ರಸ್ತೆಗಿಳಿಯಲಿದೆ ಕೇಂದ್ರ ಸರ್ಕಾರದ ಎಲೆಕ್ಟ್ರಿಕಲ್ ಬಸ್-ಪ್ರಯಾಣ ದರ ಇನ್ನು ಕಡಿಮೆ!

By Web DeskFirst Published Sep 24, 2018, 4:24 PM IST
Highlights

ಇಂಧನ ಬೆಲೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ಬಸ್ ಪ್ರಯಾಣ ದರ ಕೂಡ ಹೆಚ್ಚಾಗಿದೆ. ಇದೀಗ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಬಸ್ ಸೇವೆ ಆರಂಭಿಸಲು ಮುಂದಾಗಿದೆ. ಇಲ್ಲಿದೆ ನೀತಿ ಆಯೋಗದ ಹೊಸ ಯೋಜನೆ ವಿವರ

ನವದೆಹಲಿ(ಸೆ.24): ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಪ್ರಯಾಣ ದರ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಹುಡುಕಲು ಕೇಂದ್ರ ಸರ್ಕಾರ ಇದೀಗ ಎಲೆಕ್ಟ್ರಿಕಲ್ ವಾಹನ  ಬಳಕೆಗೆ ಹೆಚ್ಚು ಒತ್ತು ನೀಡಿದೆ.

ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ಒತ್ತು ನೀಡುತ್ತಿರುವ ಬೆನ್ನಲ್ಲೇ ಕೇಂದ್ರದ ನೀತಿ ಆಯೋಗ ಇದೀಗ ಸಾರ್ವಜನಿಕ ಎಲೆಕ್ಟ್ರಿಕಲ್ ಬಸ್ ಪರಿಚಯಿಸಲು ಪ್ರಸ್ತಾವನೆ ಮುಂದಿಟ್ಟಿದೆ.

ಖಾಸಗಿ ಹಾಗ ಸರ್ಕಾರಿ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕಲ್ ಬಸ್ ಸೇವೆ ಆರಂಭಿಸಲು ನೀತಿ ಆಯೋಗ ಹೊಸ ಯೋಜನೆ ಸಿದ್ದಪಡಿಸಿದೆ. ಅಕ್ಟೋಬರ್ 4ರೊಳಗೆ ಈ ಕುರಿತು ಪ್ರತಿಕ್ರಿಯೆ ನೀಡಲು ಖಾಸಗಿ ಸಂಸ್ಥೆಗಳಿಗೆ ನೀತಿ ಆಯೋಗ ಸೂಚಿಸಿದೆ.

ಎಲೆಕ್ಟ್ರಿಕಲ್ ಬಸ್‌ಗೆ ಹೆಚ್ಚು ಶಕ್ತಿಶಾಲಿ ಲಿಥಿಯಂ ಬ್ಯಾಟರಿ ಅವಶ್ಯಕತೆ ಇದೆ. ಹೀಗಾಗಿ ಬಸ್ ಮೊತ್ತ ದುಬಾರಿಯಾಗಲಿದೆ. ಆದರೆ ಒಂದು ಬಾರಿ ಹೂಡಿಕೆ ಮಾಡಿದರೆ ಸಾರ್ವಜನಿಕರಿಗೆ ಅನೂಕಲವಾಗಲಿದೆ. ಒಂದೆಡೆ ಸಾರ್ವಜನಿಕ ಪ್ರಯಾಣ ದರ ಕಡಿಮೆಯಾಗಲಿದೆ. ಮತ್ತೊಂದೆಡೆ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಲಿದೆ.
 

click me!