ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಮಾರುತಿ ಸುಜುಕಿ ಕಾರು !ಕಡಿಮೆಯಾಗುತ್ತಾ ಬೆಲೆ?

By Web DeskFirst Published Aug 5, 2018, 4:48 PM IST
Highlights

ಹರಿಯಾಣ ಹಾಗೂ ಗುಜರಾತ್‌ನಲ್ಲಿ ಕಾರು ನಿರ್ಮಾಣ ಘಟಕ ಹೊಂದಿರುವ ಮಾರುತಿ ಸುಜುಕಿ ಇದೀಗ ಬೆಂಗಳೂರಿನಲ್ಲೂ ಘಟಕ ಆರಂಭಿಸೋ ಸಿದ್ದತೆಯಲ್ಲಿದೆ. ಇದಕ್ಕಾಗಿ ತಯಾರಿಗಳು ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಮಾರುತಿ ಕಾರು ನಿರ್ಮಾಣವಾದರೆ, ಬೆಲೆ ಕಡಿಮೆಯಾಗುತ್ತಾ? ಇಲ್ಲಿದೆ ವಿವರ.

ಬೆಂಗಳೂರು(ಆ.04): ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಇದೀಗ ದಕ್ಷಿಣ ಭಾರತದ ಘಟಕವಾಗಿ ಬೆಂಗಳೂರಿನಲ್ಲಿ ಕಾರು ನಿರ್ಮಾಣ ಕಾರ್ಯ ಆರಂಭಿಸಲು ಸಿದ್ದತೆ ನಡೆಸಿದೆ.

ಸದ್ಯ ಭಾರತದಲ್ಲಿ ಮಾರುತಿ ಸುಜುಕಿ ಕಾರು ನಿರ್ಮಾಣ ಘಟಕ ಹರಿಯಾಣದ  ಗುರುಗಾಂವ್ ಹಾಗೂ ಗುಜರಾತ್‌ನ ಮೆಹ್ಸನನಲ್ಲಿದೆ. ಇಲ್ಲಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಕಾರು ರವಾನೆ ಮಾಡೋದೇ ಮಾರುತಿ ಸುಜುಕಿ ಕಂಪೆನಿಗೆ ಸವಾಲಿನ ಪ್ರಶ್ನೆ. ಜೊತೆಗೆ ವೆಚ್ಚು ಕೂಡ ದುಬಾರಿಯಾಗುತ್ತಿದೆ.

ಬೆಂಗಳೂರಿನಲ್ಲಿ ಕಾರು ನಿರ್ಮಾಣ ಘಟಕ್ಕಾಗಿ ಜಪಾನ್ ಮೂಲಕ ಮಾರುತಿ ಸುಜುಕಿ ಕಂಪೆನಿ ಇದೀಗ ಟೊಯೋಟಾ ಜೊತೆ ಮಾತುಕತೆ ನಡೆಸಿದೆ. ಟೊಯೋಟಾ ಈಗಾಗಲೇ ಬೆಂಗಳೂರಿನ ಸಮೀಪದ ಬಿಡದಿಯಲ್ಲಿ ಕಾರು ನಿರ್ಮಾಣ ಘಟಕ ಹೊಂದಿದೆ. ಇದೇ ಘಟಕದಲ್ಲಿ ಮಾರುತಿ ಸುಜುಕಿ ಕೂಡ ಕಾರು ನಿರ್ಮಾಣ ಕಾರ್ಯ ಆರಂಭಿಸಲು ಮಾತುಕತೆ ನಡೆದಿದೆ.

ಬಿಡದಿಯಲ್ಲಿರುವ ಟೊಯೋಟಾ ಕಾರು ನಿರ್ಮಾಣ ಘಟಕದಲ್ಲಿ ಪ್ರತಿ ವರ್ಷ 3 ಲಕ್ಷ ಕಾರು ನಿರ್ಮಾಣ ಮಾಡೋ ಸೌಲಭ್ಯಹೊಂದಿದೆ. ಆದರೆ ಸದ್ಯ ಟೊಯೋಟಾ ಕೇವಲ 1.5 ಲಕ್ಷ ಕಾರುಗಳನ್ನ ಮಾತ್ರ ಉತ್ಪಾದಿಸುತ್ತಿದೆ. ಹೀಗಿಗಾಗಿ ಇನ್ನುಳಿದ 1.5 ಲಕ್ಷ ಕಾರುಗಳನ್ನ ಮಾರುತಿ ಸುಜುಕಿ ನಿರ್ಮಾಣ ಮಾಡಲು ಟೊಯೋಟಾ ಕೂಡ ಸಮ್ಮಿತಿಸಿದೆ.

ಮಾರುತಿ ಹಾಗೂ ಟೊಯೋಟಾ ಎರಡು ಕೂಡ ಜಪಾನ್ ಮೂಲದ ಕಾರು ತಯಾರಿಕಾ ಕಂಪೆನಿಗಳು. ಇದೀಗ ಜಂಟಿಯಾಗಿ ಬೆಂಗಳೂರಿನಲ್ಲಿ ಕಾರು ನಿರ್ಮಾಣಕ್ಕೆ ಮುಂದಾಗಿದೆ.  2022ರ ವೇಳೆ ಬಿಡದಿಯ ಟೊಯೋಟಾ ಕಾರು ಘಟಕದಲ್ಲಿ ಮಾರುತಿ ಸುಜುಕಿ ಕಾರುಗಳು ತಯಾರಾಗಲಿದೆ. ಬಿಡದಿ ಕಾರು ಘಟಕದಲ್ಲಿ ನಿರ್ಮಾಣವಾದ ಮಾರುತಿ ಸುಜುಕಿ ಕಾರುಗಳ ಬೆಲೆ ಕೂಡ ಅಗ್ಗವಾಗಲಿದೆ.

click me!