
ಬೆಂಗಳೂರು(ಸೆ.08) ಸುಪ್ರೀಂ ಕೋರ್ಟ್ ಆದೇಶದಂತೆ ನೂತನ ವಾಹನ ವಿಮೆ ಯೋಜನೆ ಜಾರಿಗೆ ಬಂದಿದೆ. ವಾಹನಗಳ ಒಂದು ವರ್ಷದ ವಿಮೆ ಬದಲು ಇದೀಗ ಕಾರುಗಳಿಗೆ 3 ವರ್ಷಗಳ ಇನ್ಶುರೆನ್ಸ್ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ವಿಮೆ ಯೋಜನೆ ಜಾರಿಗೆ ಬಂದಿದೆ.
ನೂತನ ಇನ್ಶುರೆನ್ಸ್ ಪಾಲಿಸಿ ಪ್ರಕಾರ ಹೊಂಡಾ ಮೋಟಾರು ಸಂಸ್ಥೆ ವಾಹನಗಳ ದರ ಪರಿಷ್ಕರಿಸಿದೆ. ನೂತನ ನಿಮಯದಿಂದಾಗಿ ಬೈಕ್ ಹಾಗೂ ಸ್ಕೂಟರ್ ಬೆಲೆ ಹೆಚ್ಚಾಗಿದೆ.
ಇಲ್ಲಿದೆ ಹೊಂಡಾ ಸ್ಕೂಟರ್‌ಗಳ ಪರಿಷ್ಕರಣೆ ದರ
| ಮಾಡೆಲ್ | ಆನ್-ರೋಡ್(ಹಳೆ ಬೆಲೆ) | ಪರಿಷ್ಕರಿಸಿದ ಬೆಲೆ |
| ಆಕ್ಟೀವಾ5ಜಿ | 64500 | 68657-70766 |
| ಆಕ್ವೀವಾ-ಐ | 61000 | 64639 |
| ಆಕ್ಟೀವಾ124 | 70700-74600 | 75504-81464 |
| ಡಿಯೋ | 59100-64700 | 66705-68965 |
| ಎವಿಯೇಟರ್ | 62500-64800 | 70457-72643 |
| ಕ್ಲಿಕ್ | 55300 | 58257-58825 |
| ಗ್ರೆಸಿಯಾ | 68700-73900 | 75497-90440 |
| ನವಿ | 48800 | 58720 |
ಇಲ್ಲಿದೆ ಹೊಂಡಾ ಬೈಕ್ ಪರಿಷ್ಕರಣೆ ದರ
| ಮಾಡೆಲ್ | ಆನ್-ರೋಡ್(ಹಳೆ ಬೆಲೆ) | ಪರಿಷ್ಕರಿಸಿದ ಬೆಲೆ |
| ಸಿಬಿ ಹಾರ್ನೆಟ್160R | 103000-112000 | 107569-116617 |
| ಸಿಬಿ ಯುನಿಕಾರ್ನ್ | 87300 | 95563-98332 |
| ಸಿಬಿ ಶೈನ್ SP | 72500-79000 | 78813-83779 |
| ಸಿಬಿ ಶೈನ್ | 70100-72400 | 75646-78932 |
| ಸಿಬಿಐರ್250ಆರ್ | 189600-222600 | 196814-230206 |
| ಡ್ರೀಮ್ ಯುಗ | 62900 | 68773 |
| ಡ್ರೀಮ್ ನಿಯೋ | 56800-59800 | 65683-66011 |
| ಸಿಡಿ ಡ್ರೀಮ್ | 55000-56800 | 63178-63505 |
| ಲಿವೋ | 65200-67600 | 75051 |