ಫೇಸ್ಬುಕ್ ಸಿಒಒ ಶೆರಿಲ್‌ ಈಗ ಎಂಗೇಜ್ಡ್: ಝುಕರ್ಬರ್ಗ್ ಪ್ರತಿಕ್ರಿಯೆ ಎಕ್ಸಲೆಂಟ್!

Suvarna News   | Asianet News
Published : Feb 04, 2020, 06:30 PM ISTUpdated : Feb 04, 2020, 06:31 PM IST
ಫೇಸ್ಬುಕ್ ಸಿಒಒ ಶೆರಿಲ್‌ ಈಗ ಎಂಗೇಜ್ಡ್:  ಝುಕರ್ಬರ್ಗ್ ಪ್ರತಿಕ್ರಿಯೆ ಎಕ್ಸಲೆಂಟ್!

ಸಾರಾಂಶ

50 ವರ್ಷ ಪ್ರಾಯದ ಫೇಸ್ಬುಕ್ ಸಿಒಒ ಶೆರಿಲ್ ಸ್ಯಾಂಡ್ಬರ್ಗ್‌ ನಿಶ್ಚಿತಾರ್ಥ! ಶುಭ ಕೋರಿದ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಕೆಲ್ಟಾನ್ ಗ್ಲೋಬಲ್ ಕಂಪನಿಯ ಸಿಇಓ ಟಾಮ್ ಬೆರೆಂತಾಲ್ ಜೊತೆ ಶೆರಿಲ್ ಎಂಗೇಜ್ಮೆಂಟ್

ಬೆಂಗಳೂರು (ಫೆ.04): ಶೆರಿಲ್ ಸ್ಯಾಂಡ್ಬರ್ಗ್ ಪರಿಚಯ ಎಷ್ಟು ಮಂದಿಗಿದೆ ಗೊತ್ತಿಲ್ಲ. ಆದರೆ ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಶೆರಿಲ್ ಹೆಸರು ತಿಳಿಯದವರು ಕಡಿಮೆ. 

ಫೇಸ್ಬುಕ್‌ ಸಿಒಒ ಆಗಿರುವ ಶೆರಿಲ್  ಈಗ ಮತ್ತೆ ಸುದ್ದಿಯಲ್ಲಿದ್ದಾರೆ.   ಫೇಸ್ಬುಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಫೇಮಸ್ ಆಗಿದ್ದಾರೆ ಅಂತಾ ಭಾವಿಸ್ಬೇಡಿ. 

ಇದನ್ನೂ ಓದಿ | ನಿಮ್ಮ ಪ್ರತೀ ಹೆಜ್ಜೆ ಮೇಲೆ ಫೇಸ್ಬುಕ್‌ ಕಣ್ಗಾವಲು!...

ಶೆರಿಲ್ ಫೇಸ್ಬುಕ್ ಸೇರೋ ಮುನ್ನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆ ವೈಟ್‌ ಹೌಸ್‌ನಲ್ಲಿ  ಕೆಲಸ ಮಾಡಿದವರು. ಅಮೆರಿಕಾದ NBC ಟೀವಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಕಟ್ಟಿಕೊಟ್ಟವರು ಶೆರಿಲ್. ಅಷ್ಟೇ ಅಲ್ಲ, ಹಲವು ಜನಪ್ರಿಯ ಕೃತಿಗಳನ್ನು ಕೂಡಾ ಅವರು ರಚಿಸಿದ್ದಾರೆ.

50 ವರ್ಷ ವಯಸ್ಸಿನ ಶೆರಿಲ್ ಮತ್ತು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಬಹುಕಾಲದ ಗೆಳೆಯರು ಕೂಡಾ. ಈಗ ಶೆರಿಲ್  ತಾನು ಎಂಗೇಜ್ ಆಗಿರೋದಾಗಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಘೋಷಿಸಿದ್ದಾರೆ. 

ಇದನ್ನೂ ಓದಿ | ವಾಟ್ಸಪ್‌ ಹೊಸ ಮೈಲಿಗಲ್ಲು; ಆ್ಯಪ್‌ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು...

ಕೆಲ್ಟಾನ್ ಗ್ಲೋಬಲ್ ಕಂಪನಿಯ ಸಹ-ಸಂಸ್ಥಾಪಕ, ಸಿಇಓ ಆಗಿರುವ 46 ವರ್ಷ ವಯಸ್ಸಿನ ಟಾಮ್ ಬೆರೆಂತಾಲ್ ಜೊತೆ ಶೆರಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸರ್ವೆ ಮಂಕಿ ಕಂಪನಿಯ ಮುಖ್ಯಸ್ಥರಾಗಿದ್ದ ಶೆರಿಲ್ ಪತಿ 2015ರಲ್ಲಿ ಅಪಘಾತವೊಂದರಲ್ಲಿ ಕೊನೆಯುಸಿರೆಳೆದಿದ್ದರು.

ನಿಶ್ಚಿತಾರ್ಥಕ್ಕೆ  ಶುಭಕೋರಿದವರ ಪೈಕಿ ಮಾರ್ಕ್ ಝುಕರ್ಬರ್ಗ್ ಕೂಡಾ ಒಬ್ಬರು.  ಕಂಗ್ರಾಟ್ಸ್, ನೀವಿಬ್ಬರು ಹೇಳಿ ಮಾಡಿಸಿದ ಜೋಡಿ.  ಬಹಳ ಖುಷಿಯಾಯ್ತು, ಎಂದು ಝುಕರ್ಬರ್ಗ್ ಪ್ರತಿಕ್ರಿಸಿದ್ದಾರೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು