2019ರಲ್ಲಿ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕಲ್ SUV ಕಾರು ಬಿಡುಗಡೆ

Published : Jul 25, 2018, 05:47 PM IST
2019ರಲ್ಲಿ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕಲ್ SUV ಕಾರು ಬಿಡುಗಡೆ

ಸಾರಾಂಶ

ಭಾರತದ ಜನಪ್ರೀಯ ಕಾರು ತಯಾರಿಕಾ ಸಂಸ್ಥೆ ಹ್ಯುಂಡೈ ಇದೀಗ ಎಲೆಕ್ಟ್ರಿಕಲ್ ಎಸ್‌ಯುವಿ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದ ಮೊತ್ತದ ಮೊದಲ ಎಲೆಕ್ಟ್ರಿಕಲ್ ಎಸ್‌ಯುವಿ ಕಾರು ಹೇಗಿದೆ? ಇದರ ಬೆಲೆ ಏಷ್ಟು? ಇಲ್ಲಿದೆ ವಿವರ

ಬೆಂಗಳೂರು(ಜು.01): ಭಾರತದ ಮೊತ್ತದ ಮೊದಲ ಎಸ್‌ಯುವಿ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಹ್ಯುಂಡೈ ಕಾರು ಸಂಸ್ಥೆ ತಯಾರಿ ನಡೆಸಿದೆ. 2019ರ ಆರಂಭದಲ್ಲಿ ಭಾರತದ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಕೆಲ ನಗರಗಳಲ್ಲಿ ಎಸ್‌ಯುವಿ ಎಲೆಕ್ಟ್ರಿಕಲ್ ಕಾರು ಬಿಡುಗಡೆಯಾಗಲಿದೆ.

ಹ್ಯುಂಡೈ ಕೋನಾ ಹೆಸರಿನ ಈ ಎಲೆಕ್ಟ್ರಿಕಲ್ ಕಾರಿನ ಬೆಲೆ ಇನ್ನು ಬಹಿರಂಗವಾಗಿಲ್ಲ. ಆದರೆ ಎಸ್‌ಯುವಿ ಕಾರು ಆಗಿರೋದರಿಂದ 20 ರಿಂದ 25 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. 

ಮುಂದಿನ 2 ವರ್ಷಗಳಲ್ಲಿ ಹ್ಯುಂಡೈ 8 ನೂತನ ಕಾರುಗಳನ್ನ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಅಂಗವಾಗಿ ಹ್ಯುಂಡೈ ಕೋನಾ ಎಲೆಕ್ಟ್ರಿಕಲ್ ಕಾರು ಬಿಡುಗಡೆಯಾಗಲಿದೆ.

ಕೋನಾ ಕಾರು ಫುಲ್ ಚಾರ್ಜ್‌ಗಾಗಿ 6 ಗಂಟೆಗಳು ಚಾರ್ಜ್ ಮಾಡಬೇಕು. ಆದರೆ ಭಾರತದಲ್ಲಿ ಚಾರ್ಜಿಂಗ್ ಸೆಂಟರ್‌ಗಳ ಕೊರತೆ ಇದೆ. ಆದರೆ ಭವಿಷ್ಯದಲ್ಲಿ ಎಲೆಕ್ಟ್ರಿಕಲ್ ಕಾರಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಹ್ಯುಂಡೈ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಈಗಲೇ ಸಜ್ಜಾಗಿದೆ.


ಇದನ್ನು ಓದಿ: ಈ ಕಾರಿನ ಬೆಲೆ 211 ಕೋಟಿ-ಇದು ವಿಶ್ವದ ಅತ್ಯಂತ ದುಬಾರಿ ಕಾರು!

PREV
click me!