ಜಾಗತಿಕ ಮೊಬೈಲ್ ತಯಾರಿಕಾ ಕಂಪನಿಯಾದ ಲಿನೊವೋ ಶೀಘ್ರದಲ್ಲೇ ತನ್ನ Z5 ಮೊಬೈಲ್ ನ್ನು ಬಿಡುಗಡೆ ಮಾಡಲಿದೆ. ಇದೇ ಜೂನ್ 5 ರಂದು ಬಿಜಿಂಗ್ ನಲ್ಲಿ ಲಿನೊವೋ Z5 ಮೊಬೈಲ್ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಬಿಜಿಂಗ್(ಮೇ 28 ): ಜಾಗತಿಕ ಮೊಬೈಲ್ ತಯಾರಿಕಾ ಕಂಪನಿಯಾದ ಲಿನೊವೋ ಶೀಘ್ರದಲ್ಲೇ ತನ್ನ Z5 ಮೊಬೈಲ್ ನ್ನು ಬಿಡುಗಡೆ ಮಾಡಲಿದೆ. ಇದೇ ಜೂನ್ 5 ರಂದು ಬಿಜಿಂಗ್ ನಲ್ಲಿ ಲಿನೊವೋ Z5 ಮೊಬೈಲ್ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
4 ಟಿಬಿ ಇಂಟರ್ನಲ್ ಮೆಮೊರಿ, ಕ್ವಾಲಕಾಮ್ ಸ್ನ್ಯಾಪ್ ಡ್ರ್ಯಾಗನ್ ೮೪೫ ಪ್ರೊಸೆಸರ್ ಹೊಂದಿರುವ Z5 ಮೊಬೈಲ್ ೬ ಮತ್ತು 8 ಜಿಬಿ ರ್ಯಾಮ್ ಹೊಂದಿರಲಿದೆ. ಅಲ್ಲದೇ ಬ್ಯಾಟರಿ ಲೈಫ್ 45 ದಿನಗಳವರೆಗೆ ಇರಲಿದೆ ಎಂದೂ ಬಿಜಿಂಗ್ ನ ಪತ್ರಿಕೆಯೊಂದು ವರದಿ ಮಾಡಿದೆ. ಲಿನೊವೋ Z5 ಮೊದಲ ಸಂಪೂರ್ಣ ಫುಲ್ ಸ್ಕ್ರೀನ್ ಡಿಸ್ಪ್ಲೆ ಹೊಂದಿರಲಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಲಿನೊವೋ ವೈಸ್ ಪ್ರೆಸಿಡೆಂಟ್, ಚಾಂಗ್ ಚೆಂಗ್, ಕಂಪನಿ ಈ ಬಾರಿ ಹಾಫ್ ಸ್ಕ್ರೀನ್, ಬಾರ್ಡರ್ ಸ್ಕ್ರೀನ್ ಮೊಬೈಲ್ ಗಳಿಗೆ ವಿದಾಯ ಹೇಳಲಿದ್ದು, ಲಿನೊವೋ Z5 ಸಂಪೂರ್ಣ ಫುಲ್ ಸ್ಕ್ರೀನ್ ಮೊಬೈಲ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬಿಜಿಂಗ್ ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಿನೊವೋ Z5 ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎನ್ನಲಾಗಿದೆ.