ನೆಟ್ ಬಳಕೆದಾರರಿಗೆ ಶಾಕ್- ಇನ್ನೆರಡು ದಿನ ಇರಲ್ಲ ಇಂಟರ್‌ನೆಟ್!

By Web Desk  |  First Published Oct 12, 2018, 12:28 PM IST

ಇಂಟರ್‌ನೆಟ್ ಇಲ್ಲದೆ ನಮ್ಮ ದಿನ ಮುಂದೆ ಹೋಗಲ್ಲ. ಆದರೆ ಇದೇ ನೆಟ್ ಬಳಕೆದಾರರಿಗೆ ಕಾದಿದೆ ಬಿಗ್ ಶಾಕ್ . ಕಾರಣ ಇನ್ನೆರಡು ದಿನ ವಿಶ್ವದಲ್ಲೇ ಇಂಟರ್‌ನೆಟ್ ಇರೋದಿಲ್ಲ. ಯಾಕೆ? ಇಲ್ಲಿದೆ.
 


ನ್ಯೂಯಾರ್ಕ್ (ಅ.12): ಇಂಟರ್‌ನೆಟ್ ಇದೀಗ ನಮ್ಮ ಅವಿಭಾಜ್ಯ ಅಂಗವಾಗಿದೆ. ಇಂಟರ್‌ನೆಟ್ ಇಲ್ಲದೆ ಒಂದು ಕ್ಷಣ ಕೂಡ ಮುಂದೆ ಹೋಗಲ್ಲ ಅನ್ನುವಷ್ಟರ ಮಟ್ಟಿದೆ ನೆಟ್ ನಮ್ಮನ್ನ ಆವರಿಸಿಬಿಟ್ಟಿದೆ. ಇದೀಗ ನಿರ್ವಹಣೆ ಕಾರಣದಿಂದ ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಲಭ್ಯವಿರೋದಿಲ್ಲ ಎಂದು ರಷ್ಯಾ ಟುಡೆ ವರದಿ ಮಾಡಿದೆ.

ಅಂತರ್ಜಾಲ ಸೇವೆ ಅಲಭ್ಯತೆ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದಲ್ಲೇ 2 ದಿನಗಳ ಕಾಲ ಲಭ್ಯವಿಲ್ಲ.  ಇಂಟರ್‌ನೆಟ್ ಕಾರ್ಪೋರೇಶನ್ ಸಂಸ್ಥೆ (ICANN) ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ನಿರ್ವಹಣೆ ಮಾಡಲಿದೆ. ಈ ವೇಳೆ ನೆಟ್ ಸೇವೆಯಲ್ಲಿ ಏರುಪೇರಾಗಲಿದೆ. ಈ ನಿರ್ವಹಣೆಯಿಂದಾಗಿ ಇಂಟರ್‌ನೆಟ್ ಡೊಮೈನ್ ನೇಮ್ ಸಿಸ್ಟಮ್‌ಗೆ(DNS) ಹೆಚ್ಚಿನ ಭದ್ರತೆ ಸಿಗಲಿದೆ. ಇದರಿಂದ ಸೈಬರ್ ದಾಳಿ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

Tap to resize

Latest Videos

ನಿರ್ವಹಣೆಯಿಂದ 2 ದಿನಗಳ ಕಾಲ ಇಂಟರ್‌ನೆಟ್ ಸೇವೆಯಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಕಮ್ಯೂನಿಕೇಶನ್ ರೆಗ್ಯೂಲೇಟರಿ ಅಥಾರಿಟಿ(CRA) ಹೇಳಿದೆ.  ಹೀಗಾಗಿ ನೆಟ್ ಮೂಲಕ ಯಾವುದೇ ವ್ಯವಹಾರ ಮುಂದಿನ 48 ಗಂಟೆಗಳಲ್ಲಿ ಸರಾಗವಾಗಿ ನಡೆಯೋದು ಅನುಮಾನವಾಗಿದೆ. 

click me!