ಬೆಂಗಳೂರು ಮೂಲದ ಎದೆರ್ 450 ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

First Published 9, Sep 2018, 1:18 PM IST
Highlights

ಬೆಂಗಳೂರು ಮೂಲಕ ಎದೆರೆ ಎನರ್ಜಿ ಕಂಪೆನಿ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನಲ್ಲಿ ನಿರ್ಮಾಣವಾದ ಈ ಬೈಕ್ ಬೆಲೆ ಎಷ್ಟು? ವಿಶೇಷತೆಗಳೇನು? ಇಲ್ಲಿದೆ.

ಬೆಂಗಳೂರು(ಸೆ.09):  ಉದ್ಯಾನ ನಗರಿ ಬೆಂಗಳೂರಿನಲ್ಲೇ ತಯಾರಾದ ಎದೆರ್ 450 ಎಲೆಕ್ಟ್ರಿಕಲ್ ಸ್ಕೂಟರ್ ಇದೇ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಈ ಮೂಲಕ ದೇಶದಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಕ್ರಾಂತಿ ಮಾಡಲು ಹೊರಟಿದೆ.

 

 

ಬೆಂಗಳೂರು ಮೂಲದ ಎದೆರ್ ಎನರ್ಜಿ ಕಂಪೆನಿ ಎದೆರ್ 450 ಹಾಗೂ ಎದೆರ್ 340 ಎರಡು ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಎದೆರ್ 450 ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ 1.24 ಲಕ್ಷ(ಎಕ್ಸ್ ಶೋ ರೂಂ ಬೆಂಗಳೂರು) ಇನ್ನು ಎದೆರ್ 340 ಎದೆರ್ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ 1.09 ಲಕ್ಷ (ಎಕ್ಸ್ ಶೋ ರೂಂ ಬೆಂಗಳೂರು).

 

 

ಎದೆರ್ ಎಲೆಕ್ಟ್ರಿಕಲ್ ಸ್ಕೂಟರ್ 2.4 kwh ಲೀಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. 5.4 kw ಪವರ್ ಹಾಗೂ 20.5 ಎನ್ಎಂ ಟಾರ್ಕ್ಯೂ ಉತ್ಪಾದಿಸಲಿದೆ. ಈ ಸ್ಕೂಟರ್ ಗರಿಷ್ಠ ಬೆಲೆ 80 ಕೀಮಿ ಪ್ರತಿ ಗಂಟೆಗೆ. 

ಟಚ್ ಸ್ಕ್ರೀನ್ ಡಿಸ್‌ಪ್ಲೇ, ಸುಲಭ ಚಾರ್ಜಿಂಗ್(ವಾಟರ್ ಪ್ರೂಫ್ ಚಾರ್ಜರ್), ಎಲ್ಇಡಿ ಲೈಟ್ಸ್,  ಹಾಗೂ ಅತ್ಯಾಕರ್ಷ ವಿನ್ಯಾಸದೊಂದಿಗೆ ಎದೆರ್ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. 

Last Updated 9, Sep 2018, 10:04 PM IST