AK-47 ಮಶಿನ್ ಗನ್ ಕಂಪೆನಿಯಿಂದ ಎಲೆಕ್ಟ್ರಿಕಲ್ ಕಾರು ಬಿಡುಗಡೆ

By Web DeskFirst Published Aug 24, 2018, 6:43 PM IST
Highlights

AK-47 ಮಶಿನ್ ಗನ್ ಯಾರಿಗೆ ಗೊತ್ತಿಲ್ಲ ಹೇಳಿ. ಕಲಾಶಿನ್ಕೋವ್ ಕಂಪೆನಿಯ AK-47 ಮಶಿನ್ ಗನ್ ವಿಶ್ವದೆಲ್ಲೆಡೆ ಪ್ರಖ್ಯಾತಿ ಹೊಂದಿದೆ. ಇದೀಗ ಇದೇ AK-47 ಮಶಿನ್ ಗನ್ ತಯಾರಿಕಾ ಕಂಪೆನಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಿದೆ. 

ಮಾಸ್ಕೋ(ಆ.24): ರಷ್ಯಾದ ಕಲಾಶಿನ್ಕೋವ್ ಕಂಪೆನಿ ಮಶಿನ್ ಗನ್‌ಗಳ ತಯಾರಿಕಾ ಕಂಪೆನಿ. ಇವರ ಜನಪ್ರಿಯ ಗನ್ ಎಕೆ-47 ಈಗಲೂ ಹೆಚ್ಚು ಮಾರಾಟವಾಗುತ್ತಿರುವ ಗನ್. ಈ ಹೆಸರಿನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳೇ ತಯಾರಾಗಿದೆ. 

ಎಕೆ-47 ಸೇರಿದಂತೆ ಹಲವು ಮಿಶನ್ ಗನ್ ತಯಾರಿಕಾ ಕಂಪೆನಿ ಕಲಾಶಿನ್ಕೋವ್ ಇದೀಗ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೊಳಿಸಿದೆ. 1970ರ ದಶಕದ ಮಾಡೆಲ್ ಕಾರಿನಿಂದ ಸೂರ್ತಿ ಪಡೆದು ಇದೀಗ ನೂತನ ಕಾರನ್ನ ಬಿಡುಗಡೆಗೊಳಿಸಿದೆ.

1970ರಲ್ಲಿ ಜನರ ನೆಚ್ಚಿನ ಕಾರಾಗಿದ್ದ ಇಝ್ ಕೊಂಬಿ ಮಾಡೆಲ್‌ನ್ನ ಮಾದರಿಯಾಗಿಟ್ಟುಕೊಂಡು ನೂತನ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಿದೆ. ಈ ಕಾರನ್ನ ಒಂದು ಬಾರಿ ಚಾರ್ಜ್ ಮಾಡಿದರೆ 350 ಕೀಮಿ ಪ್ರಯಾಣ ಮಾಡಬಹುದಾಗಿದೆ.

ಸದ್ಯ ಈ ಕಾರು ರಷ್ಯಾದಲ್ಲಿ ಬಿಡುಗಡೆಯಾಗಿದೆ. ಆದರೆ ಭಾರತಕ್ಕೆ ಈ ಕಾರು ಪ್ರವೇಶಿಸೋ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಂತ ತಳ್ಳಿಹಾಕುವಂತಿಲ್ಲ. 

click me!