Published : Jul 18, 2022, 08:20 AM ISTUpdated : Jul 18, 2022, 05:19 PM IST

Karnataka News Live updates: ಮಂಗಳೂರು ಮೂಲಕ ಕೇರಳಕ್ಕೆ ತೆರಳಿದವನಿಗೆ ಮಂಕಿಪಾಕ್ಸ್

ಸಾರಾಂಶ

ಮಂಗಳೂರು ಮೂಲಕ ಕೇರಳಕ್ಕೆ ಆಗಮಿಸಿದ ಯುವಕನಿಗೆ ಮಂಕಿಪಾಕ್ಸ್. ಕೇರಳದಲ್ಲಿ ಪತ್ತೆಯಾದ ಎರಡನೇ ಮಂಕಿಪಾಕ್ಸ್ ಪ್ರಕರಣ. ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ್ದ ಯುವಕ. ಕೇರಳದ ಕಣ್ಣೂರು ನಿವಾಸಿ 31 ವರ್ಷದ ಯುವಕ. ಕಳೆದ ಜುಲೈ 13ರಂದು ದುಬೈನಿಂದ ಮಂಗಳೂರಿಗೆ ಆಗಮನ. ಏರ್ ಪೋರ್ಟ್‌ನಿಂದ ನೇರವಾಗಿ ಕಣ್ಣೂರಿಗೆ ತೆರಳಿದ್ದ ಯುವಕ. ಬಳಿಕ ರೋಗ ಲಕ್ಷಣ ಪತ್ತೆ ಹಿನ್ನೆಲೆ ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆ. ಪುಣೆಯ ವೈರಾಲಜಿ ಲ್ಯಾಬ್ ಗೆ ಕಳುಹಿಸಿದ ಮಾದರಿಯಲ್ಲಿ ಮಂಕಿಪಾಕ್ಸ್ ಪತ್ತೆ. ದುಬೈನಿಂದ ಆಗಮಿಸಿದ ಈ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಇದರಲ್ಲಿ ದ.ಕ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರು 01 ಪ್ರಯಾಣಿಕರು ಇದ್ದರು. ರೋಗ ಲಕ್ಷಣ ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಗೆ ದಾಖಲಾಗಲು ಸೂಚನೆ

 

05:17 PM (IST) Jul 18

ತವರಿಗೆ ಆಗಮಿಸಿದ ಮಿಸ್. ಇಂಡಿಯಾ ಸಿನಿ ಶೆಟ್ಟಿ

ಮಂಗಳೂರು: ಮಂಗಳೂರಿಗೆ ಆಗಮಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ. 2022 ಫೆಮಿನಾ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ. ಮಿಸ್ ಇಂಡಿಯಾ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮನ. ಸಿನಿ ಶೆಟ್ಟಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ. ಅರತಿ‌ ಎತ್ತಿ, ಹೂಮಾಲೆ, ಗುಚ್ಛ ನೀಡಿ‌ ಸ್ವಾಗತ. ಮಿರಮಿರ ಸಾರಿಯಲ್ಲಿ ಮಿಂಚುತ್ತಿದ್ದ ಮಿಸ್ ಇಂಡಿಯಾ ಸಿನಿ ಶೆಟ್ಟಿ. ಸಿನಿ ಶೆಟ್ಟಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು. ತುಳು ಭಾಷೆಯಲ್ಲಿ ಜನತೆಗೆ ಧನ್ಯವಾದ ತಿಳಿಸಿದ ಸಿನಿ ಶೆಟ್ಟಿ. ಮಿಸ್ ವಲ್ಡ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಒಳ್ಳೆ ಚಿತ್ರಕತೆ ಸಿಕ್ಕಿದ್ರೆ ಸಿನಿಮಾದಲ್ಲಿಯೂ ಆ್ಯಕ್ಟ್ ಮಾಡುವುದಾಗಿಯೂ ಹೇಳಿದ್ದಾರೆ. 

 

 

04:42 PM (IST) Jul 18

ರಾಷ್ಟ್ರಪತಿ ಚುನಾವಣೆ: ಗೆದ್ದ ಮೇಲೆ ಭಾರತದ ಮೊದಲ ಪ್ರಜೆ ಪಕ್ಷಾತೀತವಾಗಿ ಕೆಲಸ ಮಾಡಬೇಕು!

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಪಕ್ಷ ಆಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯವರು ಇರಬಹುದು. ಆದ್ರೆ ಅವ್ರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವ್ರು ಯಡಿಯೂರಪ್ಪ 2008ರಲ್ಲಿ ಆಪರೇಷನ್ ಕಮಲ‌ ನಡೆಸಿದಾಗ ಯಡಿಯೂರಪ್ಪ ಜೊತೆ ಏನ್ ಮಾಡಿದ್ರಿ ನನಗೆ ಗೊತ್ತಿದೆ. ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ರೆ ಸರ್ಕಾರ ಉಳಿಯುತ್ತಿತ್ತು ಅಂದ್ರು. ಆಯ್ತು ಹಾಗೇ ಅಂದುಕೊಳ್ಳೋಣ. ಆದ್ರೆ ಇವತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ಯಾಕೆ ಹೋಯ್ತು? ಇದನ್ನ ಜನರಿಗೆ ಹೇಳಿ.

ನಾನು ಏನು ಅಪರಾಧ ಮಾಡಿದ್ದೆ? ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ? ಇದು ಕೊನೆ ಚುನಾವಣೆ ಅಂತೀರಾ, ಭ್ರಷ್ಟಾಚಾರ ಸರ್ಕಾರ ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳ್ತಾರೆ. ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರ್ ಕಾರಣ? ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ? ಆದ್ರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ‌? ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡ್ತಿದ್ದಾರೆ. ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ.

ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನ್ ಮಾಡಿದ್ರಿ? ಯಾರ ಮೇಲೆ ಆಕ್ಷನ್ ಆಯ್ತು ಐಎಎಸ್ ಮನೆಯಲ್ಲಿ 5 ಕೋಟಿ ಸಿಕ್ತು ಅ ಅಧಿಕಾರಿಗೆ ಏನ್ ಮಾಡಿದ್ರಿ? ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ? ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ.ಬೇಕಾದ್ರೆ ಅ ಬಗ್ಗೆ ಚರ್ಚೆ ಮಾಡಬಹುದು. ಇವತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋದಾ?ಎಂದು ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

04:13 PM (IST) Jul 18

ರಾಜ್ಯದಲ್ಲಿ ಮುಗಿದ ರಾಷ್ಟ್ರಪತಿ ಚುನಾವಣೆ ಮತದಾನ

ರಾಷ್ಟ್ರಪತಿ ಚುನಾವಣೆಯ ಮತದಾನ ರಾಜ್ಯದಲ್ಲಿ ಮುಕ್ತಾಯಗೊಂಡಿದ್ದು, 224 ಶಾಸಕರು,  ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ಲೋಕಸಭಾ ಸದಸ್ಯರಿಂದ ಮತದಾನ ಮಾಡಲಾಗಿದೆ. ಒಟ್ಟು 226 ಮತದಾರರಿಂದ ಮತದಾನವಾಗಿದೆ. ಅನಾರೋಗ್ಯದ ಹಿನ್ನೆಲೆ ಶ್ರೀನಿವಾಸ್‌ ಪ್ರಸಾದ್‌ ಕೂಡ ವಿಧಾನಸೌಧದಲ್ಲೇ ಮತದಾನ ಮಾಡಲು ಪೂರ್ವಾನುಮತಿ ಪಡೆದಿದ್ದರು. ಇನ್ನೂ, ಜೆಡಿಎಸ್‌ ಪ್ರತಿನಿಧಿಗಳು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರಿಗೆ ಬೆಂಬಲ ನೀಡಿದ್ದಾರೆ. 

03:51 PM (IST) Jul 18

ಆಗಸ್ಟ್‌ 11 ಪರಿಷತ್‌ ಉಪಚುನಾವಣೆ, ಅಂದೇ ಫಲಿತಾಂಶ

ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ ನಂತರ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಚುನಾವಣಾ ಆಯೋಗ ಆಗಸ್ಟ್‌ 11ಕ್ಕೆ ಪರಿಷತ್‌ ಉಪ ಚುನಾವಣೆ ದಿನಾಂಕ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಮತದಾನ ಮತ್ತು ಫಲಿತಾಂಶ ಎರಡೂ ಅಂದೇ ಇರಲಿದೆ ಎಂದು ಆಯೋಗ ತಿಳಿಸಿದೆ. ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ. 

03:45 PM (IST) Jul 18

ಕಸ್ತೂರಿ ರಂಗನ್‌ ಪಶ್ಚಿಮಘಟ್ಟಗಳ ಕುರಿತ ವರದಿ ಅನುಷ್ಠಾನಕ್ಕೆ ವಿರೋಧ, ಜನಪ್ರತಿನಿಧಿಗಳ ಸಭೆ

ಪಶ್ಚಿಮ ಘಟ್ಟಗಳ ಕುರಿತಾದ ಕೇಂದ್ರ ಅರಣ್ಯ ಸಚಿವಾಲಯದ ಅಧಿಸೂಚನೆ ವಿರೋಧಿಸಿ ಶಾಸಕರ ಸಭೆ ಆರಂಭಿಸಲಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದ ಜನ ಪ್ರತಿ ನಿಧಿ ಗಳ ಸಭೆ ಗೃಹ ಸಚಿವ ಅರಗ ಜ್ಙಾನೇಂದ್ರ ನೇತೃತ್ವದಲ್ಲಿ ನಡೆಯುತ್ತಿದೆ. ವಿಕಾಸ ಸೌಧದಲ್ಲಿ ನಡೆಯುತ್ತಿರುವ ಸಭೆ. ಕೇಂದ್ರ ಅರಣ್ಯ ಸಚಿವಾಲಯದ ಅಧಿಸೂಚನೆಗೆ ಪಶ್ಚಿಮ ಘಟ್ಟದ ಜನ ಮತ್ತು ಜನಪ್ರತಿನಿಧಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ. ಆಕ್ಷೇಪಣೆ ಇದ್ದಲ್ಲಿ ಎರಡೂ ತಿಂಗಳ ಒಳಗಾಗಿ ಸಲ್ಲಿಸಬಹುದು ಎಂದು ಸೂಚನೆ ನೀಡಿದ್ದ ಕೇಂದ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸುತ್ತಿರುವ ಮಲೆನಾಡು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳು, ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂಬ ಒಗ್ಗಟ್ಟಿನ ನಿಲುವು ತಳೆಯುವ ಸಾಧ್ಯತೆಯಿದೆ ಎನ್ನಲಾಗಿದೆ. 

03:08 PM (IST) Jul 18

ರಾಯಚೂರು: ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು

ರಾಯಚೂರು; ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ. ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಘಟನೆ. ಮೃತ ನಾಲ್ವರು ಮಧ್ಯಪ್ರದೇಶ ಮೂಲದವರು ಎಂದು ಗುರುತು. ರಸ್ತೆ ಅಪಘಾತದಿಂದ ಕೆಲ ಕಾಲ ಟ್ರಾಫಿಕ್ ಜಾಮ್. ಎರಡು ಜೆಸಿಬಿಯಿಂದ ಅಪಘಾತ ವಾಹನಗಳ ತೆರವು.
ಸದ್ಯ ಮೃತದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ರವಾನೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

03:06 PM (IST) Jul 18

ಚಿತ್ರದುರ್ಗ: ಕಾರಿಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ

ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ದುರ್ಮರಣ‌. ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಫಘಾತ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಸಮೀಪದ ಹೆದ್ದಾರಿ. ಇದುವರೆಗೂ ಮೃತರ ಗುರುತು ಪತ್ತೆ ಆಗಿಲ್ಲ. ಕಾರು ಚಾಲಕನ ಅಜಾಗರೂಕತೆಯಿಂದ ನಡೆದ ದುರ್ಘಟನೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ.

03:06 PM (IST) Jul 18

ಚಿತ್ರದುರ್ಗ: ಕಾರಿಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ

ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ದುರ್ಮರಣ‌. ಕೊಳಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಫಘಾತ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಸಮೀಪದ ಹೆದ್ದಾರಿ. ಇದುವರೆಗೂ ಮೃತರ ಗುರುತು ಪತ್ತೆ ಆಗಿಲ್ಲ. ಕಾರು ಚಾಲಕನ ಅಜಾಗರೂಕತೆಯಿಂದ ನಡೆದ ದುರ್ಘಟನೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ.

02:23 PM (IST) Jul 18

ಜಿಎಸ್‌ಟಿ ಏರಿಕೆ ವಿರುದ್ಧ ಎಚ್‌ಡಿಕೆ ಗರಂ: ಜನವಿರೋಧಿ ಸರ್ಕಾರ ಎಂದ ಮಾಜಿ ಸಿಎಂ

ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಇದಾಗಿದೆ ಎಂದು ಖಂಡಿಸಿದ್ದಾರೆ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆ ಆಗಿದೆ. ಈಗ ಆಹಾರ ಪದಾರ್ಥಗಳಿಗೆ GST ಏರಿಕೆ ಮಾಡಲಾಗಿದೆ. ಇದು ಜನ ವಿರೋಧಿ ಸರ್ಕಾರ. ಮೋದಿ ಅವ್ರು ಉಚಿತ ಕಾರ್ಯಕ್ರಮ ಬೇಡ ಅಂತಾರೆ. ಈ ದೇಶದಲ್ಲಿ 1.7 ಮಿಲಿಯನ್ ಆಹಾರದ ಕೊರತೆಯಿಂದ ಸಾವು ಆಗ್ತಿದೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಸರಿಯಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ರೇಖೆ ಬಡ ದೇಶಕ್ಕಿಂತ ಹಿಂದೆ ಇದೆ. GDP ಜೊತೆ ಬಡತನ ರೇಖೆ ಕಡಿಮೆ‌ ಮಾಡಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ. ಹಾಲು,‌ಮೊಸರು, ಉಪ್ಪಿನಕಾಯಿ ಮೇಲೆ ಟ್ಯಾಕ್ಸ್ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

GST ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರೋದು. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತೆ. ಬಿಜೆಪಿ ಸಮರ್ಥನೆ ಮಾಡಿಕೊಳ್ಳಬೇಕು. ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡೋದು ಅವ್ರ ಗುಣ. 8 ವರ್ಷದಿಂದ ಎಲ್ಲಿ ಒಳ್ಳೆ‌ ದಿನಗಳು ಬಂತು. ಡಾಲರ್ ಮುಂದೆ ರೂಪಾಯಿ ಬೆಲೆ ಏನಾಗಿದೆ. ಫಾರಿನ್ ಎಕ್ಸ್ ಚೇಂಜ್ ಕೂಡಾ ಖಾಲಿ ಆಗ್ತಿದೆ. ನಮ್ಮ ಕೇಂದ್ರ ಸರ್ಕಾರದ ನೀತಿಯಿಂದ ವಿದೇಶದವರು ಬಂಡವಾಳ ಹೂಡಿಕೆ ವಾಪಸ್ ಪಡೆದಿದ್ದಾರೆ. ಇದು ಚರ್ಚೆ ಮಾಡಬೇಕು. ಕೋವಿಡ್ ನಿಂದ ಅನೇಕ ಕುಟುಂಬ ಬೀದಿಗೆ ಬಂದಿದೆ. ಇಂತಹ ಜನರ ಮೇಲೆ ಹೊರೆ ಹಾಕ್ತಿದ್ದೀರಾ. GST ಬಗ್ಗೆ ನಾನು ಮೊದಲೇ ವಿರೋಧ ಮಾಡಿದ್ದೆ. ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿದ್ದೀರಾ ಅಂತ ಹೇಳಿದ್ದೆ. ಈ ನೀತಿಯನ್ನ ಪುನರ್ ಪರಿಶೀಲನೆ ಮಾಡಬೇಕು. ಕೇಂದ್ರಕ್ಕೆ ಕುಮಾರಸ್ವಾಮಿ ಒತ್ತಾಯ. ರಾಷ್ಟ್ರಪತಿ ಚುನಾವಣೆ ಪಕ್ಷ ಆಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿ ಅವ್ರು ಇರಬಹುದು. ಆದ್ರೆ ಅವ್ರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವ್ರು ಯಡಿಯೂರಪ್ಪ 2008 ರಲ್ಲಿ ಆಪರೇಷನ್ ಕಮಲ‌ ನಡೆಸಿದಾಗ ಯಡಿಯೂರಪ್ಪ ಜೊತೆ ಏನ್ ಮಾಡಿದ್ರಿ ನನಗೆ ಗೊತ್ತಿದೆ. ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ರೆ ಸರ್ಕಾರ ಉಳಿಯುತ್ತಿತ್ತು ಅಂದ್ರು. ಆಯ್ತು ಹಾಗೇ ಅಂದುಕೊಳ್ಳೋಣ. ಆದ್ರೆ ಇವತ್ತು ಮಹಾರಾಷ್ಟ್ರ ರಲ್ಲಿ ಸರ್ಕಾರ ಯಾಕೆ ಹೋಯ್ತು. ಇದನ್ನ ಜನರಿಗೆ ಹೇಳಿ. ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ. ಇದು ಕೊನೆ ಚುನಾವಣೆ ಅಂತೀರಾ. ಭ್ರಷ್ಟಾಚಾರ ಸರ್ಕಾರ ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳ್ತಾರೆ. ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರ್ ಕಾರಣ. ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ. ಆದ್ರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ‌? ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನ್ ಮಾಡಿದ್ರಿ. ಯಾರ ಮೇಲೆ ಆಕ್ಷನ್ ಆಯ್ತು. ಐಎಎಸ್ ಮನೆಯಲ್ಲಿ 5 ಕೋಟಿ ಸಿಕ್ತು ಅ ಅಧಿಕಾರಿಗೆ ಏನ್ ಮಾಡಿದ್ರಿ. ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ. ಬೇಕಾದ್ರೆ ಅ ಬಗ್ಗೆ ಚರ್ಚೆ ಮಾಡಬಹುದು. ಇವತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋದಾ? ಎಂದು ಸಿದ್ದರಾಮಯ್ಯರನ್ನು ಎಚ್‌ಡಿಕೆ ಪ್ರಶ್ನಿಸಿದ್ದಾರೆ. 

01:26 PM (IST) Jul 18

ಎಂಟೇ ದಿನಕ್ಕೆ ಜವಾಬ್ದಾರಿ ಮರೆಯಿತಾ ಕೊಡಗು ಜಿಲ್ಲಾಡಳಿತ..?

ಎಂಟೇ ದಿನಕ್ಕೆ ಕಾಳಜಿ ಕೇಂದ್ರದಿಂದ ಜನರ ಹೊರಹಾಕಲು ಸಿದ್ಧತೆ ಮಾಡಿಕೊಂಡಿದೆ. ಕೊಡಗಿನ ಚೆಟ್ಟಳ್ಳಿಯಲ್ಲಿ ಅಧಿಕಾರಿಗಳಿಂದ ಅಮಾನವೀಯ ನಡವಳಿಕೆ ಕಂಡುಬಂದಿದೆ. ಅಧಿಕಾರಿಗಳು ಮನುಷ್ಯತ್ವ ಮರೆತು ನಡೆದುಕೊಳ್ಳುತ್ತಿದ್ದಾರ ಎಂಬ ಪ್ರಶ್ನೆ ಇದರಿಂದ ಎದುರಾಗಿದೆ. ಮಳೆ ಕಡಿಮೆ ಆಗಿದೆ ಮನೆಗೆ ಹೋಗಿ ಎಂದು ನೊಟೀಸ್ ನೀಡಲಾಗಿದ್ದು, ರಾತ್ರೋ ರಾತ್ರಿ ಕಾಳಜಿ ಕೇಂದ್ರದಲ್ಲಿರುವವರು ದಿಗ್ಭ್ರಮೆಗೊಳಗಾಗಿದ್ದಾರೆ. ನಿನ್ನೆ ರಾತ್ರಿ ನೊಟೀಸ್ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು. ಇಂದು ಬೆಳಿಗ್ಗೆಯಿಂದ ಆಹಾರ ಕೂಡ ನೀಡದ ಅಧಿಕಾರಿಗಳು. ಬೆಳಿಗ್ಗೆಯಿಂದ ಕಾಳಜಿ ಕೇಂದ್ರದಲ್ಲಿ ಆಹಾರವಿಲ್ಲ. ಕಾಳಜಿ ಕೇಂದ್ರದಿಂದ ತೆರಳಲು ಸಂತ್ರಸ್ತರಿಗೆ ಕಂದಾಯ ಇಲಾಖೆ ನೋಟಿಸ್. ರಾತ್ರೋರಾತ್ರಿ ಕಾಳಜಿ ಕೇಂದ್ರದಿಂದ ತೆರಳು ಸಂತ್ರಸ್ತರಿಗೆ ನೋಟಿಸ್. ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್.ಎಸ್.ಚೆಟ್ಟಳ್ಳಿ (ಪೊನ್ನತ್ತ್ ಮೊಟ್ಟೆ) ಯಲ್ಲಿರುವ ಕಾಳಜಿ ಕೇಂದ್ರ. ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ಘಟನೆ. ಕಾಳಜಿ ಕೇಂದ್ರದಲ್ಲಿ ಇರುವ 30ಕ್ಕೂ ಹೆಚ್ಚು ಸಂತ್ರಸ್ತರು. ಶಾಲೆಯಿಂದ ತೆರಳಲು ಸಂತ್ರಸ್ತರಿಗೆ ನೋಟಿಸ್. ಸೂಕ್ತ ವ್ಯವಸ್ಥೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವವರೆಗೆ ಕಾಳಜಿ ಕೇಂದ್ರಬಿಟ್ಟು ತೆರಳಲ್ಲ ಎಂದು ಸಂತ್ರಸ್ತರು ಪಟ್ಟು. ಮಧ್ಯರಾತ್ರಿ ಕಂದಾಯ ಇಲಾಖೆಯಿಂದ ನೋಟಿಸ್. ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಯಲ್ಲಿ ಜೀವನ ನಡೆಸುತ್ತಿದ್ದ 07 ಕುಟುಂಬಗಳು. ಪೊನ್ನತ್ ಮೊಟ್ಟೆಯಲ್ಲಿ ಭೂಕುಸಿತದ ಆತಂಕದಲ್ಲಿದ್ದ ಕುಟುಂಬಗಳು. ಏಳು ಕುಟುಂಬಗಳನ್ನು ಅಧಿಕಾರಿಗಳೇ ಅಲ್ಲಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಕಂದಾಯ ಇಲಾಖೆಯ ನಿರ್ಧಾರಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

01:20 PM (IST) Jul 18

ಶಿರಾಡಿ ಘಾಟ್ ಬಳಿಕ ಚಾರ್ಮಾಡಿ ಘಾಟ್ ನಲ್ಲೂ ಸಂಚಾರ ಅಪಾಯ

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ರಸ್ತೆಯಲ್ಲಿ ಸಣ್ಣ ಬಿರುಕು ಕಂಡುಬಂದಿದೆ. ಘಾಟ್ ರಸ್ತೆಯ ಕಿರು ಸೇತುವೆ ಬಳಿ ರಸ್ತೆ ಕುಸಿದು ಬಿರುಕುಗೊಂಡಿದ್ದು, ಅಪಾಯಕಾರಿಯಾಗುವ ಮುನ್ಸೂಚನೆಯಿದೆ. ಭಾರೀ ಪ್ರಪಾತದ ಮೇಲ್ಭಾಗದಲ್ಲಿರೋ ಕಿರು ಸೇತುವೆಯ ರಸ್ತೆ. ಸೇತುವೆ ತಡೆಗೋಡೆ ಮತ್ತು ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲ್ಯಾಬ್ ಕುಸಿತವಾಗಿದೆ. ಸದ್ಯ ಬ್ಯಾರಿಕೇಡ್ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ನೋಡಿಕೊಳ್ಳಲಾಗುತ್ತಿದೆ. ಬ್ಯಾರಿಕೇಡ್ ಅಳವಡಿಸಿದ ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಯಾದಗಿರಿ:

ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಛಾಯಾ ಜಗವತಿಗೆ ಜಲಕಂಟಕದ ಭಯ ಶುರುವಾಗಿದೆ. ಕೃಷ್ಣೆಯ ಅಬ್ಬರಕ್ಕೆ ಛಾಯಾ ಭಗವತಿ ದೇವಸ್ಥಾನದ ದರ್ಶನಕ್ಕೆ ನಿರ್ಬಂಧ, ದೇವಸ್ಥಾನದೊಳಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಮುಂಜಾಗ್ರತೆ ವಹಿಸಿ ದೇವಸ್ಥಾನದೊಳಗೆ ತೆರಳಿ ದೇವರ ದರ್ಶನಕ್ಕೆ ಅವಕಾಶ ನಿಷೇಧ ಹೇರಲಾಗಿದೆ. ಮೆಟ್ಟಿಲುಗಳ ಮೇಲೆ ಮೂರ್ತಿ ಇಟ್ಟು ಅರ್ಚಕರಿಂದ ಪೂಜೆ ನೆರವೇರಿಸಲಾಗಿದ್ದು, ಭಕ್ರತು ಮೆಟ್ಟಿಲುಗಳ ಮೇಲೆ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.  

ಚಾಮರಾಜನಗರ: 

ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಕಳ್ಳ ದಾರಿ ಹಿಡಿದ ಪ್ರವಾಸಿಗರು. ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ಹಿನ್ನೆಲೆ. ಪ್ರವಾಸಿತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತ. ಚಾಮರಾಜನಗರ ಜಿಲ್ಲಾಡಳಿತದಿಂದ ಹೋಗೆನಕಲ್, ಭರಚುಕ್ಕಿ ಹಾಗೂ ವೆಸ್ಲಿ ಸೇತುವೆಗೆ ನಿರ್ಬಂಧ. ನಿರ್ಬಂಧದ ನಡುವೆ ಕಳ್ಳ ದಾರಿಯಲ್ಲಿ ಪ್ರವಾಸಿತಾಣಕ್ಕೆ ತೆರಳುತ್ತಿರುವ ಪ್ರವಾಸಿಗರು. ಕೊಳ್ಳೆಗಾಲದ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದಿಂದ ಭರಚುಕ್ಕಿಗೆ ಅತಿಕ್ರಮ ಪ್ರವೇಶ. ಜಲಪಾತದ ತುದಿಗೆ ಹೋಗಿ ನಿಲ್ಲುತ್ತಿರುವ ಪ್ರವಾಸಿಗರು. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

01:15 PM (IST) Jul 18

ಮಕ್ಕಳ ಭಿಕ್ಷಾಟನೆ ತಡೆಗೆ ಸರ್ಕಾರ ಬದ್ಧ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಗೃಹಸಚಿವ ಜಂಟಿ ಸುದ್ದಿಗೋಷ್ಟಿ ನಡೆಸಿ, ಮಕ್ಕಳ ಭಿಕ್ಷಾಟನೆ ಸಂಬಂಧ ಮಾತನಾಡಿದರು. ಐದನೇ ಬಾರಿ ಸಭೆ ಕರೆದು ಭಿಕ್ಷಾಟನೆ ನಿಲ್ಲಿಸಲು ಕ್ರಮ. ಮೂರು ರೀತಿ ಭಿಕ್ಷುಕರು ಕಾಣ್ತಾರೆ. ವಯೋ ಸಹಜ, ಮಾನಸಿಕ ಅಸ್ವಸ್ಥರು, ತೃತಿಯ ಲಿಂಗಿಗಳು ಹಾಗೂ ಮಕ್ಕಳ ಭಿಕ್ಷಾಟನೆ ಕಂಡುಬರುತ್ತೆ. ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಕಂಡುಬರ್ತಿದೆ. ಮಕ್ಕಳಿಗೆ ಮತ್ತು ಬರುವ ಅಂಶ ನೀಡಿ ತಾಯಿಯರಿಂದ ಭಿಕ್ಷೆ ಬೇಡುವುದು ಕಂಡುಬರ್ತಿದೆ. ಕಾರ್ಮಿಕ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. 80 ಮಕ್ಕಳನ್ನ ರಕ್ಷಿಸಿ ನಿರ್ಭಯ ಕೇಂದ್ರಕ್ಕೆ ಸೇರಿಸಲಾಗಿದೆ. ತಾಯಿ, ಮಗು ಸಂರಕ್ಷಣೆ ಮಾಡಿ, ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಕೊಡುವುದು. ನ್ಯಾಯಾಲಯದ ಸೂಚನೆ ಮೇರೆಗೆ ನಗರ ಪ್ರದೇಶಕ್ಕೆ ಸೀಮಿತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. 18 ವರ್ಷದ ಒಳಗಿನ 720 ಮಕ್ಕಳನ್ನ ಗುರ್ತಿಸಿ ಅವರನ್ನ ರಕ್ಷಣೆ ಮಾಡಿದ್ದೇವೆ. ಬೆಂಗಳೂರಿನ 8 ಡಿವಿಜನ್‌ಗಳಲ್ಲಿ ಎಸಿಪಿಗಳನ್ನ ನೇಮಕ ಮಾಡಲಾಗಿದೆ. ಎಸಿಪಿಗಳು ಮಕ್ಕಳನ್ನ ರಕ್ಷಿಸಿ, ಮಕ್ಕಳ ರಕ್ಷಣಾ ಕೇಂದ್ರಕ್ಕೆ ಸೇರಿಸಬೇಕು ಎಂಬ ಆದೇಶ ನೀಡಲಾಗಿದೆ. ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ತರಲು ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣ ಬದ್ದವಾಗಿದೆ. ತಾಯಿ, ಮಗು ಬೀದಿಯಲ್ಲಿ ಭಿಕ್ಷೆ ಬೇಡುವುದು ತಪ್ಪಿಸಬೇಕಿದೆ. ಇದಕ್ಕೆ ಬೇಕಾದ ವಾಹನ, ಊಟ ಎಲ್ಲಾ ಆರ್ಥಿಕ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು. 

01:11 PM (IST) Jul 18

ಮತ್ತೆ ಸಿಎಂ ಆಗಬೇಕೆಂಬ ಹುಚ್ಚಿಲ್ಲ, ಆದರೆ ಜನರಿಗಾಗಿ ಅಧಿಕಾರಕ್ಕೆ ಬರಬೇಕು: ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒಂದು ವಾರದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಆರೋಗ್ಯ ಸಮಸ್ಯೆ ಆಗಿತ್ತು. ಹೆಮ್ಮಿಗೆಪುರ ವಾರ್ಡ್ ವಿಚಾರದಲ್ಲಿ ನೀವೆಲ್ಲಾ ಒಗ್ಗಟ್ಟಾಗಿದೀರ. 2006 ರಲ್ಲಿ ನಾನು ಸಿಎಂ ಆದಾಗ 198 ವಾರ್ಡ್ ಮಾಡಲು ಕಾರಣ ಇತ್ತು. ಹಣದ ಬಳಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಮೈಸೂರು-ಬೆಂಗಳೂರು ಅಭಿವೃದ್ಧಿ ಮಾಡಲು ಮುಂದಾದೆ. ಹಾಗಾಗಿ 98 ವಾರ್ಡ್ ಗಳನ್ನು 198 ವಾರ್ಡ್ ಮಾಡಿದೆ. ಮುಂದೆ ಬಂದ ಜನಪ್ರತಿನಿಧಿಗಳು ಹಣ ಲೂಟಿ ಮಾಡಿದ್ರು. ಕೆಲಸ ಮಾಡದೇ ಬಿಲ್ ಮಾಡಿಕೊಂಡ್ರು. ನಿತ್ಯ 40 ಪರ್ಸೆಂಟ್ ದು ಮಾಧ್ಯಮದಲ್ಲಿ ಬರ್ತಾನೇ ಇವೆ. ಇಂದು ಜಿಎಸ್ ಟಿ ಏರಿಕೆ ಮಾಡಿದ್ದಾರೆ. ಹಾಲು, ಮೊಸರು ಹೀಗೆ ಜನರು ಉಪಯೋಗಿಸುವ ವಸ್ತು ಪದಾರ್ಥಗಳ ಮೇಲೆ ಏರಿಕೆ ಮಾಡಿದ್ದಾರೆ. ಹೆಮ್ಮಿಗೆ ಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ. ನಮ್ಮ ಪಕ್ಷ ಅಪಪ್ರಚಾರ ಮಾಡಿದ್ರು ಅದರಿಂದ ನಾವು ಸೋಲಿಸಿದ್ವಿ. ಕುತಂತ್ರ ಮಾಡಿ ನಮ್ಮನ್ನು ಸೋಲಿಸಲು ಮುಂದಾದರು. ಜೆಡಿಎಸ್ ನ ಪ್ರಾಮಾಣಿಕವಾಗಿ ಗೆಲ್ಲಿಸಲು ಶ್ರಮ ಪಡಬೇಕಾಗಿದೆ. ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಮತ್ತೆ ಸಿಎಂ ಆಗಬೇಕು ಅನ್ನೋ ಹುಚ್ಚಿಲ್ಲ. ಆದರೆ ಬಡವರಿಗಾಗಿ ನಾವು ಅಧಿಕಾರಕ್ಕೆ ಬರಬೇಕು. ಪ್ರತಿವಾರ್ಡ್ ನಲ್ಲೂ ಇಂಗ್ಲೀಷ್ ಶಾಲೆ ತೆರೆಯಬೇಕು. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗ್ತಾ ಇದೆ. ಅದಕ್ಕೆ ಹೇಳೋವ್ರು ಕೇಳೋವ್ರು ಯಾರೂ ಇಲ್ಲ ಅನ್ಸುತ್ತೆ. ನಾನು ಎರಡು ಬಾರಿ ಸಿಎಂ ಆಗಿದ್ದು ಕೂಡ ಬೇರೆಯವರ ಹಂಗಲ್ಲಿ. ಹಾಗಾಗಿ ನಮಗೆ ಸ್ವತಂತ್ರ ಸರ್ಕಾರ ಬೇಕಿದೆ. ಯಶವಂತಪುರ ಕ್ಷೇತ್ರವನ್ನು ಗೆಲ್ಲಿಸಬೇಕು ನೀವು ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.

12:26 PM (IST) Jul 18

ಚಿಕ್ಕಮಗಳೂರಿನಲ್ಲಿ ಸೇತುವೆ ಕುಸಿತ

ಮಲೆನಾಡಿನಲ್ಲಿ ಮಳೆ ಬಿಡುವು ನೀಡಿದ್ರು ಅನಾಹುತ ಮಾತ್ರ ನಿಲ್ಲುತ್ತಿಲ್ಲ. ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕೊಗ್ರೆ ಸೇತುವೆ ಕುಸಿತಗೊಂಡಿದ್ದು ಸಂಚಾರ ಬಂದಾಗಿದೆ. ಶೃಂಗೇರಿಯಿಂದ ಹೊರನಾಡು ಸಂಪರ್ಕಿಸುವ ಬೈಪಾಸ್ ರಸ್ತೆ ಇದಾಗಿದ್ದು, ಮಳೆ ನಿಂತ ನಂತರ ಸೇತುವೆ ಕುಸಿದಿದೆ. ಕಳೆದ ವರ್ಷವೂ ಕುಸಿತವಾಗಿದ್ದ ಸೇತುವೆ. ತಾತ್ಕಾಲಿಕವಾಗಿ ಲಘುವಾಹನಕ್ಕೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅಧಿಕ ಮಳೆಯಿಂದ ಸೇತುವೆ ಕುಸಿತವಾಗಿದೆ. ಕೊಗ್ರೆ ಹೊರನಾಡು ಮಧ್ಯೆ ಹಲವು ಗ್ರಾಮಗಳ ಜನ್ರಿಗೆ ಸಮಸ್ಯೆ ತಂದಿಟ್ಟ ಸೇತುವೆ ಕುಸಿತ‌ವಾಗಿದ್ದು, ಆಟೊ ಬೈಕ್ ಕಾಲ್ನಡಿಗೆ ಕಿರು ಸೇತುವೆ ಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಕೊಗ್ರೆ ಸೇತುವೆ.

12:23 PM (IST) Jul 18

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ

ಈ ದಿನ ಶಿವಮೊಗ್ಗ ಜಿಲ್ಲೆಯ ಜಲಾಶಯಗಳಲ್ಲಿ ಎಷ್ಟು ನೀರಿನ ಒಳಹರಿವಿದೆ ಮತ್ತು ಒಟ್ಟೂ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. 

ತುಂಗಾ ಜಲಾಶಯ: 

ದಿನಾಂಕ: 18/07/2022

ಇಂದಿನ ಮಟ್ಟ: 588.02 mtr

ಗರಿಷ್ಠ ಮಟ್ಟ : 588.24 Mtr
ಒಳಹರಿವು: 44497 cusecs

ಹೊರಹರಿವು: 40678 cusecs

ನೀರು ಸಂಗ್ರಹ:  3.112 Tmc

ಸಾಮರ್ಥ್ಯ: 3.24 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 Mtr

ಭದ್ರಾ ಜಲಾಶಯ:

ದಿನಾಂಕ: 18/07/2022

ಇಂದಿನ ಮಟ್ಟ: 182'3½" ಅಡಿ

ಗರಿಷ್ಠ ಮಟ್ಟ : 186 ಅಡಿ

ಒಳಹರಿವು: 33891 cusecs

ಹೊರಹರಿವು: 33301 cusecs

ನೀರು ಸಂಗ್ರಹ: 66.939 Tmc

ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 163'0" ಅಡಿ

ಲಿಂಗನಮಕ್ಕಿ ಜಲಾಶಯ:
ದಿನಾಂಕ: 18/07/2022

ಇಂದಿನ ಮಟ್ಟ: 1795.60 ಅಡಿ

ಗರಿಷ್ಠ ಮಟ್ಟ : 1819 ಅಡಿ

ಒಳಹರಿವು: 41604 cusecs

ಹೊರಹರಿವು: 4799.17

ನೀರು ಸಂಗ್ರಹ: 85.38 TMC 

ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1791.20  ಅಡಿ

12:21 PM (IST) Jul 18

ಮಳೆಯಿಂದ ರಸ್ತೆ ಹಾನಿ, ಬೆಳಗಾವಿಯಲ್ಲಿ ಪ್ರತಿಭಟನೆ

ಮಳೆಗೆ ರಸ್ತೆಗಳು ಹಾಳು, ಬೈಲಹೊಂಗಲ ತಾಲೂಕಾಡಳಿತ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಬೈಲಹೊಂಗಲ-ಧಾರವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಬೈಲಹೊಂಗಲ ಪಟ್ಟಣದ ನಿವಾಸಿಗಳಿಂದ ರಸ್ತೆ ತಡೆ ಅಭಿಯಾನ ಆರಂಭವಾಗಿದ್ದು, ಬೈಲಹೊಂಗಲ ಪುರಸಭೆಯ 27 ವಾರ್ಡ್‌ಗಳಲ್ಲಿ ರಸ್ತೆಗಳು ಹಾಳಾಗಿದ್ದು ದುರಸ್ಥಿ ಕಾರ್ಯ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಕಳಪೆ ಕಾಮಗಾರಿಯಿಂದ ಮಳೆಗೆ ರಸ್ತೆಗಳು ಹಾಳಾಗಿವೆ. ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮೇಲೆ ಕುಳಿತು ಸ್ಥಳೀಯ ‌ಮಹಿಳೆಯರು, ನಾಗರಿಕರಿಂದ ಪ್ರತಿಭಟನೆ ನಡೆಯುತ್ತಿದೆ. ರಸ್ತೆ ತಡೆಯಿಂದ ಟ್ರಾಫಿಕ್ ಸಮಸ್ಯೆಯಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.  

12:14 PM (IST) Jul 18

ಪೋಷಕರು ಗಾಬರಿಯಾಗಬೇಡಿ: ಬಾಂಬ್‌ ಬೆದರಿಕೆಗೆ ಡಿಕೆಶಿ ಪ್ರತಿಕ್ರಿಯೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಖಾಸಗಿ ಶಾಲೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಇಮೇಲ್‌ ಇಂದು ಮುಂಜಾನೆ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಇಂದು ಬೆಳಗ್ಗೆ ನಮ್ಮ ಶಾಲೆಯಲ್ಲಿ ಸ್ಟಾಫ್, ಪ್ರಿನ್ಸಿಪಲ್ ಎಲ್ಲ ಶಾಲೆಗೆ ಹೋಗಿದ್ದಾರೆ. ಆಗ ಬಾಂಬ್ ಇಟ್ಟಿರೋದಾಗಿ ಮೇಲ್ ಬಂದಿದೆ. ಬೆದರಿಕೆ ಬಗ್ಗೆ ತಕ್ಷಣ ನಮಗೆ ತಿಳಿಸಿದ್ರು. ಸ್ಕೂಲ್ ಕ್ಯಾಂಪಸ್ ನಲ್ಲಿ ಇರೋರನ್ನ ಶಿಪ್ಟ್ ಮಾಡಿದೆವು. ಕೂಡಲೆ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದೆವು. 70% ತಾಪಸಣೆ ಮಾಡಿದ್ದಾರೆ ಇನ್ನೂ, ತಪಾಸಣೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಗಾಬರಿ ಆಗೋದು ಬೇಡ. ನಮ್ಮಲ್ಲಿ ಹೈ ಸೆಕ್ಯೂರಿಟಿ ಇದೆ. ಪ್ರತಿ ಮೂಮೆಂಟ್ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಿದೆ. ನಿನ್ನೆ ಒಂದು ಎಗ್ಸಾಂ ಇತ್ತು. ಹಾಗಾಗಿ ಬೇರೆಯವರು ಬರಲಿಕ್ಕೆ ಅವಕಾಶ ನೀಡಲಾಗಿತ್ತು. ಸಮಸ್ಯೆ ಆಗೋದು ಬೇಡ ಅಂತ ಪೊಲೀಸರಿಗೆ ತಿಳಿಸಿದೆವು. ಅವರು ನಾವೇ ಎಲ್ಲಾ ನೋಡಿಕೊಳ್ಳೋದಾಗಿ ಹೇಳಿದ್ದಾರೆ. ಹಾಗಾಗಿ ನಾನು ತಡವಾಗಿ ಮತದಾನಕ್ಕೆ ಆಗಮಿಸಿದ್ದೇನೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.

11:55 AM (IST) Jul 18

ಮಳೆ ಕಡಿಮೆಯಾದರೆ ಶಿರಾಡಿ ಘಾಟ್‌ ಮತ್ತೆ ಸಂಚಾರಕ್ಕೆ ಮುಕ್ತ

ಕಳೆದೆರಡು ವಾರಗಳಿಂದ ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಹಿನ್ನೆಲೆ, ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ. ಜು.10 ರಿಂದ ಜು.16 ರವರೆಗೆ ವಾಡಿಕೆ ಮಳೆ 56 ಮಿಮಿ ಆಗಬೇಕಿತ್ತು, 170 ಮಿಮಿ ಮಳೆಯಾಗಿದೆ. ಶೇ.202 ರಷ್ಟು ಹೆಚ್ಚು ಮಳೆಯಾಗಿದೆ. ಅರಕಲಗೂಡು, ಹೊಳೆನರಸೀಪುರ, ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಜೂ.1 ರಿಂದ ಇಲ್ಲಿಯವರೆಗೂ 421 ಮನೆಗಳಿಗೆ ಹಾನಿಯಾಗಿದೆ. 28 ಮನೆಗಳು ಸಂಪೂರ್ಣ ಕುಸಿದಿದೆ, 218 ಮನೆಗಳಿಗೆ ಭಾಗಶಃ ಹಾನಿಯಾಗಿದೆ, 175 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಇವರೆಲ್ಲರಿಗೂ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಗಂಜಿ ಕೇಂದ್ರ ತೆರೆದಿಲ್ಲ. ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಿಗೆ ಹಾಳಾಗಿದೆ, ಅವುಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಎನ್‌ಎಚ್ 75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಎಲ್ಲಾ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಲಘು ವಾಹನಗಳನ್ನು ಚಾರ್ಮಡಿಘಾಟ್, ಸಂಪಾಜೆ ಮೂಲಕ ತೆರಳಲು ಸೂಚಿಸಿದ್ದೆವು. ಅದು ದೂರವಾಗುತ್ತಿರುವ ಕಾರಣ ನಿನ್ನೆ ಮತ್ತೆರಡು ಬದಲಿ ಮಾರ್ಗಗಳನ್ನು ಸೂಚಿಸಿದ್ದೇವೆ. ಕ್ಯಾನಹಳ್ಳಿ ಮೂಲಕ ಮತ್ತು ಕಾಡುಮನೆ ಮೂಲಕ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಮಳೆ ನಿರಂತರವಾಗಿ ಬರುತ್ತಿರುವುದರಿಂದ ದುರಸ್ತಿ ಕಾರ್ಯ ಕಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಶಿರಾಡಿ ಘಾಟ್ ಸಂಚಾರ ಆರಂಭಿಸುತ್ತೇವೆ. 224 ಹೆಕ್ಟೇರ್ ರಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯೂ ಹಾನಿಯಾಗುತ್ತಿದೆ. ಕಾಫಿ ಮಂಡಳಿ ಅಧಿಕಾರಿಗಳಿಗೆ ವರದಿ ಕೊಡಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. 

11:50 AM (IST) Jul 18

ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೇರಿಕೆ ಕುರಿತಂತೆ ಕೇಂದ್ರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಲು, ಮೊಸರು, ಮೊಟ್ಟೆ, ಮೀನು, ಮಂಡಕ್ಕಿ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಮಾಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಡವರ ಮೇಲೆ ಯುದ್ಧ ಸಾರಿದೆ. ಮೊದಲೇ ನಿರುದ್ಯೋಗದಿಂದ ಕುಟುಂಬದ ಆದಾಯ ಕಡಿಮೆಯಾಗಿದೆ, ಪೆಟ್ರೋಲ್‌ - ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಗಗನಕ್ಕೇರಿತ್ತು. ಇದೀಗ ಜಿಎಸ್‌ಟಿ ಹೇರಿಕೆ ಮಾಡುತ್ತಿವುದು ಬಡವರನ್ನು ಸುಲಿಗೆ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬ್ರಾಂಡೆಡ್‌ ಅಲ್ಲದ ಪ್ಯಾಕ್‌ ಮಾಡಲಾಗಿರುವ ಅಕ್ಕಿ, ಗೋಧಿ, ಹಾಲು ಮೊಸರು, ಮಜ್ಜಿಗೆಯಂತಹ ದಿನಬಳಕೆಯ ವಸ್ತುಗಳ ಮೇಲೆ ನರೇಂದ್ರ ಮೋದಿ ಸ್ಕಾರ ಜಿಎಸ್‌ಟಿ ಹೇರಿರುವುದು ಬ್ರಾಂಡೆಡ್‌ ಕಂಪೆನಿಗಳ ಒತ್ತಡಕ್ಕೆ ಮಣಿದು ಎನ್ನುವುದು ಸ್ಪಷ್ಟ. ತಮ್ಮದು ಸೂಟ್‌ ಬೂಟ್‌ ಸರ್ಕಾರ ಎನ್ನುವುದನ್ನು ಮತ್ತೆ ಮತ್ತೆ ಅವರು ಸಾಬೀತುಪಡಿಸುತ್ತಿದ್ದಾರೆ, ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 

11:42 AM (IST) Jul 18

ರೈತರಿಗೆ ಬೇಗ ಮಳೆಹಾನಿ ಪರಿಹಾರ ನೀಡುತ್ತೇವೆ: ಆರ್‌ ಅಶೋಕ್‌

ಕಂದಾಯ ಸಚಿವ ಆರ್ ಅಶೋಕ್ ಅತೀವೃಷ್ಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಶೀಘ್ರ ಬೆಳೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಈಗಾಗಾಲೇ ನಾನು ಕೂಡ ಡಿಸ್ಯಾಸ್ಟರ್ ಮ್ಯಾನೇಜ್ಮೆಂಟ್ ಜೊತೆ ಚರ್ಚೆ ಮಾಡಿದ್ದೇನೆ. ಬೆಳೆ ಹಾನಿ ಪ್ರದೇಶ, ಮಳೆ ಹಾನಿ ಪ್ರದೇಶಗಳಿಗೆ ಎಲ್ಲಾ ಮಂತ್ರಿಗಳು ಭೇಟಿ ನೀಡಿದ್ದಾರೆ. ಸಿಎಂ ಕೂಡ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದಾರೆ. ಈ ಬಾರಿ ರೈತರಿಗೆ ನಷ್ಟವಾದ ಬೆಳೆ‌ಹಾನಿ ಪರಿಹಾರ ಕೊಡಲಾಗುವುದು. ಡಬಲ್ ಬೆನಿಫಿಟ್ ಬರುವ ರೀತಿ ಪ್ಲಾನ್ ಆಗಿದೆ. ಕಂದಾಯ ಹೊಸ ಯೋಜನೆ ರೂಪಿಸಿದೆ. ಕಾಂಗ್ರೆಸ್ ಕಾಲದಲ್ಲಿ ಗಂಜಿ ಕೇಂದ್ರ ಅಂತ ಮಾಡಿದ್ರು, ಈಗ ಅದರ ಬದಲು ಕಾಳಜಿ ಕೇಂದ್ರ ಅಂತ ಮಾಡಿದ್ದೇವೆ. ಆಗ ಅನ್ನ ಸಾಂಬಾರ್ ಕೊಡ್ತಿದ್ರು, ಈಗ ಚಪಾತಿ, ಮೊಟ್ಟೆ ಸೇರಿದಂತೆ ಪೌಷ್ಟಿಕ ಆರೋಗ್ಯ ಊಟ ನೀಡುತ್ತಿದ್ದೇವೆ. ಮನೆಗೆ ಹೋದಾಗ ಏನು ಇರಲ್ಲ ನೆಂದು ಹೋಗಿರಲಿದೆ. ಹಾಗಾಗಿ ಅವರಿಗೆ ಹತ್ತು ದಿನಕ್ಕೆ ಆಗುವ ಕಿಟ್ ಕೊಡಲಾಗುವುದು. ಕಾಳಜಿ ಕೇಂದ್ರಕ್ಕೆ ಬರಲು ಹಿಂಜರಿಯುವವರು ನೆಂಟರ ಮೆನೆಗೆ ಹೋಗ್ತಾರೆ. ಅವರಿಗೂ ಕಿಟ್ ಕೊಡುತ್ತೇವೆ. ಇನ್ನೂ ಮಳೆ ನಿಂತಿಲ್ಲ. ಮಳೆ ಸಂಪೂರ್ಣ ನಿಂತ ಬಳಿಕ ಸಂಪೂರ್ಣ ಸಮೀಕ್ಷೆ ಮಾಡಿ ವರದಿ ನೀಡ್ತೀವಿ. ರಾಜ್ಯ ಸರ್ಕಾರ ಪರಿಹಾರ ಹಣ ಕೊಟ್ಟುಬಿಡ್ತೀವಿ. ಬಳಿಕ ಕೇಂದ್ರದಿಂದ ಬರುವ ಹಣ ನಾವು ಬಳಕೆ ಮಾಡಿಕೊಳ್ತೀವಿ. ಅಂದಾಜು ಎಷ್ಟು ನಷ್ಟ ಆಗಿದೆ ಅನ್ನೋದು ಗೊತ್ತಿಲ್ಲ. ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಅಶೋಕ್‌ ಹೇಳಿದ್ದಾರೆ. 

11:40 AM (IST) Jul 18

ದಿನನಿತ್ಯ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೇರಿಕೆ ವಿರುದ್ಧ ಸಿದ್ದು ಆಕ್ರೋಶ

ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಿದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಚ್ಚೇದಿನ್ ಅಂತಾ ಹೇಳಿಕೊಂಡು ಬಂದು ತೆರಿಗೆ ರೂಪದಲ್ಲಿ ಜನರ ರಕ್ತ ಕುಡೀತಾ ಇದಾರೆ ಎಂದು ಜಿಎಸ್‌ಟಿ ಏರಿಕೆ ಬಗೆಗೆ ಅಸಮಾಧಾನ ತೋರಿಸಿದರು. ಇವತ್ತಿನಿಂದ ಜಿಎಸ್ ಟಿ ಏರಿಕೆ ಮಾಡಿ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆ ಮಾಡಲಾಗಿದೆ. ಮೊಸರು, ಮಜ್ಜಿಗೆ, ಅಕ್ಕಿ, ಬೇಳೆ ಎಲ್ಲ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ಕೇಂದ್ರ ಸರ್ಕಾರ ಅಚ್ಚೇದಿನ್ ಆಯೇಂಗೆ ಅಂತಾ ಅಧಿಕಾರಕ್ಕೆ ಬಂದ್ರು. ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ರು. ದೇಶದ ಜನ ಒಳ್ಳೆ ದಿನ ಬರುತ್ತೆ ಅನ್ನೋ ಆಸೆಯಲ್ಲಿ ಮೋದಿಯವರನ್ನು ಅಧಿಕಾರಕ್ಕೆ ತಂದ್ರು.ಎಂಟು ವರ್ಷ ಗಳನ್ನು ನರೇಂದ್ರ ಮೋದಿ ಪೂರೈಸಿದ್ದಾರೆ. ಎಂಟು ವರ್ಷಗಳ ಸಂಭ್ರಮಾಚರಣೆ ಎಲ್ಲಾ ಕಡೆ ಮಾಡ್ತಾ ಇದ್ದಾರೆ. ಎಂಟು ವರ್ಷಗಳಲ್ಲಿ ಕರ್ನಾಟಕಕ್ಕೆ 1,29,766 ಕೋಟಿ ವಿವಿಧ ಯೋಜನೆಗಳಿಗೆ ಹಣ ಕೊಟ್ಟಿದ್ದೇವೆ ಅಂತಾ ಜಾಹೀರಾತು ಕೊಟ್ಟಿದ್ದಾರೆ. ಕರ್ನಾಟಕ ದಿಂದ ಎಂಟು ವರ್ಷ ಗಳಲ್ಲಿ ತೆರಿಗೆ ರೂಪದಲ್ಲಿ 19 ಲಕ್ಷ ಕೋಟಿ ವಸೂಲಾಗಿದೆ. ಕರ್ನಾಟಕ ಇಡೀ ದೇಶದಲ್ಲಿ ತೆರಿಗೆ ಕೊಡುವುದರಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇಷ್ಟು ತೆರಿಗೆ ತೆಗೆದುಕೊಂಡು, ಬಹಳ ದೊಡ್ದದಾಗಿ ಏನೋ ಕೊಟ್ಟಿದೀವಿ ಅಂತಾ ಜಾಹೀರಾತು ಕೊಡ್ತಾರಲ್ಲ. ಅಚ್ಚೇದಿನ್ ಅಂತಾ ಹೇಳಿಕೊಂಡು ಜನರಿಗೆ ದ್ರೋಹ ಮಾಡಿದಾರೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಪೆಟ್ರೋಲ್, ಕಬ್ಬಿಣ, ಸಿಮೆಂಟ್ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಾರೆ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

11:07 AM (IST) Jul 18

ದ್ರೌಪದಿ ಮುರ್ಮು ಗೆಲ್ಲುತ್ತಾರೆ: ಬೊಮ್ಮಾಯಿ ವಿಶ್ವಾಸ, ಮತ ಹೇಗೆ ಹಾಕಬೇಕು ಎಂದು ಸಿದ್ದು ಪಾಠ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ದ್ರೌಪದಿ ಮುರ್ಮುಗೆ ಬಹಳಷ್ಟು ಪಾರ್ಟಿಗಳ ಸಹಮತವಿದೆ. ಅನೇಕ ಪಾರ್ಟಿಗಳು ಬಹಿರಂಗ ಬೆಂಬಲ ನೀಡಿವೆ. ಮುರ್ಮು ಧಕ್ಷ ಆಡಳಿತಗಾರರು, ಬುಡಕಟ್ಟು ಸಮುದಾಯದ ಬಂದವರು ರಾಷ್ಟ್ರಪತಿ ಆಗೋದು ಪ್ರಜಾಪ್ರಭುತ್ವದ ವೈಶಿಷ್ಟ್ಯ. ಅತ್ಯಂತ ಹೆಚ್ಚಿನ ಮತದಿಂದ ದ್ರೌಪದಿ ಮುರ್ಮು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರಪತಿ ಚುನಾವಣೆಗೆ ಬಿರುಸಿನ ಮತದಾನವಾಗುತ್ತಿದ್ದು ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. 

ಹೇಗೆ ಮತ ಹಾಕಬೇಕು ಎಂದು ಸಿದ್ದು ಕ್ಲಾಸ್‌: ಸಿದ್ದರಾಮಯ್ಯ ಕಚೇರಿಗೆ ಡಾ. ಜಿ.ಪರಮೇಶ್ವರ್, ಯುಟಿ ಖಾದರ್ ಸೇರಿದಂತೆ ಕೆಲ ಶಾಸಕರು ಭೇಟಿ ನೀಡುತ್ತಿದ್ದು ಯಾವರೀತಿ ಮತದಾನ ಮಾಡಬೇಕು ಅಂತಾ ಶಾಸಕರಿಗೆ ಸಿದ್ದರಾಮಯ್ಯ ಹೇಳುತ್ತಿದ್ದರೆ. ಅವರು ಕೊಡುವ ಪೆನ್ನನ್ನೇ ಬಳಸಬೇಕು. ಯಶವಂತಸಿನ್ಹಾ ನಮ್ಮ ಅಭ್ಯರ್ಥಿ ಅವರಿಗೆ ಮತಹಾಕಬೇಕು ಎಂದು ಸಿದ್ದರಾಮಯ್ಯ ಸೂಚಿಸುತ್ತಿದ್ದಾರೆ. 

10:50 AM (IST) Jul 18

ನಕಲಿ ಬ್ರ್ಯಾಂಡ್ ಉತ್ಪನ್ನ: 3 ಆಟೋಮೊಬೈಲ್ ಶಾಪ್ಸ್ ಕ್ಲೋಸ್

ಬ್ರ್ಯಾಂಡ್ ಹೆಸ್ರಲ್ಲಿ ಸಾರ್ವಜನಿಕರಿಗೆ, ಪ್ರತಿಷ್ಠಿತ ಕಂಪನಿಗಳಿಗೆ ಮಹಾ ವಂಚನೆ. 3 ಆಟೊಮೊಬೈಲ್ಸ್ ಶಾಪ್‌ಗಳ ಬಾಗಿಲು ಮುಚ್ಚಿಸಿದ ಪೊಲೀಸರು.  ಪ್ರತಿಷ್ಠಿತ ಕಂಪನಿಗಳ ಹೆಸರು ಬಳಸಿ ಕೊಳ್ಳುತಿದ್ದ ಖತರ್ನಾಕ್ ಕಳ್ಳರು. ಟಿವಿಎಸ್, ಸುಝಕಿ, ಲುಕಾಸ್, ಟಿವಿಎಸ್ ಮೋಟಾರ್ಸ್ ಎಂಬ ದೊಡ್ಡ ಕಂಪನಿಗಳ ಲೋಗೊ ಕಾಪಿ. ಸುಮಾರು ವರ್ಷಗಳಿಂದ ಪ್ರತಿಷ್ಠಿತ ಕಂಪನಿಗಳಿಗೆ ಕೋಟಿಗಟ್ಟಲೆ ನಷ್ಟ. ಕಂಪನಿಗಳ ಹೆಸರು,ಲೋಗೋ ಇರುವ ಬಿಡಿಭಾಗಗಳನ್ನು ಮಾರಾಟ. ಬ್ರ್ಯಾಂಡ್ ನೇಮ್ ನಕಲಿ ಮಾಡಿ ಗ್ರಾಹಕರಿಗೆ ಮೋಸ. ಅಕ್ರಮವಾಗಿ ಬಿಡಿಭಾಗಗಳನ್ನು ಮಾರಾಟ ಮಾಡುತಿದ್ದ ಆರೋಪಿಗಳು. ಕಲಾಸಿಪಾಳ್ಯದ ಮಾಸಂತೋಷಿ,ಅರ್ಹಂ ,ಹರಿ ಅಟೋಮೊಬೈಲ್ಸ್ ಅಂಗಡಿಗಳಿಂದ ವಂಚನೆ. 25 ಲಕ್ಷಕ್ಕೂ ಬೆಲೆ ಬಾಳುವ 1500ಕ್ಕೂ ಹೆಚ್ಚು ನಕಲಿ ಬಿಡಿಭಾಗಗಳು ವಶಕ್ಕೆ. 3 ಶಾಪ್‌ಗಳ ಮಾಲೀಕರನ್ನ ಬಂಧಿಸಿದ ಕಲಾಸಿಪಾಳ್ಯದ ಪೊಲೀಸರು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

 

10:39 AM (IST) Jul 18

ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

ಕೆಪಿಸಿಸಿ ಮುಖ್ಯಸ್ಥ ಡಿ.ಕೆ.ಶಿವಕುಮಾರು ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಕರೆ. RR ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಶಾಲೆ. ಬೆಳಿಗ್ಗೆ ಶಾಲೆಗೆ ತೆರಳಿದ್ದ ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲಾ ಆಡಳಿತ ಮಂಡಳಿ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಪೊಲೀಸರಿಂದ ಪರಿಶೀಲನೆ. ಶಾಲೆಯ ಶಿಕ್ಷಕರು ಹಾಗೂ ಮಕ್ಕಳನ್ನ ಹೊರಗಡೆ ಕಳುಹಿಸಲಾಗಿದೆ. ಶಾಲೆಗೆ ಬಂದು ಮಕ್ಕಳನ್ನ ಮನೆಗೆ ಕರೆದುಕೊಂಡು ಹೋಗುತ್ತಿರುವ ಪೋಷಕರು. ಶಾಲೆಗೆ ರಜೆ‌ ನೀಡಿದ ಶಾಲಾ ಆಡಳಿತ ಮಂಡಳಿ. ಶಾಲೆಗೆ ಆರ್.ಆರ್.ನಗರ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಸಿಬ್ಬಂದಿ ಭೇಟಿ. ಮಕ್ಕಳು ಶಿಕ್ಷಕರನ್ನು ಹೊರಗಡೆ ಕಳಿಸುತ್ತಿರುವ ಪೊಲೀಸರು. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಹೀಗಾಗಿ ಶಾಲೆ ಪರಿಶೀಲನೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ತಂಡ, ಶ್ವಾನ ದಳ ಕೂಡ ಭೇಟಿ. ಸ್ಕೂಲ್ ಸಂಪೂರ್ಣ ಪರಿಶೀಲನೆ ನಡೆಸುತ್ತುರುವ ಪೊಲೀಸರು. ಆತಂಕಗೊಂಡಿರುವ ಶಿಕ್ಷಕರು ಹಾಗೂ ಮಕ್ಕಳು. ಸ್ಕೂಲ್ ಬಳಿಗೆ ತೆರಳುತ್ತಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ. ಸ್ಕೂಲ್ ಬಳಿ ಪರಿಶೀಲನೆ ನಡೆಸುತ್ತಿರುವ ಆರ್.ಆರ್.ನಗರ, ಜ್ಞಾನ ಭಾರತೀ ,ಬ್ಯಾಟರಾಯನಪುರ ಠಾಣೆಗಳ ಸಿಬ್ಬಂದಿ. ಸುತ್ತಮುತ್ತಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಕೂಲ್ ಬಳಿ ಪರಿಶೀಲನೆ.

 

10:28 AM (IST) Jul 18

ಬೆಳಗಾವಿ: ಮಹಾಮಳೆಯಿಂದ ಹಳದಿ ರೋಗಕ್ಕೆ ತುತ್ತಾದ ಹೆಸರು ಬೇಳೆ ಬೆಳೆ

ಬೆಳಗಾವಿ: ನಿರಂತರ ಮಳೆಯಿಂದ ಹೆಸರು ಬೇಳೆ ಬೆಳೆ ಹಳದಿ ರೋಗಕ್ಕೆ ತುತ್ತಾಗಿದೆ.  ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ಹೆಸರು ಬೆಳೆ ಹಳದಿ ರೋಗಕ್ಕೆ ತುತ್ತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವಾರ ಮಳೆ ಹಿನ್ನೆಲೆ, 
ರಾಮದುರ್ಗ ತಾಲೂಕಿನಲ್ಲಿ ಹೆಸರು ಬೇಳೆ ಬೆಳೆದ ರೈತರು ಸಂಕಷ್ಟಕ್ಕಿಡಾಗಿದ್ದಾರೆ.  

ಭೂಮಿಯಲ್ಲಿ ಅತಿಯಾದ ತೇವಾಂಶ, ಬಿತ್ತಿದ ಬೆಳೆಗೆ ಸೂರ್ಯನ ಕಿರಣ ತಾಕದ ಹಿನ್ನೆಲೆ ಹಳದಿ ರೋಗ, ಮನಿಹಾಳ ಗ್ರಾಮದ ರೈತ ಬಸನಗೌಡ ಪಾಟೀಲ್ ಬೆಳೆದ ಬೆಳೆ ರೋಗಕ್ಕೆ ತುತ್ತುತಾಗಿದೆ. ರೋಗಬಾಧೆಗೆ ರಾಮದುರ್ಗ ತಾಲೂಕಿನ ರೈತರು ಕಂಗಾಲಾಗಿದ್ದಾರೆ.  ಲಕ್ಷಾಂತರ ವೆಚ್ಚ ಮಾಡಿ ಬೆಳೆದ ಹೆಸರು ಬೆಳೆಗೆ ರೋಗ ಬಾಧೆ ಅಂಟಿದ್ದು ಹೆಸರು ಬೆಳೆದ ಗದ್ದೆಯಲ್ಲಿ ವಿಡಿಯೋ ಮಾಡಿ ಅಳಲು ರೈತ ತೋಡಿಕೊಂಡಿದ್ದಾರೆ.
 

10:11 AM (IST) Jul 18

ಶಿವಮೊಗ್ಗ: ತೋಟಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಸಾವು

ಶಿವಮೊಗ್ಗ (ಜು. 18): ತೋಟಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಸುಳುಗೋಡಿನಲ್ಲೊಂದು  ದುರ್ಘಟನೆ ನಡೆದಿದ್ದು  ತಡರಾತ್ರಿ ಮೃತದೇಹ ಪತ್ತೆಯಾಗಿದೆ.   ಭವಾನಿ ಶಂಕರ್ ನಾರಾಯಣ(52) ಮೃತ ರೈತ ಮಹಿಳೆ. ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಸುಳುಗೋಡು ಗ್ರಾಮದ ಬಾಳೆಹಿತ್ತಲು ಹಳ್ಳದಲ್ಲಿ ಭವಾನಿ ಜಾರಿ ಹೋಗಿ ಸಾವನ್ನಪ್ಪಿದ್ದಾರೆ.  

ಕುಟುಂಬದವರು ಎಷ್ಟೇ ಹುಡುಕಿದರೂ ತಡರಾತ್ರಿಯವರೆಗೂ ಸುಳಿವು ಸಿಕ್ಕಿರಲಿಲ್ಲ.  ತಡರಾತ್ರಿ ಹನ್ನೊಂದರ ಸಮಯಕ್ಕೆ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

09:53 AM (IST) Jul 18

ನಿರಂತರ ಮಳೆಯಿಂದ ಹಳದಿ ರೋಗಕ್ಕೆ ತುತ್ತಾದ ಹೆಸರು ಬೇಳೆ ಬೆಳೆ

ಬೆಳಗಾವಿಛ  ನಿರಂತರ ಮಳೆಯಿಂದ ಹಳದಿ ರೋಗಕ್ಕೆ ತುತ್ತಾದ ಹೆಸರು ಬೇಳೆ ಬೆಳೆ. ಮನಿಹಾಳ ಗ್ರಾಮದಲ್ಲಿ ಹೆಸರು ಬೆಳೆಗೆ ಹಳದಿ ರೋಗ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವಾರ ಮಳೆ ಹಿನ್ನೆಲೆ. ರಾಮದುರ್ಗ ತಾಲೂಕಿನಲ್ಲಿ ಹೆಸರು ಬೇಳೆ ಬೆಳೆದ ರೈತರಿಗೆ ಸಂಕಷ್ಟ. ಭೂಮಿಯಲ್ಲಿ ಅತಿಯಾದ ತೇವಾಂಶ, ಬಿತ್ತಿದ ಬೆಳೆಗೆ ಸೂರ್ಯನ ಕಿರಣ ತಾಕದ ಹಿನ್ನೆಲೆ ಹಳದಿ ರೋಗ. ಮನಿಹಾಳ ಗ್ರಾಮದ ರೈತ ಬಸನಗೌಡ ಪಾಟೀಲ್ ಬೆಳೆದ ಬೆಳೆ ರೋಗಕ್ಕೆ ತುತ್ತು. ರೋಗಬಾಧೆಗೆ ರಾಮದುರ್ಗ ತಾಲೂಕಿನ ರೈತರು ಕಂಗಾಲು. ಹೆಸರು ಬೆಳೆದ ಗದ್ದೆಯಲ್ಲಿ ವಿಡಿಯೋ ಮಾಡಿ ಅಳಲು ತೋಡಿಕೊಂಡ ರೈತ. ಲಕ್ಷಾಂತರ ವ್ಯಯಿಸಿ ಬೆಳೆದ ಹೆಸರು ಬೆಳೆಗೆ ಅಂಟಿದ ರೋಗ ಬಾಧೆ.

09:52 AM (IST) Jul 18

ಬೆಂಗಳೂರು: ಖಾಸಗಿ ಶಾಲೆಗೆ ಇ -ಮೇಲ್ ಬಾಂಬ್ ಬೆದರಿಕೆ

ಬೆಂಗಳೂರು (ಜು. 18): ಬೆಂಗಳೂರಿನಲ್ಲಿ ಖಾಸಗಿ ಸ್ಕೂಲ್ ಗೆ ಇ -ಮೇಲ್ ಬಾಂಬ್ ಬೆದರಿಕೆಹಾಕಲಾಗಿದೆ. ಆರ್.ಆರ್.ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಒಡೆತನದ  ನ್ಯಾಷನಲ್ ಎಲ್ .ಯು.ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು,  ಇ ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ  ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. 

ಶಾಲೆಗೆ ಆರ್.ಆರ್.ನಗರ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಸಿಬ್ಬಂದಿ ಭೇಟಿ ನಿಡಿದ್ದಾರೆ. ಪೊಲೀಸರ  ಮಕ್ಕಳು ಹಾಗೂ ಶಿಕ್ಷಕರನ್ನು ಹೊರಗಡೆ ಕಳಿಸುತ್ತಿದ್ದಾರೆ.  ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.  ಹೀಗಾಗಿ ಶಾಲೆ ಪರಿಶೀಲನೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ತಂಡ ,ಶ್ವಾನ ದಳ ಕೂಡ ಭೇಟಿ ಸ್ಥಳಕ್ಕೆ ಭೇಟಿ ನೀಡಿದೆ.  ಸ್ಕೂಲ್ ಸಂಪೂರ್ಣ ಪರಿಶೀಲನೆ ನಡೆಸುತ್ತಿರುವ ಪೊಲೀಸರು.  

09:48 AM (IST) Jul 18

ತೀರ್ಥಹಳ್ಳಿ: ತೋಟಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು  ಸಾವು..!

ತೀರ್ಥಹಳ್ಳಿ ಸುಳುಗೋಡಿನಲ್ಲೊಂದು  ದುರ್ಘಟನೆ. ತಡರಾತ್ರಿ ಮೃತದೇಹ ಪತ್ತೆ. ತೀರ್ಥಹಳ್ಳಿ ಅಸ್ಪತ್ರೆಗೆ ತಕ್ಷಣವೇ ರವಾನೆ.  ಭವಾನಿ ಶಂಕರ್ ನಾರಾಯಣ (52) ಎಂಬ ರೈತ  ಮಹಿಳೆ ಹಳ್ಳದಲ್ಲಿ ಕೊಚ್ಚಿಹೋಗಿ ಸಾವು.  ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಸುಳುಗೋಡು ಗ್ರಾಮದ ಬಾಳೆಹಿತ್ತಲು ಹಳ್ಳದಲ್ಲಿ ಜಾರಿ ಹೋಗಿದ್ದ ಭವಾನಿ. ಕುಟುಂಬದವರು ಎಷ್ಟೇ ಹುಡುಕಿದರೂ ತಡರಾತ್ರಿಯವರೆಗೂ ಸುಳಿವಿರಲಿಲ್ಲ. ತಡರಾತ್ರಿ ಹನ್ನೊಂದರ ಸಮಯಕ್ಕೆ ಹಳ್ಳದಲ್ಲಿ ಇವರ ಮೃತದೇಹ ಪತ್ತೆ. ತೀರ್ಥಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.

09:30 AM (IST) Jul 18

ಉತ್ತರಕನ್ನಡ: ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ: ಚಾಲಕ ಸಾವು

ಉತ್ತರಕನ್ನಡ (ಜು. 18): ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿಯಾಗಿದೆ.  ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಇನ್ನೋರ್ವರಿಗೆ ಗಂಭೀರ ಗಾಯಗಳಾಗಿವೆ. ಭಟ್ಕಳ ತಾಲೂಕಿನ ಬೆಳಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ‌ ರಾತ್ರಿ ಘಟನೆ ನಡೆದಿದೆ. ಗುತ್ತಿಗೆದಾರ ಜೋಸೆಫ್ ಕುಟ್ಟಿ (46) ಮೃತರು. ಪುತ್ರಿ ಅನು ಮರಿಯಾ (16)ಗೆ ಗಂಭೀರ ಗಾಯಗಳಾಗಿವೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಮೃತ ಜೋಸೆಫ್‌ರ ಮಗಳು ನೀಟ್ ಪರೀಕ್ಷೆಗೋಸ್ಕರ ಮಂಗಳೂರಿಗೆ ಹೋಗಿ ವಾಪಾಸಾಗುತ್ತಿದ್ದರು. ಭಾರೀ ಮಳೆಯ ‌ನಡುವೆ ಬೆಳಕೆ ಸೇತುವೆಯ ಹತ್ತಿರ ದನವೊಂದು ಕಾರಿಗೆ ಅಡ್ಡಬಂದಿತ್ತು. ದನಕ್ಕೆ ಡಿಕ್ಕಿಯಾಗುವುದು ತಪ್ಪಿಸಲು ಹೋಗಿ ಕಾರು ಚಾಲಕನ  ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿದೆ. 

ಘಟನೆಯಲ್ಲಿ ಕಾರಿನ ಚಾಲಕನ ಎಡಗೆನ್ನೆಗೆ ತೀವ್ರವಾಗಿ ಪೆಟ್ಟಾಗಿತ್ತು. ಸ್ಥಳೀಯರ ಸಹಾಯದಿಂದ ತಕ್ಷಣ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.  ಆದರೆ, ಆಸ್ಪತ್ರೆಗೆ ಸಾಗುವ ಮುನ್ನವೇ ಜೋಸೆಫ್ ಕೊನೆಯುಸಿರೆಳೆದಿದ್ದಾರೆ. 

09:17 AM (IST) Jul 18

ಮಂಗಳೂರು: ಮುಂದುವರೆದ ಮಳೆ‌ ಅಬ್ಬರ: ಹಲವೆಡೆ ಗುಡ್ಡ ಕುಸಿತ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ‌ ಅಬ್ಬರ ಮುಂದುವರೆದಿದ್ದು,  ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದೆ.  ಬಂಟ್ವಾಳದ ಹಳೇಗೇಟು, ವಗ್ಗ ಬಳಿ ಗುಡ್ಡ ಕುಸಿತವಾಗಿದ್ದು ರಸ್ತೆಗೆ ಬಂಡೆ ಮತ್ತು ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.  ಬ್ಯಾರಿಕೇಡ್ ಹಾಕಿ ಅರ್ಧ ರಸ್ತೆಯಲ್ಲಿ ಸಂಚಾರ ಮಾಡಲು ಅನುವು ಮಾಡಿ ಕೊಡಲಾಗಿದೆ. 

ಮಂಗಳೂರಿನಿಂದ ಚಾರ್ಮಾಡಿ ಘಾಟ್ ಸಂಚಾರಕ್ಕೆ ಬಳಸುವ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ.  ಶಿರಾಡಿ ಘಾಟ್ ಬಂದ್ ಆಗಿ ಹೆಚ್ಚು  ವಾಹನಗಳು ಈ ಮಾರ್ಗದಲ್ಲೇ ಬರುತ್ತಿದ್ದು, ಹೆದ್ದಾರಿಯಲ್ಲಿ ಇನ್ನು ಗುಡ್ಡಕುಸಿತದ ಆತಂಕವಿದೆ.  

08:34 AM (IST) Jul 18

ಕಾವೇರಿ, ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್, ಆರೋಪಿ ಅರೆಸ್ಟ್‌

ಕಾವೇರಿ ಹಾಗೂ ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೆ ಸಿ ದೀವಿನ್ ದೇವಯ್ಯ ಬಂಧಿಸಲಾಗಿದೆ. ಬಂಧಿತ ಆರೋಪಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ನಿವಾಯಾಗಿದ್ದಾನೆ. ನಕಲಿ ಫೇಸ್ ಬುಕ್ ಖಾತೆ ಮಾಡಿದ್ದ ಈತ ಮುಸ್ಲಿಂ ಯುವಕನ ಹೆಸರಲ್ಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಆದರೆ ಪೊಲೀಸ್‌ ತನಿಖೆಯಲ್ಲಿ ಕೊನೆಗೂ ಆರೋಪಿಯ ಕುತಂತ್ರ ಬಯಲಾಗಿದೆ. ಪ್ರಕರಣ ಸಂಭಂದ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪೋಸ್ಟ್‌ ವಿಚಾರವಾಗಿ ಹಲವು ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದವು. ಆದರೀಗ ಆರೋಪಿ ಬಂಧನ ಹಿನ್ನಲೆ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿವೆ. 
ಕೊಡಗು ಸೇರಿದಂತೆ ಪ್ರಕರಣ ಸಂಬಂದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

08:23 AM (IST) Jul 18

ಮಳೆಯಿಂದ ಪದೇಪದೇ ಮುಳುಗಡೆಯಾಗುವ ಸಂಪರ್ಕ ಸೇತುವೆ

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಸಾತ್ನಾಳಿ ಮಾಚಾಳಿ ಗ್ರಾಮದ ಸೇತುವೆಗಳು ಮಳೆಯಿಂದ ಪದೇಪದೇ ಮುಳುಗಡೆಯಾಗುತ್ತಿವೆ. ಬೇಸತ್ತ ಜನರು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಪಾಂಡ್ರಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಖಾನಾಪುರ ತಾಲೂಕಿನ ಸಾತ್ನಾಳಿ - ಮಾಚಾಳಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.

ಧಾರಾಕಾರ ಮಳೆಗೆ ಸೇತುವೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿದ್ದು, ಮುಳುಗಡೆಯಾದ ಸೇತುವೆ ಮೇಲೆಯೇ ಬೈಕ್ ಸವಾರರು ಸೇರಿ ಇತರರು ಸಂಚರಿಸಬೇಕಿದೆ. 'ಪ್ರತಿ ಬಾರಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸುತ್ತೇವೆ. 'ಎಂಎಲ್‌ಎ, ಎಂಪಿ ಸೇರಿ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. 'ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ತೊಂದರೆ ಆಗ್ತಿದೆ. 'ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೇ ವೈದ್ಯಕೀಯ ಸೌಲಭ್ಯನೂ ಸಿಗಲ್ಲ.ಹೀಗಾಗಿಬ ಸೇತುವೆ ಎತ್ತರ ಮಟ್ಟ ಹೆಚ್ಚಿಸಿ ನಿರ್ಮಿಸಿ ಅನುಕೂಲ ಮಾಡಿ' ಎಂದು ವಿಡಿಯೋ ಮೂಲಕ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. 


More Trending News