ಸುಜುಕಿ ಜಿಮ್ಮಿ ಜೀಪ್ ಸುರಕ್ಷತಾ ಪರೀಕ್ಷೆ ಫಲಿತಾಂಶ ಪ್ರಕಟ!

By Web DeskFirst Published Sep 24, 2018, 2:21 PM IST
Highlights

ಸುಜುಕಿ ಜಿಮ್ಮಿ ಜೀಪ್ ಸುರಕ್ಷತಾ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿರುವ ಜಿಮ್ಮಿ ಜೀಪ್ ಕ್ರಾಶ್ ಟೆಸ್ಟ್ ಫಲಿತಾಂಶದಲ್ಲಿ ಪಡೆದಿರುವ ಅಂಕ ಎಷ್ಟು?  ಈ ಜೀಪ್ ಎಷ್ಟು ಸುರಕ್ಷಿತ? ಇಲ್ಲಿದೆ.

ನವದೆಹಲಿ(ಸೆ.24): ಸುಜುಕಿ ಸಂಸ್ಥೆಯ ಜಿಮ್ಮಿ ಜೀಪ್ ಗರಿಷ್ಠ ಸುರಕ್ಷತಾ ಸೌಲಭ್ಯಗಳನ್ನ ಹೊಂದಿರುವ ಕಾರು ಇದೀಗ NCAP(ಯುರೋಪಿಯನ್ ಹೊಸ ಕಾರು ಕ್ರಾಶ್ ಟೆಸ್ಟ್ ಪರೀಕ್ಷೆ) ಸುರಕ್ಷತಾ ಪರೀಕ್ಷೆ ಮುಗಿಸಿದೆ.

NCAP ಕಾರು ಕ್ರಾಶ್ ಟೆಸ್ಟ್‌ನಲ್ಲಿ ಸುಜುಕಿ ಜಿಮ್ಮಿ ಜೀಪ್ 5 ರಲ್ಲಿ 3 ಸ್ಟಾರ್ ಪಡೆದಿದೆ. ನೂತನ ಕಾರು ಆಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್(AEB) ಸೇರಿದಂತೆ ಹಲವು ಫೀಚರ್ಸ್‌ಗಳನ್ನ ಹೊಂದಿದೆ. ಇತರ ಜೀಪ್‌‌ಗಳಿಗೆ ಹೋಲಿಸಿದರೆ ಸುಜುಕಿ ಜಿಮ್ಮಿ ಗರಿಷ್ಠ ಸುರಕ್ಷತೆ ಹೊಂದಿದೆ. ಆದರೆ ಕಾರು ಕ್ರಾಶ್ ಟೆಸ್ಟ್‌ನಲ್ಲಿ 5ರಲ್ಲಿ 3 ಸ್ಟಾರ್ ಪಡೆಯೋ ಮೂಲಕ ನಿರೀಕ್ಷಿತ ಸುರಕ್ಷತೆ ತೋರಿಲ್ಲ.

ಸುರಕ್ಷಾ ಪರೀಕ್ಷೆಯಲ್ಲಿ ಡ್ರೈವರ್ ಏರ್‌ಬ್ಯಾಗ್ ಚಾಲಕನಿಗೆ ಹೆಚ್ಚಿನ ಸುರಕ್ಷತೆ ನೀಡಿಲ್ಲ. ಆದರೆ ರೇರ್ ಸೀಟ್ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷೆ ನೀಡುವಲ್ಲಿ ಸುಜುಕಿ ಯಶಸ್ವಿಯಾಗಿದೆ. ಹೀಗಾಗಿ 5ರಲ್ಲಿ 3 ಸ್ಟಾರ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

click me!