
ಬೆಂಗಳೂರು (ಜ.11): ವಾಟ್ಸಪ್ ಥರವೇ ಜನಪ್ರಿಯವಾಗಿರುವ ಮೆಸೇಜಿಂಗ್ ಆಪ್ ಹೈಕ್ ಜ. 9 ರಂದು ‘ಹೈಕ್ ಎಚ್'ಡಿ’ ಎಂಬ ವಿನೂತನ ಲಕ್ಷಣ ಪರಿಚಯಿಸಿದೆ.
ಗ್ರಾಹಕರ ಖಾಸಗಿತನ ಕಾಪಾಡುವ ದೃಷ್ಟಿಯಿಂದ ಪರಸ್ಪರ ಮೊಬೈಲ್ ಸಂಖ್ಯೆಗಳು ಗೊತ್ತಿಲ್ಲದಿದ್ದರೂ ವಿಶಿಷ್ಟವಾದ ಈ ಐಡಿ ಸಹಾಯದಿಂದ ಸಂವಹನ ನಡೆಸಬಹುದು. ಇನ್ನು ಮುಂದೆ ನಮ್ಮ ಗ್ರಾಹಕರು ಸ್ನೇಹಿತರ ಸಂಖ್ಯೆ ಸಂಗ್ರಹಿಸಿ, ಸೇವ್ ಮಾಡುವಂಥಹ ಕ್ಲಿಷ್ಟ ಪ್ರಕ್ರಿಯೆಗಳನ್ನು ದಾಟಿ ಹೋಗಬೇಕಿಲ್ಲ ಎಂದು ಹೈಕ್ ಹೇಳಿಕೊಂಡಿದೆ.
ಮುಂದಿನ ವಾರದಿಂದಲೇ ಆರಂಭವಾಗುವಂತೆ ಗ್ರಾಹಕರು ಹೈಕ್ ಐಡಿ ಕ್ರಿಯೇಟ್ ಮಾಡಿ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು, ಐಒಎಸ್ ಗ್ರಾಹಕರಿಗೆ ಈ ಫೀಚರ್ ಶೀಘ್ರದಲ್ಲೇ ದೊರಕಲಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೈಕ್ ಕ್ಯಾಬ್ ಬುಕಿಂಗ್, ಬಸ್, ರೈಲು, ಸಿನಿಮಾ ಟಿಕೆಟ್ ಬುಕಿಂಗ್, ಬಿಲ್ ಪೇ ಮತ್ತಿತರ ಲಕ್ಷಣಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ. 2012 ರಲ್ಲಿ ಆರಂಭವಾದ ಹೈಕ್ ಮೆಸೆಂಜರ್ ಆಪ್ 100 ಮಿಲಿಯನ್'ಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.