NCSU Statistics Major Sripad Ganti ಭಾರತದ ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶ್ರೀಪಾದ್ ಗಂಟಿ ತನ್ನ ಕಾಲೇಜು ವಿದ್ಯಾರ್ಥಿಗಳ ಜೊತೆ ಸೇರಿ ಅಪ್ಲಿಕೇಶನ್‌ವೊಂದನ್ನು ಸಿದ್ಧಮಾಡಿದ್ದಾರೆ.
ನವದೆಹಲಿ (ಮಾ.31): ದೇಶದ ರೈತರ ಸಾಲು ಸಾಲು ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಪರೂಪವಾದ ಪರಿಹಾರವನ್ನು ಪ್ರಸ್ತಾಪ ಮಾಡಲಾಗಿದೆ. ಅಮೆರಿಕದ ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ಡ್ರೀಮರ್ಸ್ ಮತ್ತು ಡೇಟಾ ಸಂಸ್ಥೆಯ ವಿದ್ಯಾರ್ಥಿಗಳು ಮದರ್ ನೇಚರ್ ಎಂದು ಕರೆಯಲ್ಪಡುವ ರೈತರಿಗೆ ಸಹಾಯ ಮಾಡುವಂಥ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ಮೂಲದ ವಿದ್ಯಾರ್ಥಿ ಶ್ರೀಪಾದ್ ಗಂಟಿ ಮದರ್ ನೇಚರ್ ಅಪ್ಲಿಕೇಶನ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದು, ತಮ್ಮದೇ ವಿವಿಯ ವಿದ್ಯಾರ್ಥಿಗಳ ಜೊತೆ ಸೇರಿ ಇದನ್ನು ಅಭಿವೃದ್ಧಿಮಾಡಿದ್ದಾರೆ. ಎನ್‌ಸಿಎಸ್‌ಯುನಲ್ಲಿ ಸ್ಟ್ಯಾಟಸ್ಟಿಕ್ಸ್ ಮೇಜರ್‌ನಲ್ಲಿ ಓದುತ್ತಿರುವ ಶ್ರೀಪಾದ್ ಗಂಟಿ, ಡ್ರೀಮರ್ಸ್ ಮತ್ತು ಡಾಟಾ ಆರ್ಗನೈಸೇಶನ್‌ನ ಸಂಸ್ಥೆಯ ಸದಸ್ಯರ ಸಹಾಯದಿಂದ ಈ ಅಪ್ಲಿಕೇಶ್‌ಅನ್ನು ಅಭಿವೃದ್ಧಿ ಮಾಡಿದ್ದಾರೆ.
ವಾಸ್ತವಿಕ ಜಗತ್ತಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಹಾಗೂ ಅದಕ್ಕಾಗಿ ಡೇಟಾ ಸೈನ್ಸ್‌ಅನ್ನು ಬಳಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಾವು ರೈತರಿಗೆ ಸಹಾಯ ಮಾಡಲು ಕೆಲವು ರೀತಿಯ ಸಾಧನವನ್ನು ರಚಿಸಲು ಬಯಸಿದ್ದೇವೆ. ನನ್ನ ಅನೇಕ ಸಂಬಂಧಿಕರು ಹಾಗೂ ಸ್ನೇಹಿತರ ಕುಟುಂಬದವರು ರೈತರಾಗಿದ್ದಾರೆ. ಅವರು ಎದುರಿಸುತ್ತಿರುವ ಕಷ್ಟಗಳನ್ನು ನೋಡಲು ಸಾಧ್ಯವಾಗದೇ ಇಂಥದ್ದೊಂದು ಅಪ್ಲಿಕೇಶನ್ ಸಿದ್ಧ ಮಾಡುವ ಯೋಚನೆ ಬಂತು ಎಂದು ಶ್ರೀಪಾದ್ ಗಂಟಿ ಹೇಳಿದ್ದಾರೆ.
ಮದರ್ ನೇಚರ್ ಕೃಷಿ ಡೇಟಾದಲ್ಲಿ ತರಬೇತಿ ಪಡೆದ ಎಐ ಅಂದರೆ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಅನ್ನು ಒಳಗೊಂಡಿದೆ ಮತ್ತು ಆಧುನಿಕ ತಂತ್ರಗಳ ಕುರಿತು ರೈತರಿಗೆ ಜ್ಞಾನವನ್ನು ಒದಗಿಸುವ ಅಥವಾ ಅವರ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸುವ ಗುರಿ ಹೊಂದಿದೆ. ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡುವ ರೈತರೊಂದಿಗೆ ಸಂವಹನ ನಡೆಸಲು ಓಪನ್ ಎಐನ ಎಪಿಐಅನ್ನು ಇದು ಬಳಕೆ ಮಾಡಿಕೊಳ್ಳುತ್ತದೆ. ಈ ಅಪ್ಲಿಕೇಶನ್‌ನ ಇತರ ವೈಶಿಷ್ಟ್ಯಗಳೆಂದರೆ, ಹವಾಮಾನ ಡೇಟಾ ಮತ್ತು ಬಳಕೆದಾರರ ಸ್ಥಳವನ್ನು ಆಧರಿಸಿ ಕೃಷಿ ಸಂಬಂಧಿತ ಸುದ್ದಿ ಡೇಟಾವನ್ನು ಒಳಗೊಂಡಿದೆ. ಇನ್ನು ರೈತರೇ ತಮ್ಮ ಪ್ರೊಫೈಲ್‌ಗಳನ್ನು ಸೃಷ್ಟಿ ಮಾಡಿಕೊಳ್ಳಬಹುದು. ಪರಸ್ಪರ ಅವರ ನಡುವೆಯೇ ಸಂವಹನ ಮಾಡಿಕೊಳ್ಳಬಹುದು. ತಮ್ಮ ತಮ್ಮ ನಡುವೆಯೇ ಸಹಾಯ ಮಾಡಬಲ್ಲಂಥ ಸಮುದಾಯವನ್ನು ನಿರ್ಮಿಸುವುದು ಕೂಡ ಇದರ ಗುರಿಯಾಗಿದೆ. ಇದು ದೇಶದ ರೈತರು ಒಟ್ಟಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಶ್ರೀಪಾದ್ ಗಂಟಿ ಹೇಳುತ್ತಾರೆ.
ಉತ್ಪಾದನೆಯಲ್ಲಿ ಕುಸಿತ: ಈ ಸಲ ಮಾವು ದುಬಾರಿ..!
ಪ್ರಸ್ತುತ ಈ ಅಪ್ಲಿಕೇಶನ್‌ಗಳನ್ನು ಪರೀಕ್ಷಾರ್ಥ ಉದ್ದೇಶಗಳಿಗಾಗಿ ಭಾರತದ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರು ಬಳಕೆ ಮಾಡುತ್ತಿದ್ದಾರೆ. ಹಾಗಿದ್ದರೂ, ಮದರ್ ನೇಚರ್ ಅಪ್ಲಿಕೇಶನ್‌ಅನ್ನು ಭಾರತದ ಇತರ ಭಾಗಗಳಲ್ಲಿ ವಿಸ್ತರಿವುದು ತಮ್ಮ ಗುರಿ ಎಂದು ಶ್ರೀಪಾದ್ ಹೇಳಿದ್ದಾರೆ. ರೈತರ ಹಕ್ಕುಗಳ ಹೋರಾಟವು ತೀವ್ರಗೊಳ್ಳುತ್ತಿದ್ದಂತೆ, ನಮ್ಮ ರೈತರಿಗೆ ಸಹಾಯ ಮಾಡಲು ಇಂತಹ ಆಧುನಿಕ ಪರಿಹಾರಗಳನ್ನು ಇನ್ನಷ್ಟು ಬಂದಲ್ಲಿ ಒಳ್ಳೆಯದಾಗಲಿದೆ.
ಚಿತ್ರದುರ್ಗ: ಬರಗಾಲಕ್ಕೆ ತತ್ತರಿಸಿದ ಅನ್ನದಾತ, ಬೋರ್‌ವೆಲ್ ಬತ್ತಿದ ಪರಿಣಾಮ ಕೈಕೊಟ್ಟ ಬೆಳೆ..!