ಮಳೆ-ಪ್ರವಾಹದಿಂದ ಕಾರನ್ನ ರಕ್ಷಿಸಲು ಬಂದಿದೆ ನೂತನ ಫ್ಲಡ್ ಗಾರ್ಡ್!

By Web DeskFirst Published Aug 27, 2018, 3:53 PM IST
Highlights

ಮಳೆಗಾಲದಲ್ಲಿ ಕಾರುಗಳನ್ನ ಸುರಕ್ಷಿತವಾಗಿಡೋ ಸವಾಲೇ ಸರಿ. ಪಾರ್ಕಿಂಗ್ ಸ್ಥಳ ಜಲಾವೃತಗೊಳ್ಳೋ ಮೂಲಕ ಕಾರುಗಳು ನೀರಿನಲ್ಲಿ ಮುಳುಗಿ ಹಾಳಾಗಿರೋ ಊದಾಹರಣೆಗಳು ಸಾಕಷ್ಟಿವೆ. ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಕಾರುಗಳಿಗೆ ಲೆಕ್ಕವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಇದೀಗ ಪರಿಹಾರ ಕಂಡುಹಿಡಿಯಲಾಗಿದೆ. 

ಬೆಂಗಳೂರು(ಆ.27): ಕೇರಳ ಹಾಗೂ ಕೊಡುಗ ಪ್ರವಾಹದಿಂದ ಜನ ಇನ್ನು ಚೇತರಿಸಿಕೊಂಡಿಲ್ಲ. ಸಾವು-ನೋವು ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರನ್ನ ಮತ್ತಷ್ಟು ಹೈರಾಣಾಗಿಸಿದೆ.  ಸಾವಿರಾರು ಮನೆಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಕಾರುಗಳ ರಿಪೇರಿ ಮಾಡದಷ್ಟು ಹಾಳಾಗಿದೆ.

ಮಳೆ-ಪ್ರವಾಹಗಳಿಂದ ಕಾರುಗಳನ್ನ ರಕ್ಷಿಸಲು ಇದೀಗ ನೂತನ ಫ್ಲಡ್ ಗಾರ್ಡ್ ತಯಾರಿಸವಾಗಿದೆ. ಫಿಲಿಪೈನ್ಸ್‌ನಲ್ಲಿ ಕಂಡುಹಿಡಿದಿರುವ ಈ ಫ್ಲಡ್ ಗಾರ್ಡ್ ಕಾರ್ ಬ್ಯಾಗ್‌ಗೆ ಭಾರಿ ಬೇಡಿಕೆ ಶುರುವಾಗಿದೆ.

ಕಾರಿನ ಪ್ಲಾಸ್ಟಿಕ್ ಕವರ್‌ಗಳ ರೀತಿಯಲ್ಲೇ ಇರುವ ನೂತನ ಫ್ಲಡ್ ಗಾರ್ಡ್ ಕಾರ್ ಬ್ಯಾಗ್ ಕೆಲ  ವಿಶೇಷತೆಗಳನ್ನ ಹೊಂದಿದೆ. ಈ ಫ್ಲಡ್ ಗಾರ್ಡ್ ಕಾರ್ ಬ್ಯಾಗ್ ಒಳಗೆ ಕಾರನ್ನ ನಿಲ್ಲಿಸಬೇಕು. ಬಳಿಕ ಜಿಪ್ ಹಾಕಿ ಮುಚ್ಚಬೇಕು.

ಕಾರು ಬ್ಯಾಗ್ ಒಳಗೆ ಕಾರು ಪಾರ್ಕ್ ಮಾಡಿದ ಮೇಲೆ ಕಾರು ಬ್ಯಾಗ್‌ನ ದಪ್ಪನೆಯ ಪ್ಲಾಸ್ಟಿಕ್‌ ನಿಂದ ಮುಚ್ಚಬೇಕು. ಬ್ಯಾಕ್ ಪ್ಲಾಸ್ಟಿಕ್ ಅಂಚಿನಲ್ಲಿರುವ ಹಗ್ಗದಿಂದ ಕಾರನ್ನ ಪಕ್ಕದ ಪಿಲ್ಲರ್ ಅಥಾವ ಇತರ ಆಧಾರ ಸ್ಥಂಭಗಳಿಗೆ ಕಟ್ಟಿದರೆ ಸಾಕು. ಇನ್ನೆಷ್ಟೇ ಮಳೆ ಬಂದರೂ, ಪ್ರವಾಹ ಬಂದರೂ ಒಂದು ಹನಿ ನೀರು ಕಾರ್ ಬ್ಯಾಗ್ ಕವರಿನೊಳಗ ಪ್ರವೇಶಿಸುವುದಿಲ್ಲ.

ಕಾರು ಪಾರ್ಕ್ ಮಾಡಿದ ಸ್ಥಳ ಜಲಾವೃತಗೊಂಡರೂ ಫ್ಲಡ್ ಗಾರ್ಡ್ ಹಾಕಿದ್ದರೆ ನಿಮ್ಮ ಕಾರು ನೀರಿನಲ್ಲಿ ತೇಲುತ್ತದೆ. ಆದರೆ ನೀರಿನಿಂದ ಯಾವುದೇ ಸಮಸ್ಯೆ ಆಗಲ್ಲ. ಇದರ ಬೆಲೆ 40,000 ರೂಪಾಯಿ. 

ಹೆಚ್ಚು ಮಳೆ ಅಥವಾ ಪ್ರವಾಹಕ್ಕೆ ತುತಾಗೋ ಕಾರು ಮಾಲೀಕರು ಈ ಫ್ಲಡ್ ಗಾರ್ಡ್ ಖರೀದಿಸಿದ್ದರೆ ತಲೆನೋವು ತಪ್ಪದ ಹಾಗೆ. ಪ್ರವಾಹಕ್ಕೆ ಜವಾವೃತಗೊಂಡ ಅಥವ ಕೊಚ್ಚಿ ಹೋದ ಕಾರನ್ನ ಸರಿ ಮಾಡಲು ದುಪ್ಪಟ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಒಂದು ಬಾರಿ ಫ್ಲಡ್ ಗಾರ್ಡ್ ಖರೀದಿಸಿದರೆ ಸಮಸ್ಯೆಗಳು ಪರಿಹಾರ.

click me!