
ಮಂಡ್ಯ(ಅ.12): ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಅಭಿನವ ಭಾರತಿ ವಿದ್ಯಾ ಕೇಂದ್ರದ 5 ವಿದ್ಯಾರ್ಥಿಗಳು ಅ.24 ರಂದು ಅಮೆರಿಕಾದ ನಾಸಾಗೆ ೧೦ ದಿನಗಳ ಶೈಕ್ಷಣಿಕ ಪ್ರವಾಸ ತೆರಳುತ್ತಿದ್ದಾರೆ.
ನಮ್ಮ ಸಂಸ್ಥೆಯಿಂದ ಆಯ್ದ 5 ವಿದ್ಯಾರ್ಥಿಗಳನ್ನು ಅಮೆರಿಕಾದ ನಾಸಾಗೆ ಕಳಿಸಿ ಅಲ್ಲಿನ ವಿಜ್ಣಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆಂದು ಮಾಹಿತಿ ಸಂಸ್ಥೆಯ ಸಂಸ್ಥಾಪಕರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೂಡ ತಾವು ನಾಸಾಗೆ ಹೋಗಿ ಅಲ್ಲಿನ ವಿಜ್ಞಾನಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸೋಹನ್, ವಂದನಾ, ಪ್ರಣತಿ, ಹರ್ಷಿತ್ ಮತ್ತು ಚಂದನ್ ಅಮೇರಿಕದ ನಾಸಾಗೆ ತೆರಳಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.