ಹುಷಾರ್..! ನಿಮ್ಮದು ಆಂಡ್ರಾಯ್ಡ್ ಫೋನಾಗಿದ್ದರೆ ಬಳಸದಿರಿ ವೈಫೈ

By Suvarna Web DeskFirst Published Oct 16, 2017, 8:54 PM IST
Highlights

ಡಬ್ಲ್ಯೂಪಿಎ2(ವೈರ್'ಲೆಸ್ ಅಕ್ಸೆಸ್ ಪಾಯಿಂಟ್) ಎಂಬ ವೈಫೈ ಸೆಕ್ಯೂರಿಟಿ ಪ್ರೋಟೋಕಾಲ್'ನಲ್ಲಿ KRACK ಎಂಬ ಕೋಡ್'ವೊಂದು ಸೇರಿಕೊಂಡಿದ್ದು ಭದ್ರತಾ ಸಮಸ್ಯೆಗೆ ಕಾರಣವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ವಿಶ್ವಾದ್ಯಂತ ವೈಫೈ ನೆಟ್ವರ್ಕ್'ಗಳಿಗೆ ಭದ್ರತೆ ಒದಗಿಸುವ ಕೆಲ ವಿಧಾನಗಳಲ್ಲಿ ಡಬ್ಲ್ಯೂಪಿಎ2 ಪ್ರಮುಖವಾದುದು.

ನವದೆಹಲಿ(ಅ. 16): ನಿಮ್ಮದು ಆಂಡ್ರಾಯ್ಡ್ ಸ್ಮಾರ್ಟ್'ಫೋನ್ ಆಗಿದ್ದು ವೈಫೈ ಬಳಕೆ ಮಾಡುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸಿ. ಯಾಕೆಂದರೆ, ವೈಫೈ ನೆಟ್ವರ್ಕ್'ನಲ್ಲಿ ಬಹಳ ಗಂಭೀರವಾದ ಸೆಕ್ಯೂರಿಟಿ ಸಮಸ್ಯೆ ಇರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಇದು ಆಂಡ್ರಾಯ್ಡ್ ಸ್ಮಾರ್ಟ್'ಫೋನ್'ಗಳಲ್ಲಿ, ಅದರಲ್ಲೂ ಆಂಡ್ರಾಯ್ಡ್ ಮಾರ್ಷ್'ಮಾಲೋ 6.0 ಹಾಗೂ ಅದಕ್ಕಿಂತ ಈಚಿನ ವರ್ಷನ್'ನ ಸಾಫ್ಟ್'ವೇರ್ ಇರುವ ಸ್ಮಾರ್ಟ್'ಫೋನ್'ಗಳು ಹ್ಯಾಕರ್'ಗಳಿಗೆ ಸುಲಭ ತುತ್ತಾಗಲಿವೆ ಎಂದು ಇಬ್ಬರು ಸಂಶೋಧಕರು ತಿಳಿಸಿದ್ದಾರೆ. ನೀವು ವೈಫೈ ನೆಟ್ವರ್ಕ್'ನಲ್ಲಿ ನಡೆಸುವ ಯಾವುದೇ ಕೆಲಸವನ್ನೂ ದುಷ್ಕರ್ಮಿಗಳು ಹ್ಯಾಕ್ ಮಾಡಬಹುದು. ನಿಮ್ಮ ಇಮೇಲ್ ವಿಳಾಸ, ಪಾಸ್ವರ್ಡ್ ಅಥವಾ ಏನೇ ಡೇಟಾ ಇದ್ದರೂ ಹ್ಯಾಕರ್'ಗಳು ಸುಲಭವಾಗಿ ಡೀಕ್ರಿಪ್ಟ್ ಮಾಡಿ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ. ವಿಶ್ವದ ಶೇ. 41 ರಷ್ಟು ಆಂಡ್ರಾಯ್ಡ್ ಸ್ಮಾರ್ಟ್'ಫೋನ್'ಗಳಿಗೆ ಅಪಾಯದಲ್ಲಿವೆ ಎನ್ನಲಾಘಿದೆ.

ಡಬ್ಲ್ಯೂಪಿಎ2(ವೈರ್'ಲೆಸ್ ಅಕ್ಸೆಸ್ ಪಾಯಿಂಟ್) ಎಂಬ ವೈಫೈ ಸೆಕ್ಯೂರಿಟಿ ಪ್ರೋಟೋಕಾಲ್'ನಲ್ಲಿ KRACK ಎಂಬ ಕೋಡ್'ವೊಂದು ಸೇರಿಕೊಂಡಿದ್ದು ಭದ್ರತಾ ಸಮಸ್ಯೆಗೆ ಕಾರಣವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ವಿಶ್ವಾದ್ಯಂತ ವೈಫೈ ನೆಟ್ವರ್ಕ್'ಗಳಿಗೆ ಭದ್ರತೆ ಒದಗಿಸುವ ಕೆಲ ವಿಧಾನಗಳಲ್ಲಿ ಡಬ್ಲ್ಯೂಪಿಎ2 ಪ್ರಮುಖವಾದುದು.

ಏನು ಮಾಡಬೇಕು?
* ಡಬ್ಲ್ಯೂಎಪಿ2 ಪೂರೈಸುವ ಕಂಪನಿಗಳು ಒಂದು ವೇಳೆ ಅಪ್'ಡೇಟ್ಸ್ ನೀಡಿದರೆ ಕೂಡಲೇ ಅದನ್ನು ಇನ್ಸ್'ಟಾಲ್ ಮಾಡಿಕೊಳ್ಳಿ.
* ಸದ್ಯದ ಮಟ್ಟಿಗೆ ಆದಷ್ಟೂ ವೈಫೈ ಬಳಕೆಯನ್ನೇ ನಿಲ್ಲಿಸಿಬಿಡಿ. ಇದೇ ಸೇಫ್.

click me!