೂ ಕೂಡ ಟೊಯೋಟಾ ಹೊಸದಾಗಿ ನಿರ್ಮಾಣ ಮಾಡಲಿದೆ. ಮುಂದಿನ ವರ್ಷದಲ್ಲಿ ಮಾರುತಿ ವಿಟಾರ ಬ್ರೀಜಾ, ಟೊಯೋಟಾ ಬ್ರೀಜಾ ಕಾರಾಗಿ ಬದಲಾಗಲಿದೆ. ಇಷ್ಟೇ ಅಲ್ಲ ಟೊಯೋಟಾ ಕಂಪೆನಿಯೆ ಕೊರೋಲಾ ಕಾರು, ಮಾರುತಿ ಕೊರೋಲಾ ಕಾರಾಗಿ ಮಾರ್ಪಾಡಾಗಲಿದೆ.

ಏನಿದು ಕ್ರಾಸ್ ಬ್ಯಾಡ್ಜಿಂಗ್: 
ಜನಪ್ರೀಯ ಕಾರುಗಳನ್ನ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಕಟ್ಟೆಗೆ ಬಿಡುಗಡೆಗೊಳಿಸುವುದೇ ಕ್ರಾಸ್ ಬ್ಯಾಡ್ಜಿಂಗ್. (ಉದಾಹರಣೆಗೆ ಮಾರುತಿ ಸುಜುಕಿಯ ಯಾವುದೇ ಕಾರನ್ನ ಬೇರೆ ಮೋಟಾರು ಕಂಪೆನಿ ಅದೇ ಹೆಸರಲ್ಲಿ ಬಿಡುಗಡೆ ಮಾಡವುದು) ಹೊಸ ಕಂಪೆನಿ ಸಣ್ಣ ಬದಲಾವಣೆಯೊಂದಿಗೆ ಬಿಡುಗಡೆ ಮಾಡಲಿದೆ. ಹೆಡ್ ಲೈಟ್, ಒಳವಿನ್ಯಾಸ ಸೇರಿದಂತೆ ಕೆಲೆ ಬದಲಾವಣೆಯೊಂದಿಗೆ ಹೊಸ ಕಂಪೆನಿ ಕಾರನ್ನ ಬಿಡುಗಡೆ ಮಾಡುವುದೇ ಕ್ರಾಸ್ ಬ್ಯಾಡ್ಜಿಂಗ್.

ಅಂತಾರಾಷ್ಟ್ರೀಯ ವ್ಯಾಪಾರ ಮಾರುಕಟ್ಟೆಯಲ್ಲಿನ ಗೊಂದಲ ಹಾಗೂ ವಹಿವಾಟು ನಡೆಸೋ ಸಂಸ್ಥೆಗಳು ಎದುರಿಸೋ ಸವಾಲಿಗೆ ಉತ್ತರವಾಗಿ 1817ರಲ್ಲಿ ಡೇವಿಡ್ ರಿಕಾರ್ಡೋ ಹೊಸ ಥಿಯರಿ ಪ್ರಸ್ತುತ ಪಡಿಸಿದರು. ರಿಕಾರ್ಡೋ ಥಿಯರ್ ಪ್ರಕಾರ ಇದೀಗ ಕ್ರಾಸ್ ಬ್ಯಾಡ್ಜಿಂಗ್ ನಡೆಸಲು ಜಪಾನ್ ಮೂಲದ ಮಾರುತಿ ಸುಜುಕಿ ಹಾಗೂ ಟೊಯೋಟಾ ಮುಂದಾಗಿದೆ.

ಕ್ರಾಸ್ ಬ್ಯಾಡ್ಜಿಂಗ್ ಭಾರತಕ್ಕೆ ಹೊಸದು ಆದರೆ ಇತರ ದೇಶಗಳಲ್ಲಿ ಈಗಾಗಲೇ ಹಲವು ಮೋಟಾರು ಸಂಸ್ಥೆಗಳು ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಹಲವು ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

click me!