ಫ್ಲಿಪ್‌ಕಾರ್ಟ್, ಅಮೇಜಾನ್‌ನಿಂದ ಆಧಾರ್ ಲೋನ್ ಸೌಲಭ್ಯ- ತಪ್ಪು ತಪ್ಪು!

By Web DeskFirst Published Oct 9, 2018, 1:45 PM IST
Highlights

ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಗರಿಷ್ಠ ವಹಿವಾಟು ನಡೆಸುತ್ತಿರುವ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಇ ಕಾಮರ್ಸ್ ಕಂಪೆನಿಗಳ ವಿರುದ್ದ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಸುಪ್ರೀಂ ಕೋರ್ಟ್ ತೀರ್ಪನ್ನ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದೆ.

ಬೆಂಗಳೂರು(ಅ.09): ಹಬ್ಬಗಳ ಪ್ರಯುಕ್ತ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಆನ್‌ಲೈನ್ ಶಾಂಪಿಂಗ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಗರಿಷ್ಠ ವಹಿವಾಟು ನಡೆಸುತ್ತಿದೆ. ಆದರೆ ಗ್ರಾಹಕರನ್ನ ತನ್ನತ್ತ ಸೆಳೆಯಲು ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಸುಪ್ರೀಂ ಕೋರ್ಟ್ ನೀಡಿದ ಆಧಾರ್ ಕಾರ್ಡ್ ತೀರ್ಪನ್ನ ಉಲ್ಲಂಘಿಸಿದೆ ಅನ್ನೋ ಆರೋಪಗಳು ಕೇಳಿಬಂದಿದೆ.

ಗರಿಷ್ಠ ಮಾರಾಟಕ್ಕಾಗಿ  ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಡ್ ಕಾರ್ಡ್ ರಹಿತ ಲೋನ್ ಸೌಲಭ್ಯ ಒದಗಿಸಿದೆ. ಇದಕ್ಕಾಗಿ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಯಾವುದೇ ವಸ್ತುಗಳನ್ನ ಲೋನ್ ಮೂಲಕ ಖರೀದಿಸಲು ಅವಕಾಶ ನೀಡಿದೆ.

ಇತ್ತೀಚೆಗೆಷ್ಟೇ ಸುಪ್ರೀಂ ಕೋರ್ಟ್ ಖಾಸಗಿ ಕಂಪೆನಿಗಳು ಆಧಾರ್ ಕಾರ್ಡ್ ಕೇಳುವಂತಿಲ್ಲ ಎಂದು ತೀರ್ಪು ನೀಡಿತ್ತು. ಆದರೆ ಈ ಆದೇಶ ಉಲ್ಲಂಘಿಸಿರುವ ಖಾಸಿಗಿ ಇ ಕಾಮರ್ಸ್ ಕಂಪೆನಿಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಆಧಾರ್ ಲೋನ್ ಸೌಲಭ್ಯ ನೀಡಿದೆ.

ಫ್ಲಿಪ್‌ಕಾರ್ಟ್ 60,000 ರೂಪಾಯಿ ವರೆಗೆ ಬಡ್ಡಿ ರಹಿತ ಲೋನ್ ಸೌಲಭ್ಯ ನೀಡಿದ್ದರೆ, ಅಮೇಜಾನ್ ಕೆಲ ಮೊಬೈಲ್ ಆಪ್‌ಗಳ ಮೂಲಕ ಲೋನ್ ಸೌಲಭ್ಯ ನೀಡಿದೆ. ಗ್ರಾಹಕರರು ತಮ್ಮ ಆಧಾರ್ ನಂಬರ್ ಹಾಗೂ ಪಾನ್ ಕಾರ್ಡ್ ನಂಬರ್ ಬಳಸಿ ಸಾಲ ಸೌಲಭ್ಯವನ್ನ ಉಪಯೋಗಿಸಿಕೊಳ್ಳಬಹುದು. 

ಆಧಾರ್ ಕಾರ್ಡ್ ಲೋನ್ ನೀಡೋ ಮೂಲಕ ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಕಂಪೆನಿಗಳು ಸುಪ್ರೀಂ ಕೋರ್ಟ್ ತೀರ್ಪನ್ನ ಉಲ್ಲಂಘಿಸಿದೆ ಅನ್ನೋ ಆರೋಪ ಕೇಳಿಬಂದಿದೆ. 
 

click me!