ಶೀಘ್ರದಲ್ಲೇ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ!

By Web DeskFirst Published Aug 5, 2018, 9:27 PM IST
Highlights

ಸರಕುಗಳ ಬೆಲೆ ಹೆಚ್ಚಳ, ತೈಲ ಬೆಲೆ ಹೆಚ್ಚಳದಿಂದಾಗಿ ಇದೀಗ ಮಾರುತಿ ಸುಜುಕಿ ಕೂಡ ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಇದೇ ತಿಂಗಳಿನಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಹಾಗಾದರೆ ಪ್ರತಿ ಕಾರಿನ ಮೇಲೆ ಎಷ್ಟು ಹೆಚ್ಚಳವಾಗಲಿದೆ. ಇಲ್ಲಿದೆ ವಿವರ.

ಬೆಂಗಳೂರು(ಆ.05): ಟಾಟಾ ಮೋಟಾರು, ಮಹೀಂದ್ರ ಕಾರುಗಳ ಬೆಲೆ ಹೆಚ್ಚಳ ಬಳಿಕ ಇದೀಗ ಮಾರುತಿ ಸುಜುಕಿ ಕೂಡ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಸರಕುಗಳ ಬೆಲೆ, ಇಂಧನ ಬೆಲೆ ಹೆಚ್ಚಳದಿಂದಾಗಿ ಮಾರುತಿ ಸುಜುಕಿ ಶೀಘ್ರದಲ್ಲೇ ತನ್ನ ಎಲ್ಲಾ ಕಾರುಗಳ ಬೆಲೆ ಹೆಚ್ಚಿಸಲಿದೆ.

ಮಹೀಂದ್ರ ಮೋಟಾರು ಸಂಸ್ಥೆ ಶೇಕಡಾ 2 ರಷ್ಟು ಹಾಗೂ ಟಾಟಾ ಮೋಟಾರು ಸಂಸ್ಥೆ 2.2ರಷ್ಟು ಬೆಲೆ ಹೆಚ್ಚಳ ಮಾಡಿದೆ. ಆದರೆ ಮಾರುತಿ ಬೆಲೆ ಹೆಚ್ಚಳ ಪ್ರಮಾಣದ ಕುರಿತು ಚರ್ಚೆ ನಡೆಸಿದ್ದೇವೆ. ಅಂತಿಮ ನಿರ್ಧಾರ ಮಾತ್ರ ಬಾಕಿ ಇದೆ ಎಂದು ಭಾರತದ ಮಾರುತಿ ಸುಜುಕಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ರಂಧೀರ್ ಸಿಂಗ್ ಕಾಲ್ಸಿ ಹೇಳಿದ್ದಾರೆ.

ಆಗಸ್ಟ್ ತಿಂಗಳಿನಿಂದಲೇ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳವಾಗಲಿದೆ.   ಬೆಲೆ ಹೆಚ್ಚಳ ಪ್ರತಿ ಮಾಡೆಲ್ ಕಾರಿಗಳ ಮೇಲೆ ನಿರ್ಧಾರವಾಗಲಿದೆ. ಭಾರತದ ಜನಪ್ರೀಯ ಹಾಗೂ ಕಡಿಮೆ ಬೆಲೆಯ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ ಮಾರಾಟದ ಮೇಲೂ ಪರಿಣಾಮ ಬೀರಲಿದೆ.
 

click me!