ಭಾರತಕ್ಕೆ ಲಗ್ಗೆ ಇಡುತ್ತಿದೆ ಚೀನಾ ಕಾರು-ಶುರುವಾಯ್ತು ಪೈಪೋಟಿ!

Published : Sep 05, 2018, 10:11 PM ISTUpdated : Sep 09, 2018, 09:28 PM IST
ಭಾರತಕ್ಕೆ ಲಗ್ಗೆ ಇಡುತ್ತಿದೆ ಚೀನಾ ಕಾರು-ಶುರುವಾಯ್ತು ಪೈಪೋಟಿ!

ಸಾರಾಂಶ

ಭಾರತದಲ್ಲಿ ಚೀನಾ ಕಂಪೆನಿಗಳು ಮೊಬೈಲ್ ಕ್ರಾಂತಿ ಮಾಡಿದೆ. ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲೂ ಹೊಸ ಹೆಜ್ಜೆ ಇಡಲು ಮುಂದಾಗಿದೆ. ಶೀಘ್ರದಲ್ಲೇ ಚೀನಾ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಬೆಂಗಳೂರು(ಸೆ.05): ಭಾರತದಲ್ಲೀಗ ಚೀನಾ ಮೊಬೈಲ್‌ಗಳೇ ರಾರಾಜಿಸುತ್ತಿದೆ. ಬೆಲೆಯೂ ಕಡಿಮೆ, ಗರಿಷ್ಠ ಫೀಚರ್ಸ್ ಹಾಗೂ ಆಕರ್ಷಕ ವಿನ್ಯಾಸದಿಂದ ಭಾರತದ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿದೆ. ಇದೀಗ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಚೀನಾ ಕಾರು ಲಗ್ಗೆ ಇಡುತ್ತಿದೆ.

ಚೀನಾದ ಅತೀ ದೊಡ್ಡ ಕಾರು ಕಂಪೆನಿ ಚೆರ್ರಿ ಆಟೋಮೊಬೈಲ್ ಇದೀಗ ಭಾರತಕ್ಕೆ ಲಗ್ಗೆ ಇಡುತ್ತಿದೆ. ಭಾರತದಲ್ಲಿ ಮಾರುತಿ ಸುಜುಕಿ ಸಿಯಾಜ್ ಹಾಗೂ ಹ್ಯಂಡೈ ಕ್ರೆಟಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಾರುಗಳನ್ನ ಬಿಡುಗಡೆ ಮಾಡಲು ನಿರ್ಧರಿಸಿದೆ.

ಚೀನಾ ಕಾರು ಭಾರತದ ಪ್ರವೇಶದಿಂದ ಹಲವು ಒಳಿತು ಹಾಗೂ ಕೆಡುಕಗಳು ಇವೆ. ಚೀನಾ ಕಾರಿನಿಂದ ಭಾರತದ ಕಾರುಗಳ ಬೆಲೆ ಕಡಿಮೆಯಾಗಲಿದೆ. ಕಾರಣ ಚೀನಾ ಕಡಿಮೆ ಬೆಲೆಯಲ್ಲಿ ಗರಿಷ್ಠ ಸೌಲಭ್ಯಗಳನ್ನ ಹೊಂದಿದ ಕಾರುಗಳನ್ನ ಬಿಡುಗಡೆ ಮಾಡಲಿದೆ. ಹೀಗಾಗಿ ಗ್ರಾಹಕರು ಸುಲಭವಾಗಿ ಕಾರುಗಳನ್ನ ಖರೀದಿಸೋ ಅವಕಾಶ ಒದಗಿ ಬರಲಿದೆ.

ಅತ್ಯಾಕರ್ಷ ವಿನ್ಯಾಸ, ಆಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಕಾರುಗಳು ಜನಸಾಮ್ಯಾನರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ. ಆದರೆ ಭಾರತದ ಕಾರು ಸಂಸ್ಥೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ.

ಸ್ಥಳೀಯರಿಗೆ ಉದ್ಯೋಗ, ಆರ್ಥಿಕ ಸ್ಥಿತಿಗತಿ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ ಮೇಕ್ ಇನ್ ಇಂಡಿಯಾ ಕನಸಿಗೂ ಭಾರಿ ಪೆಟ್ಟು ಬೀಳಲಿದೆ. ಮುಂದಿನ ವರ್ಷದಲ್ಲಿ ಚೆರ್ರಿ ಕಾರು ಕಂಪೆನಿ ಭಾರತ ಪ್ರವೇಶಿಸೋ ಲೆಕ್ಕಾಚಾರದಲ್ಲಿದೆ. ಆದರೆ ಭಾರತದಲ್ಲಿ ಬಿಡುಗಡೆ ಮಾಡಲಿರೋ ಕಾರಿನ ಬೆಲೆ ಹಾಗೂ ಫೀಚರ್ಸ್ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

PREV
click me!