ಗುಜರಾತ್ ಸರ್ಕಾರದಿಂದ ಟಾಟಾಗೆ 584 ಕೋಟಿ ಸಾಲ- ವಿರೋಧ ಪಕ್ಷಗಳು ಗರಂ!

By Web DeskFirst Published Oct 5, 2018, 4:08 PM IST
Highlights

ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಟಾಟಾ ಮೋಟಾರ್ಸ್ ಕಾರು ತಯಾರಿಕಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ  ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಟಾಟಾ ಮೋಟಾರ್ಸ್ ಕಂಪೆನಿಗೆ 584 ಕೋಟಿ ಸಾಲ ನೀಡಿದೆ. ಆದರೆ ಸರ್ಕಾರದ ಬಡ್ಡಿ ದರ ಮಾತ್ರ ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ.

ಅಹಮ್ಮದಾಬಾದ್(ಅ.05): ಬಿಜೆಪಿ ನೇತೃತ್ವದ ಗುಜರಾಜ್ ಸರ್ಕಾರ, ಟಾಟಾ ಮೋಟಾರ್ಸ್ ಸಂಸ್ಥೆ ಸದ್ದಿಲ್ಲದೆ 584 ಕೋಟಿ ರೂಪಾಯಿ ಸಾಲ ನೀಡಿದೆ. ವಿಶೇಷ ಅಂದರೆ ಈ ಸಾಲಕ್ಕೆ ಗುಜರಾತ್ ಸರ್ಕಾರ ವಿಧಿಸಿರುವ ಬಡ್ಡಿ ಕೇವಲ 0.1% ಮಾತ್ರ. 

ಪಶ್ಚಿಮ ಬಂಗಾಳದಿಂದ ಸಿಂಗೂರ್‌ನಿಂದ ಟಾಟಾ ಕಾರು ನಿರ್ಮಾಣ ಘಟಕವನ್ನ ಅಹಮ್ಮದಾಬಾದ್‌ಗೆ ವರ್ಗಾವಣೆ ಮಾಡಲು ನಿರ್ಧರಿದೆ. ಹೀಗಾಗಿ ಗುಜರಾತ್‌ನ ಅಹಮ್ಮದಾಬಾದ್ ಘಟ ನಿರ್ಮಾಣಕ್ಕೆ ಸರ್ಕಾರದಿಂದ ಸಾಲ ಕೇಳಿತ್ತು. ಇದೀಗ ಗುಜರಾಜತ್ ಸರ್ಕಾರ ಸಾಲ ಮುಂಜೂರು ಮಾಡಿದೆ.

ಸರ್ಕಾರದ ನಡೆಯನ್ನ ವಿರೋಧ ಪಕ್ಷಗಳು  ಟೀಕಿಸಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿರುವ ಗುಜರಾತ್ ಸರ್ಕಾರದ ಕ್ರಮವನ್ನ ವಿರೋಧಿಸಿದೆ.  2009ರಲ್ಲಿ ಟಾಟಾಗೆ ಸಾಲ ನೀಡಲು ಗುಜರಾತ್ ಸರ್ಕಾರ ಒಪ್ಪಿಕೊಂಡಿತ್ತು. ಇದೀಗ ಅಂದಿನ ಬಡ್ಡಿ ದರದಲ್ಲೇ ಸಾಲ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

click me!