ಭಾರತದಲ್ಲಿ ಬಿಡುಗಡೆಯಾಗಲಿದೆ ಹಾರ್ಲೆ ಡೇವಿಡ್ಸನ್ 250 ಸಿಸಿ ಬೈಕ್

Published : Jul 30, 2018, 09:03 PM IST
ಭಾರತದಲ್ಲಿ ಬಿಡುಗಡೆಯಾಗಲಿದೆ ಹಾರ್ಲೆ ಡೇವಿಡ್ಸನ್ 250 ಸಿಸಿ ಬೈಕ್

ಸಾರಾಂಶ

ಇನ್ಮುಂದೆ ಹಾರ್ಲೆ ಡೇವಿಡ್ಸನ್ ಭಾರತದ ಪ್ರತಿ ಬೀದಿ ಬೀದಿಗಳಲ್ಲಿ ಕಾಣಿಸಿಕೊಳ್ಳಲಿದೆ. ಕಡಿಮೆ ಬೆಲೆಯಲ್ಲಿ ಹಾರ್ಲೆ ಡೇವಿಡ್ಸನ್ ಇದೀಗ ಭಾರತ ಪ್ರವೇಶಿಸಲಿದೆ. ಇದನ್ನ ಖುದ್ದು ಹಾರ್ಲೆ ಡೇವಿಡ್ಸನ್ ಕಂಪೆನಿ ಸ್ಪಷ್ಟಪಡಿಸಿದೆ. ಅಷ್ಟಕ್ಕೂ ಹಾರ್ಲೆ ಡೇವಿಡ್ಸನ್ ಕಂಪೆನಿಯ ನೂತನ ಘೋಷಣೆ ವಿವರ ಇಲ್ಲಿದೆ.

ಬೆಂಗಳೂರು(ಜು.30): ಅಮೇರಿಕಾದ ಖ್ಯಾತ ಮೋಟರ್‌ಸೈಕಲ್ ತಯಾರಿಕ ಕಂಪೆನಿ ಹಾರ್ಲೆ ಡೇವಿಡ್ಸನ್ ಇದೀಗ ಭಾರತದಲ್ಲಿ 250 ಸಿಸಿ ಬೈಕ್ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಭಾರತದ ದ್ವಿಚಕ್ರವಾಹನ ತಯಾರಿಕಾ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹಾರ್ಲೆ ಡೇವಿಡ್ಸನ್ ಕಂಪೆನಿ ಸ್ಪಷ್ಟಪಡಿಸಿದೆ.

ಹಾರ್ಲೆ ಡೇವಿಡ್ಸನ್ 250 ಸಿಸಿ ಹಾಗೂ 500 ಸಿಸಿ ಬೈಕ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಮೂಲಕ ಭಾರತ ಹಾಗೂ ಏಷ್ಯಾ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆದರೆ ಹಾರ್ಲೆ ಡೇವಿಡ್ಸನ್ ಭಾರತದ ಯಾವ ದ್ವಿಚಕ್ರ ವಾಹನ ತಯಾರಿಕ ಕಂಪೆನಿ ಕೈ ಜೋಡಿಸಲಿದೆ ಅನ್ನೋದನ್ನ ಬಹಿರಂಗ ಪಡಿಸಿಲ್ಲ.

ಸಹಜವಾಗಿ ಹಾರ್ಲೆ ಡೇವಿಡ್ಸನ್ ಬೈಕ್‌ಗಳು ದುಬಾರಿ ಬೆಲೆ ವಾಹನಗಳು. ಆದರೆ ಇದೀಗ ಹಾರ್ಲೆ ಡೇವಿಡ್ಸನ್ ಕಡಿಮೆ ಬೆಲೆಯಲ್ಲಿ 250 ಸಿಸಿ ಹಾಗೂ 500 ಸಿಸಿ ಬೈಕ್ ತಯಾರಿಸಲು ಮುಂದಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಹಲವು ಬೈಕ್‌ಗಳಿಗೆ ಪೈಪೋಟಿ ನೀಡಲು ಹಾರ್ಲೆ ಡೇವಿಡ್ಸನ್ ಮುಂದಾಗಿದೆ.

PREV
click me!