ಭಾರತದ ಕೆಲವು ಭಾಗಗಳಲ್ಲಿ ಝೊಮಾಟೊ, ಸ್ವಿಗ್ಗಿ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

By Suvarna NewsFirst Published Apr 6, 2022, 2:55 PM IST
Highlights

ಝೊಮಾಟೊ, ಸ್ವಿಗ್ಗಿ ಸೇವೆ ವತ್ಯಯ  ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ದೂರು ನೀಡಿದ್ದಾರೆ. 
 

ನನದೆಹಲಿ (ಏ. 06): ದೇಶದ ಪ್ರಮುಖ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳಾದ ಝೊಮಾಟೊ, ಸ್ವಿಗ್ಗಿ ಸೇವೆ ಸಮಸ್ಯೆ ಕಂಡುಬಂದಿದ್ದು ಭಾರತದ ವಿವಿಧ ಭಾಗಗಳಲ್ಲಿ ಕೆಲವು ಬಳಕೆದಾರರಿಗೆ ಝೊಮಾಟೊ, ಸ್ವಿಗ್ಗಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ದೂರು ನೀಡಿದ್ದಾರೆ. 

"something is Went wrong Please Try again Later" ಎಂದು ತೋರಿಸುತ್ತಿರುವ ಸ್ರೀನ್‌ ಶಾಟನ್ನು ಹಲವರು ಹಂಚಿಕೊಂಡಿದ್ದು ಫುಡ್‌ ಆರ್ಡರ್‌ ಮಾಡಲು ಸಾಧ್ಯವಾಗುತಿಲ್ಲಾ ಎಂದು ತಿಳಿಸಿದ್ದಾರೆ. ಎರಡೂ ಕಂಪನಿಗಳ ಗ್ರಾಹಕ ಬೆಂಬಲ (Customer Care) ಹ್ಯಾಂಡಲ್‌ಗಳು ಸಂದೇಶಗಳಿಗೆ ಪ್ರತಿಕ್ರಿಯಿಸಿ, ಅವರು ""temporary glitch" (ತಾತ್ಕಾಲಿಕ ತಾಂತ್ರಿಕ ಸಮಸ್ಯೆ)  ಪರಿಹರಿಸುವಲ್ಲಿ ತಂಡ ಕೆಲಸ ಮಾಡುತ್ತಿದೆ ಎಂದು ತಿಳಿಸಿವೆ.

Latest Videos

 

is down. What happened? The Investors money has ran out ? pic.twitter.com/pWlBoGNf4q

— Rajan Kumar Hans (@RajanKumarHans2)

ಇದು ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅವಲಂಬಿಸಿರುವ ಅಮೆಜಾನ್ ವೆಬ್ ಸೇವೆಗಳ ಸ್ನ್ಯಾಗ್‌ನಿಂದ ಉಂಟಾಗಿದೆ ಎಂದು ತಿಳಿದುಬಂದಿದೆ. ಎರಡೂ ಅಪ್ಲಿಕೇಶನ್‌ಗಳು ಸ್ಥಗಿತಗೊಂಡ ಅರ್ಧ ಗಂಟೆಯೊಳಗೆ ಕಾರ್ಯನಿರ್ವಹಿಸಲು ಆರಂಭವಾಗಿವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲಿಕೇಶನ್‌ನಲ್ಲಿ ಆಹಾರ ಆರ್ಡರ್‌ ಮಾಡಲು ಅಥವಾ ಮೆನುಗಳು ಮತ್ತು ಪಟ್ಟಿಗಳನ್ನು ಬ್ರೌಸ್ ಮಾಡಲು ಸಾಧ್ಯವಾಗದ ಬಳಕೆದಾರರು ದೂರುಗಳು ನೀಡಿದ್ದಾರೆ.

ತಾಂತ್ರಿಕ ದೋಷ: ಈ ಬಗ್ಗೆ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಸ್ವಿಗ್ಗಿ " ಹಾಯ, ನಾವು ತಾಂತ್ರಿಕ ದೋಷಗಳನ್ನು ಅನುಭವಿಸುತ್ತಿರುವುದರಿಂದ ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ನಮಗೆ ಪ್ರಸ್ತುತ ಸಾಧ್ಯವಾಗುತ್ತಿಲ್ಲ. ಚಿಂತಿಸಬೇಡಿ, ಸಮಸ್ಯೆಯನ್ನು ಪರೀಶಿಲಿಸುತ್ತಿದ್ದೇವೆ, ಇದರ ಶೀಘ್ರದಲ್ಲೇ  ಕಾರ್ಯನಿರ್ವಹಿಸುತ್ತೇವೆ" ಎಂದು ತಿಳಿಸಿದೆ. 

 

How come and stopped working at the same time 😭

— FriesBeforeGuys (blue tick) (@alltimefoodie24)

 

ಇನ್ನು ಈ ಬೆನಲ್ಲೇ ಪ್ರತಿಕ್ರಿಯೆ ನೀಡಿರುವ ಝೋಮ್ಯಾಟೋ " ಹಾಯ್ ಸಾಹಿಲ್, ನಾವು ತಾತ್ಕಾಲಿಕ ತೊಂದರೆಯನ್ನು ಎದುರಿಸುತ್ತಿದ್ದೇವೆ. ನಮ್ಮ ತಂಡವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ನಾವು ಶೀಘ್ರದಲ್ಲೇ ಕಾರ್ಯನಿರ್ವಹಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಿ" ಎಂದು ಹೇಳಿದೆ.

 

Hi Sahil, we are facing a temporary glitch. Please be assured our team is working on this and we will be up and running soon.

— zomato care (@zomatocare)

 

CCI ತನಿಖೆ: ಎರಡು ಪ್ಲಾಟ್‌ಫಾರ್ಮ್‌ಗಳು ಸುಮಾರು $10 ಬಿಲಿಯನ್ ಮೌಲ್ಯ ಹೊಂದಿದ್ದು ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಈ ವಾರ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಸೋಮವಾರ ಎರಡೂ ಕಂಪನಿಗಳು ನೀಡುವ ಅಪ್ಲಿಕೇಶನ್‌ಗಳು "ತಟಸ್ಥವಾಗಿದೆ" ಎಂದು ಪರಿಶೀಲಿಸಲು ತನಿಖೆಗೆ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಶೇಷ ಗುತ್ತಿಗೆದಾರರಿಗೆ ಆದ್ಯತೆ ನೀಡುವ ಮೂಲಕ ಪ್ಲಾಟ್‌ಫಾರ್ಮ್ ನ್ಯೂಟ್ರಾಲಿಟಿಯನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗಳ ವಿರುದ್ಧ ತನಿಖೆ ಮಾಡಲು CCI ಗೆ ನ್ಯಾಶನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI)  ಕೇಳಿದ ತಿಂಗಳುಗಳ ನಂತರ ಈ ಆದೇಶ ಬಂದಿದೆ.

click me!