ಹಿಂದಿನಿಂದಲೂ ತಂತ್ರಜ್ಞಾನದ ಬಳಕೆ ರಾಜಕೀಯ ಪಕ್ಷಗಳಿಗೆ ಚುನಾವಣೆಯ ಅವಿಭಾಜ್ಯ ಅಂಗವಾಗಿದೆ. ಪ್ರಚಾರಕ್ಕಾಗಿ ಬಳಸುವ ಹ್ಯಾಂಡ್‌ಬಿಲ್‌ಗಳಾಗಿರಲಿ ಅಥವಾ ಈಗಿನ ಡಿಜಿಟಲ್ ಜಾಹೀರಾತುಗಳಾಗಿರಲಿ, ರಾಜಕೀಯ ಪಕ್ಷಗಳು ಪ್ರಿಂಟಿಂಗ್ ತಂತ್ರಜ್ಞಾನ ಹಾಗೂ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಬಳಸುವುವುದರಲ್ಲಿ ಹಿಂದೆ ಬಿದ್ದಿಲ್ಲ.
‘ಇ-ಯುಗ’ದ ಚುನಾವಣೆ ಸಂದರ್ಭದಲ್ಲಿ ಡಿಜಿಟಲ್ ಜಾಹೀರಾತುಗಳಿಗೆ ರಾಜಕೀಯ ಪಕ್ಷಗಳಿಂದ ಭಾರೀ ಬೇಡಿಕೆಯಿದೆ. ಚುನಾವಣೆಗೆ ಅಭ್ಯರ್ಥಿಗಳು/ಪಕ್ಷಗಳು ಮಾಡುವ ಖರ್ಚಿಗೆ ಮಿತಿ ಹೇರಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವವರು ತಾವು ಮಾಡಿದ ಖರ್ಚನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆದರೆ, ಪತ್ರಿಕೆ/ಟೀವಿ ಜಾಹೀರಾತುಗಳಂತೆ ಇಂಟರ್ನೆಟ್ ಜಾಹೀರಾತುಗಳ ಲೆಕ್ಕ ಇಡುವುದು ಸುಲಭ ಸಾಧ್ಯವಲ್ಲ. ಹಾಗಾಗಿ, ಚುನಾವಣೆ ಖರ್ಚು-ವೆಚ್ಚದ ಬಗ್ಗೆ ಪಾರದರ್ಶಕತೆಯ ಕೊರತೆಯಿದೆ ಎಂಬ ಕೂಗು ಇತ್ತೀಚೆಗೆ ದಟ್ಟವಾಗಿದೆ.
undefined
ನಾವೂ ಯಾರಿಗೂ ಕಮ್ಮಿಯಿಲ್ಲ; ಜಿಯೋಗೆ ಬಿಎಸ್‌ಎನ್‌ಎಲ್ ಸೆಡ್ಡು!
ಈ ಎಲ್ಲಾ ಕೊರತೆ-ಬೇಡಿಕೆಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದೀಗ ಸಾಫ್ಟ್‌ವೇರ್ ದೈತ್ಯ ಗೂಗಲ್ ಕೂಡಾ ಲೋಕಸಭೆ ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಜೋಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ, ರಾಜಕೀಯ ಜಾಹೀರಾತುಗಳ ಲೆಕ್ಕವಿಡಲು ‘ಪಾಲಿಟಿಕಲ್ ಆ್ಯಡ್ ಡೇಟಾಬೇಸ್’ಗೆ ಚಾಲನೆ ನೀಡಲಿದೆ.
ಮುಂಬರುವ ಮಾರ್ಚ್‌ನಲ್ಲಿ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದ್ದು, ಯಾರ್ಯಾರು ಎಷ್ಟೆಷ್ಟು ಡಿಜಿಟಲ್ ಜಾಹೀರಾತುಗಳನ್ನು ನೀಡುತ್ತಿದ್ದಾರೆ, ಅದಕ್ಕಾಗಿ ಎಷ್ಟೆಷ್ಟು ಹಣ ವ್ಯಯಿಸುತ್ತಿದ್ದಾರೆ? ಎಂಬೆಲ್ಲಾ ಮಾಹಿತಿಯನ್ನು ಗೂಗಲ್ ಕಲೆಹಾಕಲಿದೆ.
ಫೆ.14, 2019ರಿಂದ ರಾಜಕೀಯ ಜಾಹೀರಾತುದಾರರ ವೆರಿಫಿಕೇಶನ್ ಪ್ರಕ್ರಿಯೆಯನ್ನು ಗೂಗಲ್ ಆರಂಭಿಸಲಿದ್ದು, ಅವುಗಳ ಗುರುತು ಮತ್ತು ಅರ್ಹತೆಗಳನ್ನು ಪರಿಶೀಲಿಸಲಿದೆ. ಆಫ್‌ಲೈನ್ ಪ್ರಕ್ರಿಯೆ ಮೂಲಕವೂ ಜಾಹೀರಾತುದಾರರ ವಿವರಗಳನ್ನು ಕಲೆ ಹಾಕಿ, ಜಾಹೀರಾತುದಾರರ ಮತ್ತು ಅವುಗಳಿಗೆ ಹಣ ಪಾವತಿಸುವವರ ವಿವರಗಳನ್ನು ಕೂಡಾ ಗೂಗಲ್ ದಾಖಲಿಸಲಿದೆ ಹಾಗೂ ಸರ್ಚ್ ಇಂಜಿನ್ ಮೂಲಕ ಸುಲಭವಾಗಿ ಒದಗಿಸಲಿದೆ.
ಕತ್ತಲಾದ್ರೆ ಏನಾಯಿತು? ವಾಟ್ಸಪ್ ಕೊಡ್ತಾ ಇದೆ ಹೊಸ ಫೀಚರ್!
ಹಾಗಾಗಿ, ಜಾಹೀರಾತುದಾರರು ಇನ್ಮುಂದೆ ಭಾರತೀಯ ಚುನಾವಣಾ ಆಯೋಗ ನೀಡುವ ಪ್ರಿ-ಸರ್ಟಿಫಿಕೇಟನ್ನು [ಅನುಮತಿ ಪತ್ರ] ಸಲ್ಲಿಸಬೇಕಾಗುತ್ತದೆ.